`ಸಮಾಜದಲ್ಲಿರುವ ಮೌಡ್ಯತೆ ಮತ್ತು ಶೋಷಣೆ ವಿರುದ್ಧ ಪ್ರತಿಯೊಬ್ಬರು ಜಾಗೃತರಾಗಿರಬೇಕು’ ಎಂದು ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕರಾದ ತೋಳಿ ಭರಮಣ್ಣ ಅವರು ಹೇಳಿದ್ದಾರೆ. ಶಿರಸಿಯ ಅಕ್ಷಯ್ ಗಾರ್ಡನ್ ಸಭಾಭವನದಲ್ಲಿ ನಡೆದ ಶಿಬಿರದಲ್ಲಿ ಅವರು ಮಾತನಾಡಿದ್ದು, `ಶಿಕ್ಷಣ ಜ್ಞಾನದಿಂದ ವಂಚಿತ ಹಕ್ಕಿಗಾಗಿ ಸಂವಿಧಾನ ಭದ್ದ ಹೋರಾಟಕ್ಕೆ ಸಜ್ಜಾಗಬೇಕು’ ಎಂದು ಕರೆ ನೀಡಿದ್ದಾರೆ.
`ಶಿಕ್ಷಣದಿಂದ ಕುಟಂಬದ ಸಾಕ್ಷರತಾ ಪ್ರಮಾಣ ಹೆಚ್ಚುವುದರಿಂದ ಸಮಾಜದಲ್ಲಿ ಶೋಷಣೆ ಪ್ರಮಾಣ ಕಡಿಮೆ ಆಗುತ್ತದೆ. ಜನಪರ ಹೋರಾಟ , ಜನಪರ ಚಿಂತನೆ, ಶೋಷಿತ ವರ್ಗದ ಮತ್ತು ಸಾಮಾಜಿಕ ಅಭಿವೃದ್ದಿ ದಿಸೆಯಲ್ಲಿ ಮಾನವ ಬಂಧುತ್ವ ವೇದಿಕೆಯು ರಾಜ್ಯಾದ್ಯಂತ ಒಂದು ದಶಕಕ್ಕಿಂತ ಹೆಚ್ಚು ಕಾಲದಿಂದ ಕಾರ್ಯ ಮಾಡುತ್ತಿದೆ’ ಎಂದವರು ವಿವರಿಸಿದ್ದಾರೆ. `ಜಾತಿ ಜಾತಿಗಳಲ್ಲಿ, ಧರ್ಮ ಧರ್ಮಗಳಲ್ಲಿ ಸಾಮರಸ್ಯ ಹೆಚ್ಚಾಗಬೇಕು, ಹಕ್ಕಿನಿಂದ ವಂಚಿತರಾದ ಸಮಾಜವು ಸಂವಿಧಾನದ ಅಡಿಯಲ್ಲಿ ಹಕ್ಕಿಗಾಗಿ ಹೋರಾಟದ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು’ ಎಂದವರು ಹೇಳಿದ್ದಾರೆ.
ಕೈಗಾ ಅಣು ವಿದ್ಯುತ್ ಘಟಕದ ನಿವೃತ್ತ ಅಧಿಕಾರಿ ಸುಭಾಷ್ ಕಾನಡೆ ಅವರು ಕಾರ್ಯಕ್ರಮದಲ್ಲಿದ್ದರು. ಮಾನವ ಭಂದುತ್ವ ವೇದಿಕೆಯ ಅಧ್ಯಕ್ಷತೆಯನ್ನು ರಾಜೇಶ್ ಮಿತ್ರ ನಾಯ್ಕ ತೆಂಗಿನಕೇರಿ ಅಧ್ಯಕ್ಷತೆವಹಿಸಿದರು, ಪ್ರಮುಖರಾದ ಮಹಭಲೇಶ್ವರ ನಾಯ್ಕ, ರಾಜು ನರೇಬೈಲ ಶಿರಸಿ, ಮಂಜುನಾಥ ಮರಾಠಿ ನಾಗೂರು ಕುಮಟಾ, ಚಂದ್ರು ಪೂಜಾರಿ ಯಲ್ಲಾಪುರ ಅರವಿಂದ ಗೌಡ ಅಂಕೋಲ, ಮಹೇಶ ಕಾನಕಿ ಹೊನ್ನಾವರ , ಮಹೇಶ ಮುಂಡಗೋಡ, ಇಬ್ರಾಹೀಂ ಗೌಡಳ್ಳಿ, ನೆಹರು ನಾಯ್ಕ, ಶಂಕರ್ ಹಳ್ಕರ್ ಇತರರು ವೇದಿಕೆಯಲ್ಲಿದ್ದರು. ಹಿರಿಯ ಚಿಂತಕ ಬಾಲಚಂದ್ರ ಶೆಟ್ಟಿ ಕುಂಟಕಣಿ, ಪೆದ್ರು ಸಿದ್ದಿ ಮಂಚಿಕೇರಿ, ರಾಘು ಕುಣಬಿ ಮಳವಳ್ಳಿ, ಸಂಕೇತ ನಾಯ್ಕ ಹಲಗೇರಿ, ಕಿರಣ ಮರಾಠಿ ದೇವನಳ್ಳಿ, ರೇಣುಕಾ ಪಟಗಾರ ,ಹರೀಶ್ ಕಂಡ್ರಾಜಿ, ಅನಂತ ಗೌಡ, ನಾಗರಾಜ ಮುಕ್ರಿ ಮೊದಲಾದವರು ಮಾತನಾಡಿದರು.
ಮಾನವ ಬಂಧುತ್ವ ವೇದಿಕೆ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರದಲ್ಲಿ ಸಾಮಾಜಿಕ , ಶೈಕ್ಷಣಿಕ, ಆರ್ಥಿಕ ಅಭಿವೃದ್ದಿಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಪರಿಶಿಷ್ಟ ಪಂಗಡದಿAದ ವಂಚಿತರಾದ ಹಾಲಕ್ಕಿ ಮತ್ತು ಕುಣಬಿ ಸಮಾಜ ಗುಡ್ಡಗಾಡು ,ಅರಣ್ಯ ಪ್ರದೇಶದಲ್ಲಿನ ಆರೋಗ್ಯ ಸಮಸ್ಯೆ, ಒಳ ಮೀಸಲಾತಿ, ಜಿಲ್ಲೆಯಲ್ಲಿ ಮಲ್ಟಿ ಸ್ಪೇಷಲೀಸ್ಟ ಆಸ್ಪತ್ರೆ, ಕಾಲುಸಂಕ, ಭೂಮಿ ಹಕ್ಕಿನ ಸಮಸ್ಯೆ, ರಾಜಕೀಯ ಮೀಸಲಾತಿಯಿಂದ ವಂಚಿತಾದ ಕುಂಬ್ರಿ ಮರಾಠಿ ಸಮಾಜದ ಕುರಿತು ಚರ್ಚೆ ನಡೆಯಿತು.