ರಾತ್ರಿ ಊಟ ಮಾಡದೇ ಸರಾಯಿ ಮಾತ್ರ ಕುಡಿದು ಮಲಗಿದ ಜೊಯಿಡಾದ ರಾಮದಾಸ ವೇಳಿಪ್ ಅವರು ಸ್ಮಶಾನ ಸೇರಿದ್ದಾರೆ. ಬೆಳಗ್ಗೆ 11 ಗಂಟೆ ಅದರೂ ನಿದ್ದೆಯಿಂದ ಏಳದ ಅವರನ್ನು ಎಬ್ಬಿಸುವ ಪ್ರಯತ್ನ ಮಾಡಿದಾಗ ಸಾವನಪ್ಪಿರುವುದು ಗೊತ್ತಾಗಿದೆ.
ಜೊಯಿಡಾದ ಅಮೃತಪಾಲಿಯಲ್ಲಿ ರಾಮದಾಸ ಕೃಷ್ಣ ವೇಳಿಪ (50) ಅವರು ವಾಸವಾಗಿದ್ದರು. ಜೂನ್ 14ರಂದು ಬೆಳಗ್ಗೆ ಎದ್ದ ತಕ್ಷಣ ಅವರು ಸರಾಯಿ ಸೇವಿಸಿದ್ದರು. ಸಂಜೆ ಮತ್ತೆ ಅವರು ಸರಾಯಿ ಸೇವಿಸಿ ಹಾಗೇ ಮಲಗಿದ್ದರು. ಮನೆಯವರು ಊಟಕ್ಕೆ ಕರೆದರೂ ಬಾರದೇ ಅವರು ಮನೆ ಪಕ್ಕದ ಕೋಣೆಗೆ ಹೋಗಿ ನಿದ್ರಿಸಿದ್ದರು. ಆದರೆ, ಮರುದಿನ ಬೆಳಗ್ಗೆ ಅವರು ಏಳುವ ಸ್ಥಿತಿಯಲ್ಲಿರಲಿಲ್ಲ.
ನಿತ್ಯ ಬೆಳಗ್ಗೆ ಬೇಗ ಏಳುವ ರಾಮದಾಸ ವೇಳಿಪ ಅವರು ಆ ದಿನ ಬೆಳಗ್ಗೆ 11 ಗಂಟೆ ಆದರೂ ಏಳಲಿಲ್ಲ. ಬೆಳಗ್ಗೆ 8 ಗಂಟೆಗೆ ರಾಮದಾಸ ಅವರ ಪತ್ನಿ ರೇಶನ್ ತರಲು ಜೊಯಿಡಾ ಸೊಸೈಟಿಗೆ ಹೊಗಿದ್ದು, ಮನೆಗೆ ಮರಳಿದ ನಂತರ ಪತಿಯನ್ನು ಏಳಿಸುವ ಪ್ರಯತ್ನ ಮಾಡಿದರು. ಆಗ, ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಮಗ ನಿಲೇಶ ವೇಳಿಪ ಅವರನ್ನು ಕರೆದರು. ತಕ್ಷಣ ರಾಮದಾಸ ವೇಳಿಪ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ವೈದ್ಯರು ಅವರು ಸಾವನಪ್ಪಿರುವ ವಿಷಯ ತಿಳಿಸಿದರು. ಸರಾಯಿ ಕುಡಿದರೆ ಸಾವನಪ್ಪುತ್ತಾರೆ ಎಂದು ತಿಳಿಸಿದರೂ ಅವರು ಅದನ್ನು ಕುಡಿದು ಸಾವನಪ್ಪಿದ ಬಗ್ಗೆ ನಿಲೇಶ್ ವೇಳಿಪ ಅವರು ಅಳಲು ತೋಡಿಕೊಂಡರು.