ಜೊಯಿಡಾ ರಾಮನಗರದ ಗಣೇಶ ಗುಡಳಕರ್ ಅವರು ಕಟ್ಟಡ ಕಾರ್ಮಿಕರಾಗಿದ್ದು, ಕೆಲಸದ ಅವಧಿಯಲ್ಲಿ ಸರಾಯಿ ಕುಡಿದ ಕಾರಣ ಕೆಲಸ ಕಳೆದುಕೊಂಡಿದ್ದಾರೆ. ಅದೇ ಸಿಟ್ಟಿನಲ್ಲಿ ಕೆಲಸದಿಂದ ಕಿತ್ತ ಮನೆ ಮಾಲಕನ ಪತ್ನಿಗೆ ಬಡಿಗೆಯಿಂದ ಬಡಿದು, ಕಲ್ಲು ಹೊಡೆದಿದ್ದಾರೆ.
ಜೊಯಿಡಾ ರಾಮನಗರದ ರಮೇಶ ಶಿವಾಜಿ ಗಾಡಿ ಅವರು ರಾಮನಗರದ ಗಣೇಶಗಲ್ಲಿಯಲ್ಲಿ ಹೊಸದಾಗಿ ಮನೆ ಕಟ್ಟುತ್ತಿದ್ದಾರೆ. ಆ ಮನೆ ಕೆಲಸವನ್ನು ಅವರು ತಮ್ಮ ಪತ್ನಿ ರಮೇಶ ಗಾಡಿ ಅವರ ತಂಗಿ ಮಾಯಾ ಅವರ ಪತಿ ಮಾರುತಿ ಪಾಂಡುರAಗ ಗುಡಳಕರ ಅವರಿಗೆ ನೀಡಿದ್ದಾರೆ. ಆದರೆ, ಮಾರುತಿ ಗುಡಳಕರ ಅವರು ಕೆಲಸದ ಅವಧಿಯಲ್ಲಿಯೇ ಸರಾಯಿ ಕುಡಿಯುತ್ತಿದ್ದು, ಇದನ್ನು ರಮೇಶ ಗಾಡಿ ಅವರು ನೋಡಿದ್ದಾರೆ. ಸರಿಯಾಗಿ ಕೆಲಸವೂ ಸಾಗದ ಕಾರಣ ಪಾಂಡುರAಗ ಗುಡಳಕರ ಅವರನ್ನು ಕೆಲಸದಿಂದ ತೆಗೆದಿದ್ದಾರೆ. ಅದಾದ ನಂತರ ಆ ಕೆಲಸದ ಜವಾಬ್ದಾರಿಯನ್ನು ಬೇರೆಯವರಿಗೆವಹಿಸಿದ್ದಾರೆ.
ಕೆಲಸದಿಂದ ತೆಗೆದ ಕಾರಣ ರಮೇಶ ಗಾಡಿ ಅವರ ವಿರುದ್ಧ ಪಾಂಡುರAಗ ಗುಡಳಕರ ಅವರು ಸಿಟ್ಟಾಗಿದ್ದು, ಜೂನ್ 4ರಂದು ರಮೇಶ ಗಾಡಿ ಹಾಗೂ ಅವರ ಪತ್ನಿ ರೇಷ್ಮಾ ಗಾಡಿ ಅವರ ಮೇಲೆ ಆಕ್ರಮಣ ಮಾಡಿದ್ದಾರೆ. ದಂಪತಿ ಬೈಕಿನಲ್ಲಿ ಬರುವಾಗ ಅಡ್ಡಗಟ್ಟಿ ರೇಷ್ಮಾ ಗಾಡಿ ಅವರಿಗೆ ಬಡಿಗೆಯಿಂದ ಬಡಿದಿದ್ದಾರೆ. ರೇಷ್ಮಾ ಗಾಡಿ ಅವರು ನೆಲಕ್ಕೆ ಬಿದ್ದಾಗ ಕಲ್ಲಿನಿಂದ ಹೊಡೆದಿದ್ದಾರೆ. ಗಾಯಗೊಂಡ ರೇಷ್ಮಾ ಗಾಡಿ ಅವರು ಸದ್ಯ ಆಸ್ಪತ್ರೆ ಸೇರಿದ್ದಾರೆ.