ಅoಕೋಲಾದ ಆರ್ ಎನ್ ನಾಯಕ ಕಮಲಾ ಮೆಡಿಕಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ವೆಂಕಟೇಶ ಎ ಎಂ ಅವರು ಸಾವನಪ್ಪಿದ್ದಾರೆ. ಆಸ್ಪತ್ರೆ ವಸತಿಗೃಹದಲ್ಲಿ ಅವರು ಶವವಾಗಿ ಕಾಣಿಸಿಕೊಂಡಿದ್ದಾರೆ.
ಬೆoಗಳೂರಿನ ಯಲಹಂಕ ಬಳಿಯ ಡಾ ವೆಂಕಟೇಶ್ ಎ ಎಂ (50) ಅವರು ಆರ್ ಎನ್ ನಾಯಕ ಕಮಲಾ ಮೆಡಿಕಲ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ವೈದ್ಯಕೀಯ ಸೇವೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವರು ಆರ್ ಎನ್ ನಾಯಕ ಕಮಲಾ ಮೆಡಿಕಲ್ ಆಸ್ಪತ್ರೆಯ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ಈಚೆಗೆ ಅವರಲ್ಲಿ ಅನಾರೋಗ್ಯ ಕಾಡಿದ್ದು, ಅದಕ್ಕೆ ಚಿಕಿತ್ಸೆಪಡೆದಿದ್ದರು. ಜೂನ್ 8ರ ಸಂಜೆ ವಸತಿಗೃಹದ ಕೋಣೆ ಪ್ರವೇಶಿಸಿದ ಅವರು ಅಲ್ಲಿಂದ ಹೊರ ಬಂದಿರಲಿಲ್ಲ.
ಜೂನ್ 11ರಂದು ಡಾ ವೆಂಕಟೇಶ್ ಎ ಎಂ ಅವರು ತಮ್ಮ ಕೋಣೆಯಲ್ಲಿ ಮಲಗಿದ ಸ್ಥಿತಿಯಲ್ಲಿದ್ದು, ಅವರನ್ನು ಪರಿಕ್ಷಿಸಿದಾಗ ಸಾವನಪ್ಪಿರುವ ವಿಷಯ ಹೊರಬಂದಿತು. ಮಲಗಿದ ಕೋಣೆಯಲ್ಲಿಯೇ ಅಸ್ವಸ್ಥರಾಗಿ ಅವರು ಸಾವನಪ್ಪಿರುವುದು ಕುಟುಂಬದವರಿಗೆ ಅರಿವಾಯಿತು. ತಂಗಿ ಮಗನ ಸಾವಿನ ಬಗ್ಗೆ ಶಂಕರ್ ನಾರಾಯಣ ಸೋಮಪ್ಪ ಅವರಿಗೆ ಮಾಹಿತಿ ಸಿಕ್ಕಿದ್ದು, ಬೆಂಗಳೂರಿನಿAದ ಅಂಕೋಲಾಗೆ ಬಂದ ಅವರು ಕಾನೂನು ಕ್ರಮಕ್ಕಾಗಿ ಪೊಲೀಸರಿಗೆ ಮನವಿ ಮಾಡಿದರು. ವೈದ್ಯರ ಸಾವಿನ ಸುದ್ದಿ ಕೇಳಿ ಪೊಲೀಸರು ಪ್ರಕರಣ ದಾಖಲಿಸಿದರು.