ಕುಮಟಾ ಮಾರುತಿ ಶೋರೂಮಿನಲ್ಲಿ ಕೆಲಸ ಮಾಡುವ ರಮೇಶ ನಾಯ್ಕ, ಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡುವ ಗಜಾನನ ನಾಯ್ಕ, ಅಳ್ವೆಕೊಡಿಯ ಸಂತೋಷ ನಾಯ್ಕ, ಅದೇ ಊರಿನ ಜನಾರ್ಧನ ನಾಯ್ಕ ಹಾಗೂ ನಾಯ್ಕ ಸ್ಟೀಲ್ ಬಳಿ ಕೂಲಿ ಕೆಲಸ ಮಾಡುವ ನಾಗೇಂದ್ರ ಪಟಗಾರ ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ. ದೇವಗುಂಡಿ ಬಳಿ ವಾಸವಾಗಿರುವ ಹರಿಶ್ಚಂದ್ರ ಪಟಗಾರ, ಅಳ್ವೆಕೊಡಿಯ ಇಲೆಕ್ಟಿçಶಿಯನ್ ವೆಂಕಟೇಶ ನಾಯ್ಕ, ಅದೇ ಭಾಗದ ಕೂಲಿ ಕಾರ್ಮಿಕರಾದ ರಾಜೇಶ ನಾಯ್ಕ ಹಾಗೂ ಪಾಂಡುರoಗ ಗಾವಡಿ ಸಿಕ್ಕಿ ಬಿದ್ದಿದ್ದಾರೆ.
ದೇವಗುಂಡಿಯ ಬಳಿ ವಾಸವಾಗಿರುವ ಅಳ್ವೆಕೊಡಿಯ ಹರಿಶ್ಚಂದ್ರ ಈಶ್ವರ ಪಟಗಾರ ಅವರು ಜೂನ್ 17ರಂದು ತಮ್ಮ ಸ್ನೇಹಿತರನ್ನು ಜೂಜಾಟಕ್ಕೆ ಆಮಂತ್ರಿಸಿದ್ದರು. ಆ ದಿನ ರಾತ್ರಿ ಅಳ್ವೆಕೊಡಿ ಗ್ರಾಮದ ವಿದ್ಯಾನಗರದ ಬಳಿ ಎಲ್ಲರೂ ಸೇರಿದ್ದರು. ಅಳ್ವೆಕೊಡಿಯ ಸಂತೋಷ ನಾಯ್ಕ, ಅಳ್ವೆಕೊಡಿ ಚರ್ಚ ಬಳಿಯ ಇಲೆಕ್ಟಿçಶಿಯನ್ ವೆಂಕಟೇಶ ಮಾಸ್ತಿ ನಾಯ್ಕ, ಅಳ್ವೆಕೊಡಿಯ ಕೂಲಿ ಕಾರ್ಮಿಕ ರಾಜೇಶ ಗಣಪತಿ ನಾಯ್ಕ, ಅದೇ ಊರಿನ ಪಾಂಡುರAಗ ನಾಗಪ್ಪ ಗಾವಡಿ, ಜನಾರ್ಧನ ಮಾಧವ ನಾಯ್ಕ (ಜಾನು), ಮಾರುತಿ ಶೋರೂಮಿನಲ್ಲಿ ಕೆಲಸ ಮಾಡುವ ರಮೇಶ ನಾಯ್ಕ, ಎಪಿಎಂಸಿಯಲ್ಲಿ ಹಮಾಲಿ ಮಾಡುವ ಗಜಾನನ ರಾಮಾ ನಾಯ್ಕ, ನಾಯ್ಕ ಸ್ಟೀಲ್ ಬಳಿ ಕೂಲಿ ಕೆಲಸ ಮಾಡುವ ನಾಗೇಂದ್ರ ಈಶ್ವರ ಪಟಗಾರ ಸೇರಿ ಅಲ್ಲಿ ಅಂದರ್ ಬಾಹರ್ ಆಟ ಶುರು ಮಾಡಿದ್ದರು. ರಾತ್ರಿ 11 ಗಂಟೆ ಕಳೆದರೂ ಅವರ ಆಟಕ್ಕೆ ಕಡಿವಾಣ ಬಿದ್ದಿರಲಿಲ್ಲ.
Advertisement. Scroll to continue reading.
ಈ ಜೂಜಾಟ ನೋಡಿದ ವ್ಯಕ್ತಿಯೊಬ್ಬರು ಪಿಸೈ ರವಿ ಗುಡಿ ಅವರಿಗೆ ಫೋನ್ ಮಾಡಿದರು. ಪೊಲೀಸರು ವಿಶೇಷ ತಂಡದ ಜೊತೆ ಅಲ್ಲಿ ಹಾಜರಾದರು. ಪೊಲೀಸರನ್ನು ನೋಡಿದ ರಮೇಶ ನಾಯ್ಕ, ಗಜಾನನ ನಾಯ್ಕ, ಸಂತೋಷ ನಾಯ್ಕ, ಜನಾರ್ಧನ ನಾಯ್ಕ ಹಾಗೂ ನಾಗೇಂದ್ರ ಪಟಗಾರ ಓಡಿ ಪರಾರಿಯಾದರು. ಹರಿಶ್ಚಂದ್ರ ಪಟಗಾರ, ವೆಂಕಟೇಶ ನಾಯ್ಕ, ರಾಜೇಶ ನಾಯ್ಕ, ಪಾಂಡುರAಗ ಗಾವಡಿ ಅವರು ಪೊಲೀಸರ ಬಳಿ ಸಿಕ್ಕಿಬಿದ್ದರು. ಸಿಕ್ಕಿಬಿದ್ದ ಅವರೆಲ್ಲರೂ ಓಡಿ ಹೋದವರ ಹೆಸರನ್ನು ಪೊಲೀಸರ ಮುಂದೆ ಬಾಯ್ಬಿಟ್ಟರು. ಅಂದರ್ ಬಾಹರ್ ಆಟಕ್ಕೆ ಬಳಸಿದ್ದ 5080ರೂ ಹಣ ಹಾಗೂ ಇನ್ನಿತರ ಪರಿಕ್ಕರಗಳನ್ನು ಪೊಲೀಸರು ಜಪ್ತು ಮಾಡಿದರು. ಓಡಿ ಹೋದವರ ಹೆಸರನ್ನು ಸೇರಿಸಿ ಕಾನೂನು ಕ್ರಮ ಜರುಗಿಸಿದರು.