ಕಾರವಾರ ಕೋರ್ಟಿಗೆ ಅನಾಮದೇಯ ಇಮೇಲ್ ಬಂದಿದ್ದು, ಅದರಲ್ಲಿ ಬಾಂಬ್ ಸ್ಪೋಟದ ಬೆದರಿಕೆ ಒಡ್ಡಲಾಗಿದೆ. ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಿಬ್ಬಂದಿ ಇಮೇಲ್ ಸ್ವೀಕರಿಸಿ ಆತಂಕ್ಕೆ ಒಳಗಾಗಿದ್ದಾರೆ.
ಬಾಂಬ್ ಬೆದರಿಕೆ ಜೊತೆ ಇನ್ನಿತರ ಕೆಲ ವಿಷಯಗಳ ಬಗ್ಗೆಯೂ ಇಮೇಲ್ ಮೂಲಕ ಬರೆಯಲಾಗಿದೆ. ತಮಿಳುನಾಡಿನ ಪ್ರಮುಖ ರಾಜಕೀಯ ಮುಖಂಡ ಉದಯನಿಧಿ ಸ್ಟಾಲಿನ್ ಅವರನ್ನು ಬೆಂಬಲಿಸುವ ಚೆನೈ ಪತ್ರಕರ್ತರ ಕುರಿತು ಬಾಂಬ್ ಸ್ಪೋಟದ ಸಂದೇಶದಲ್ಲಿ ಬರೆಯಲಾಗಿದೆ. ಉದಯನಿಧಿ ಸ್ಟಾಲಿನ್ ಅವರಿಗೆ ಸಂಬAಧಿಸಿದ ಈ ಆರೋಪಗಳ ಕುರಿತು ಇದುವರೆಗೆ ಯಾವುದೇ ಪ್ರಕರಣ ದಾಖಲಿಸದ ಬಗ್ಗೆ ಉಲ್ಲೇಖಿಸಲಾಗಿದೆ. ಉದಯನಿಧಿ ಸ್ಟಾಲಿನ್ ಹಾಗೂ ಕಾರವಾರ ಕೋರ್ಟಿಗೆ ಯಾವ ಸಂಬAಧವಿಲ್ಲದಿದ್ದರೂ ಈ ಸಂದೇಶ ಬಂದಿರುವುದು ಏತಕೆ? ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ಬೆದರಿಕೆ ಇ-ಮೇಲ್ ಬಂದಿರುವ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಕಾರವಾರ ಪೊಲೀಸರು ಜಿಲ್ಲಾ ನ್ಯಾಯಾಲಯ ಪರಿಶೀಲನೆ ಮಾಡಿದ್ದಾರೆ. ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿ ಇಡೀ ನ್ಯಾಯಾಲಯದ ಆವರಣವನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದ್ದಾರೆ. ಆದರೆ, ಯಾವುದೇ ಬಾಂಬ್ ಸಿಕ್ಕಿಲ್ಲ. ಇ-ಮೇಲ್ ಬೆದರಿಕೆಯ ಮೂಲ ಮತ್ತು ಅದರ ಹಿಂದಿರುವವರ ಪತ್ತೆಗಾಗಿ ಶೋಧ ನಡೆದಿದೆ.