ಪಿತ್ರಾರ್ಜಿತ ಆಸ್ತಿಯಲ್ಲಿದ್ದ ತೆಂಗಿನ ಮರ ಗೋಕರ್ಣ ಬಳಿಯ ದೇವರಬಾವಿಯಲ್ಲಿ ಕುಟುಂಬ ಕಲಹಕ್ಕೆ ಕಾರಣವಾಗಿದೆ. ತೆಂಗಿನ ಕಾಯಿ ಕೊಯ್ಯುವ ವಿಚಾರಕ್ಕೆ ರಾಮಾ ಭಂಡಾರಿ ಹಾಗೂ ಶಿವಾನಂದ ಹೊಸ್ಕಟ್ಟಾ ಕಚ್ಚಾಟ ನಡೆಸಿದ್ದು, ಅದು ಹೊಡೆದಾಟದ ಸ್ವರೂಪಪಡೆದಿದೆ.
ADVERTISEMENT
ಗೋಕರ್ಣ ಬಳಿಯ ತೊರ್ಕೆ ದೇವರಬಾವಿಯಲ್ಲಿ ರಾಮಾ ಪರಮೇಶ್ವರ ಭಂಡಾರಿ ಅವರು ವಾಸವಾಗಿದ್ದಾರೆ. ಅವರು ಚಾಲಕರಾಗಿ ಜೀವನ ನಡೆಸುತ್ತಿದ್ದಾರೆ. ರಾಮಾ ಪರಮೇಶ್ವರ ಭಂಡಾರಿ ಅವರ ಅಕ್ಕನ ಹೆಸರಿನಲ್ಲಿರುವ ಭೂಮಿಯಲ್ಲಿ ತೆಂಗಿನ ಮರವಿದ್ದು, ಜೂನ್ 7ರಂದು ರಾಮಾ ಭಂಡಾರಿ ಅವರು ಅಕ್ಕನ ಅಳಿಯ ವಿಲ್ಸನ್ ಡಿಸೋಜಾ ಅವರ ಜೊತೆ ಸೇರಿ ಕಾಯಿ ಕೊಯ್ಯಲು ಹೋಗಿದ್ದಾರೆ. ಆಗ, ಅಲ್ಲಿಗೆ ಬಂದ ಶಿವಾನಂದ ಗಜಾನನ ಹೊಸ್ಕಟ್ಟಾ ಹಾಗೂ ಅವರ ಪತ್ನಿ ಮಕ್ಕಳು `ಈ ಮರದ ಮೇಲೆ ನಿಮಗೆ ಹಕ್ಕಿಲ್ಲ’ ಎಂದಿದ್ದಾರೆ.
ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026
ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್
ADVERTISEMENT
ತೆAಗಿನ ಮರದ ಹಕ್ಕಿನ ವಿಷಯವಾಗಿ ಆಗ ಜಗಳ ನಡೆದಿದ್ದು, ಅದು ಹೊಡೆದಾಟಕ್ಕೆ ಕಾರಣವಾಗಿದೆ. ಶಿವಾನಂದ ಹೊಸ್ಕಟ್ಟಾ ಅವರು ಕಲ್ಲು ಹಾಗೂ ಮಡಿಲಿನ ಹೆಡೆಯಿಂದ ರಾಮಾ ಭಂಡಾರಿ ಅವರಿಗೆ ಹೊಡೆದಿದ್ದಾರೆ. ಈ ವೇಳೆ ರಾಮಾ ಭಂಡಾರಿ ಅವರ ಅಣ್ಣ ತಪ್ಪಿಸಲು ಬಂದಿದ್ದು, ಅವರ ಮೇಲೆಯೂ ಹಲ್ಲೆ ನಡೆದಿದೆ. ದೂರು ನೀಡಲು ಪೊಲೀಸ್ ಠಾಣೆಗೆ ಹೊರಟಿದ್ದ ರಾಮಾ ಭಂಡಾರಿ ಅವರನ್ನು ಮತ್ತೆ ತಡೆದ ಶಿವಾನಂದ ಹೊಸ್ಕಟ್ಟಾ ಅವರು ಇನ್ನಷ್ಟು ಥಳಿಸಿದ್ದಾರೆ. ಅದಾಗಿಯೂ ಅವರ ವಿರುದ್ಧ ರಾಮಾ ಭಂಡಾರಿ ಅವರು ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.