ಮಳೆಗಾಲದ ಪೂರ್ವ ತಯಾರಿ ಸರಿಯಾಗಿಲ್ಲದ ಕಾರಣ ಶಿರಸಿ ನಗರ ಕೆರೆಯ ಹಾಗಾಗಿದೆ. ಗಲ್ಲಿ ಗಲ್ಲಿಯಲ್ಲಿಯೂ ಮಳೆ ನೀರು ನಿಂತಿದ್ದು, ರಸ್ತೆ ಮೇಲಿನ ಸಂಚಾರಕ್ಕೆ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ.
ADVERTISEMENT
`ಮಳೆ ಬರುವ ಮುನ್ನ ಗಟಾರ ಸ್ವಚ್ಛಗೊಳಿಸಬೇಕು. ನೀರು ಸರಿಯಾಗಿ ಹೋಗುವಂತೆ ನೋಡಿಕೊಳ್ಳಬೇಕು’ ಎಂದು ಎಲ್ಲಾ ಸ್ಥಳೀಯ ಸಂಸ್ಥೆಯವರಿಗೂ ಜಿಲ್ಲಾಡಳಿತ ಸೂಚನೆ ನೀಡಿತ್ತು. ಆದರೆ, ಶಿರಸಿ ನಗರಸಭೆ ಅಧಿಕಾರಿಗಳು ಆ ಸೂಚನೆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅದರ ಪರಿಣಾಮ ಮಳೆ ಬಂದ ತಕ್ಷಣ ಶಿರಸಿ ನಗರ ಜಲಾವೃತವಾಗಿದ್ದು, ಜನ ತೊಂದರೆಗೆ ಸಿಲುಕಿದ್ದಾರೆ. ಇಲ್ಲಿನ ಅನೇಕ ಕಡೆ ಕಾರು-ಬೈಕು ಓಡಾಡುವ ಹಾಗಿಲ್ಲ. ಜೋರು ಮಳೆ ಮುಂದುವರೆದರೆ ಗಟಾರದ ಗಲೀಜು ನೀರು ಮನೆಗೆ ನುಗ್ಗಿದರೂ ಆಶ್ಚರ್ಯವಿಲ್ಲ.
ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026
ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್
ADVERTISEMENT
ಭಾನುವಾರ ಮಧ್ಯಾಹ್ನ 1 ಗಂಟೆಗೆ ಶಿರಸಿಯಲ್ಲಿ ಭಾರೀ ಪ್ರಮಾಣದ ಮಳೆ ಸುರಿದಿದೆ. ಆ ಮಳೆಗೆ ಇಡೀ ಶಿರಸಿ ನಗರ ನೀರಿನಿಂದ ತುಂಬಿದ್ದು, ತಗ್ಗು ಪ್ರದೇಶದ ಜನ ತೊಂದರೆಗೆ ಸಿಲುಕಿದ್ದಾರೆ. ಸುಮಾರು ಒಂದು ತಾಸು ಮಳೆ ಬಿದ್ದ ಪರಿಣಾಮ ಅನೇಕ ಬಡಾವಣೆಗಳು ಜಲಾವೃತಗೊಂಡಿದೆ. ರಸ್ತೆಗಳಲ್ಲಿ ನೀರು ನಿಂತ ಕಾರಣ ವಾಹನಗಳು ಮುಂದೆ ಸಾಗಲಾಗದೇ ಸಮಸ್ಯೆ ಅನುಭವಿಸಿವೆ. ಸಮೃದ್ಧಿ ನಗರದ ಚಂದ್ರ ಕಾಲೋನಿ, ದುಂಡಶಿ ನಗರ, ಮಂಜುನಾಥ ನಗರ, ಬನವಾಸಿ ರಸ್ತೆ ನೀರಿನಲ್ಲಿ ಮುಳುಗಿದೆ.
ಸಮೃದ್ಧಿ ನಗರದಲ್ಲಿರುವ ಚಂದ್ರ ಕಾಲೋನಿಯ ಮನೆಗಳಿಗೆ ನೀರು ನುಗ್ಗಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಮುಂದೆ ಹೋಗುತ್ತಿಲ್ಲ. ಹುತ್ಗಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಜುನಾಥ ನಗರದ ಮೂರನೇ ಅಡ್ಡರಸ್ತೆಯಲ್ಲೂ ಮಳೆಯ ನೀರು ಭರ್ತಿಯಾಗಿದೆ. ಬನವಾಸಿ ರಸ್ತೆ ಗೊಲಗೇರಿ ಓಣಿ ಕ್ರಾಸ್ ಭಾಗದಲ್ಲಿಯೂ ಅವೈಜ್ಞಾನಿಕ ಕಾಮಗಾರಿಗಳೆಲ್ಲವೂ ಮಳೆಗಾಲದಲ್ಲಿ ತೆರೆದುಕೊಂಡಿದೆ.