ಶಿರಸಿ ಶಿಂಗನಮನೆಯ ಪರಮೇಶ್ವರ ನಾಯ್ಕ ಅವರು ಅತ್ತಿಗೆ ಜೊತೆ ಅಕ್ರಮ ಸಂಬoಧಹೊoದಿದ್ದು, ಅದರ ಪರಿಣಾಮ ಸಹೋದರನಿಂದಲೇ ಕೊಲೆಯಾಗಿದ್ದಾರೆ. ಈ ದಿನ ಬೆಳಗ್ಗೆ ಶಿಂಗನಮನೆ ಕಾಡಿನಲ್ಲಿ ಪರಮೇಶ್ವರ ನಾಯ್ಕ ಅವರ ಶವ ದೊರೆತಿದ್ದು, ಪೊಲೀಸರು ಆರೋಪಿತರನ್ನು ಬಂಧಿಸಿದ್ದಾರೆ.
2026ರ ಜೂನ್ 25ರ ಸಂಜೆ 112ಗೆ ಫೋನ್ ಒಂದು ಬಂದಿತ್ತು. ಇಡ್ತಳ್ಳಿ ಬಳಿಯ ಶಿಂಗನಮನೆಯ ಪರಮೇಶ್ವರ ಬಾಬು ನಾಯ್ಕ (35) ಎಂಬಾತರು ಕಾಣೆಯಾದ ಬಗ್ಗೆ ಫೋನಿನಲ್ಲಿ ವಿವರಿಸಲಾಗಿತ್ತು. 112 ಸಹಾಯವಾಣಿಯ ಪೊಲೀಸರ ಜೊತೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಹುಡುಕಾಟ ನಡೆಸಿದ್ದರು. ಜೂನ್ 26ರ ಬೆಳಗ್ಗೆ ಶಿಂಗನಮನೆಯ ಪರಮೇಶ್ವರ ನಾಯ್ಕ ಅವರ ಮನೆಯಿಂದ 200ಮೀಟರ್ ದೂರದ ಕಾಡಿನಲ್ಲಿ ಶವ ಸಿಕ್ಕಿತ್ತು. ಕುಟುಂಬದವರು ಅದು ಪರಮೇಶ್ವರ ನಾಯ್ಕ ಅವರದ್ದೇ ಶವ ಎಂದು ಗುರುತಿಸಿದ್ದರು.
ಪರಮೇಶ್ವರ ಬಾಬು ನಾಯ್ಕ ಅವರಿಗೆ ಮದುವೆ ಆಗಿ ಎರಡು ಮಕ್ಕಳಿದ್ದರು. ಅದಾಗಿಯೂ, ಪರಮೇಶ್ವರ ನಾಯ್ಕ ಅವರು ಪರ ಸ್ತ್ರೀ ಮೇಲೆ ಕಣ್ಣು ಹಾಕಿದ್ದರು. ತನ್ನದೇ ಹೆಸರಿನವನಾದ ದೊಡ್ಡಪ್ಪನ ಮಗನಾದ ಪರಮೇಶ್ವರ ನಾಯ್ಕ ಅವರ ಪತ್ನಿ ಜೊತೆ ಪರಮೇಶ್ವರ ಬಾಬು ನಾಯ್ಕ ಅವರು ಅಕ್ರಮ ಸಂಬoಧಹೊoದಿದ್ದರು. ಕಳೆದ ಎಂಟು ವರ್ಷಗಳಿಂದಲೂ ಅತ್ತಿಗೆ ಜೊತೆ ಅವರು ಸರಸ-ಸಲ್ಲಾಪದಲ್ಲಿ ತೊಡಗಿದ್ದರು. ಈ ವಿಷಯವಾಗಿ ಕುಟುಂಬದದ ನಡುವೆ ಸಾಕಷ್ಟು ಬಾರಿ ಕಲಹವೂ ನಡೆದಿತ್ತು. ಆದರೆ, ಸಂಸಾರ ಮಾತ್ರ ಸರಿ ದಾರಿಗೆ ಬಂದಿರಲಿಲ್ಲ.
ಜೂನ್ 25ರ ಸಂಜೆ 7.45ಕ್ಕೆ ಪರಮೇಶ್ವರ ಬಾಬು ನಾಯ್ಕ ಅವರಿಗೆ ಫೋನ್ ಒಂದು ಬಂದಿತು. ಆ ಫೋನಿನಲ್ಲಿ ಮಾತನಾಡುತ್ತ ಹೊರಗೆ ಹೋಗಿದ್ದ ಅವರು ರಾತ್ರಿಯಾದರೂ ಮನೆಗೆ ಮರಳಿರಲಿಲ್ಲ. ಮರುದಿನ ಬೆಳಗ್ಗೆ ಅವರು ಶವವಾಗಿ ಕಾಣಿಸಿದ್ದು, ವಿವಿಧ ಆಯಾಮದಲ್ಲಿ ತನಿಖೆ ನಡೆಸಿದ ಪೊಲೀಸರು ಅಕ್ರಮ ಸಂಬoಧದಿoದ ಸಾವನಪ್ಪಿರುವುದನ್ನು ಕಂಡುಹಿಡಿದರು. ಬೆರಳಚ್ಚು ತಜ್ಞರ ಜೊತೆ ಶ್ವಾನದಳವೂ ಸ್ಥಳಕ್ಕೆ ಆಗಮಿಸಿ ಆರೋಪಿತರನ್ನು ಗುರುತಿಸಿತು. ಸದ್ಯ ಆರೋಪಿ ಹಾಗೂ ಪ್ರಕರಣದಲ್ಲಿ ಭಾಗಿಯಾದವರನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ವಿಚಾರಣೆ ಮುಂದುವರೆದಿದೆ.