ದಾಂಡೇಲಿಯ ಸುಶಿಯಾ ನಾಯ್ಕ ಹಾಗೂ ಅಪ್ಜಲ್ ಅಲಿ ಇನಸ್ಟಾಗ್ರಾಮಿನ ಮೂಲಕ ಪರಿಚಯವಾಗಿದ್ದು, ಅವರ ಪರಿಚಯ ಪ್ರೀತಿ-ಪ್ರೇಮಕ್ಕೆ ತಿರುಗಿದೆ. ಕುಟುಂಬದವರನ್ನು ಒಪ್ಪಿಸಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅದಾದ ನಂತರ ಹೊಡೆದಾಡಿಕೊಂಡಿದ್ದಾರೆ.
ದಾoಡೇಲಿಯ ಗಾಂಧೀನಗರ ಆಶ್ರಯ ಕಾಲೋನಿಯಲ್ಲಿ ಸುಶಿಯಾ ನಾಯ್ಕ (ಹೆಸರು ಬದಲಿಸಿದೆ) ಅವರು ವಾಸವಾಗಿದ್ದಾರೆ. 19 ವರ್ಷದ ಅವರು ಇನಸ್ಟಾಗ್ರಾಮಿನಲ್ಲಿ ಖಾತೆ ತೆರೆದು ರೀಲ್ಸ್ ಮಾಡುತ್ತಿದ್ದು, ಹಳೆ ದಾಂಡೇಲಿಯ ಅಪ್ಜಲ್ ಮಹಮದ್ ಅಲಿ ಯರಗಟ್ಟಿ ಅವರು ಸುಶಿಯಾ ನಾಯ್ಕ ಅವರನ್ನು ಹಿಂಬಾಲಿಸಿದ್ದಾರೆ. 23 ವರ್ಷದ ಅಪ್ಜಲ್ ಅಲಿ ಹಾಗೂ ಸುಶಿಯಾ ನಾಯ್ಕ ಅವರ ನಡುವೆ ಆತ್ಮೀಯತೆ ಬೆಳೆದಿದೆ. ಅವರಿಬ್ಬರ ಪರಿಚಯ ಪ್ರೀತಿಯಾಗಿ ಬದಲಾಗಿದೆ. 2023ರಲ್ಲಿ ಇನಸ್ಟಾಗ್ರಾಮಿನ ಮೂಲಕ ಪರಿಚಯವಾದವರು ನಂತರ ಪ್ರೀತಿ-ಪ್ರೇಮ-ಪ್ರಯಣ ಎಂದು ಎಲ್ಲಡೆ ಸುತ್ತಾಟ ನಡೆಸಿದ್ದಾರೆ. 2026ರ ಮಾರ್ಚ 29ರಂದು ಕುಟುಂಬದವರನ್ನು ಒಪ್ಪಿಸಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
2026ರ ಜೂನ್ 25ರ ಸಂಜೆ ಸುಶಿಯಾ ನಾಯ್ಕ ಅವರಿಗೆ ಎಂದಿನoತೆ ಅಪ್ಜಲ್ ಅಲಿ ಅವರು ಫೋನ್ ಮಾಡಿದ್ದಾರೆ. ಫೋನಿನಲ್ಲಿ ಮಾತನಾಡುವಾಗ ಸುಶಿಯಾ ನಾಯ್ಕ ಅವರ ಎದುರುಮನೆಯ ಅಂಜುಮ ಕುಟ್ಟಿ ಅವರು ಅಲ್ಲಿಗೆ ಆಗಮಿಸಿದ್ದಾರೆ. ಆಗ, ಸುಶಿಯಾ ನಾಯ್ಕ ಅವರು ಅಂಜುಮ ಕುಟ್ಟಿ ಅವರಲ್ಲಿ `ನಿನ್ನ ಬಳಿಯಿರುವ ಟೀ-ಶರ್ಟ ಕೊಡು. ನಾನು ಹಾಕಿ ಮರಳಿಸುವೆ’ ಎಂದಿದ್ದಾರೆ. ಅದನ್ನು ಕೇಳಿದ ಅಪ್ಜಲ್ ಅಲಿ `ಬೇರೆಯವರ ಟೀ-ಶರ್ಟ ಧರಿಸಬೇಡ’ ಎಂದಿದ್ದಾರೆ. ಅದಾಗಿಯೂ, ಸುಶಿಯಾ ನಾಯ್ಕ ಅವರು ಟೀ-ಶರ್ಟಪಡೆದಿದ್ದಾರೆ. ಇದರಿಂದ ಸಿಟ್ಟಾದ ಅಪ್ಜಲ್ ಅಲಿ ತಕ್ಷಣ ಆಶ್ರಯ ಕಾಲೋನಿಗೆ ಬಂದಿದ್ದಾರೆ. ಅಲ್ಲಿ ದೊಡ್ಡ ಗಲಾಟೆ ಮಾಡಿದ್ದಾರೆ. ನಿಶ್ಚಿತಾರ್ಥದ ದಿನ ಹುಡುಗಿ ಮನೆಯವರು ಕೊಡಿಸಿದ ಬಟ್ಟೆಯನ್ನು ತಂದು ಬಿಸಾಡಿದ್ದು, `ನಾವು ಕೊಟ್ಟ ಉಂಗುರ ಹಾಗೂ ಬಟ್ಟೆ ಮರಳಿಸು’ ಎಂದು ಕೂಗಾಡಿದ್ದಾರೆ.
ಈ ವೇಳೆ ಅಪ್ಜಲ್ ಅಲಿ ಚಾಕುವಿನಿಂದ ಕೈ ಕೊಯ್ದುಕೊಳ್ಳುವ ಪ್ರಯತ್ನ ಮಾಡಿದ್ದರೆ. ಬೆದರಿದ ಸುಶಿಯಾ ನಾಯ್ಕ ಅವರು ಚಾಕು ಕಸಿದಿದ್ದು, ಸಿಟ್ಟಾದ ಅಬ್ಜಲ್ ಅಲಿ ಕೆನ್ನೆಗೆ ಬಾರಿಸಿದ್ದಾರೆ. ಅದಾದ ನಂತರ ಅಪ್ಜಲ್ ಅಲಿ ಮನೆಯಲ್ಲಿದ್ದ 4 ಪ್ಯಾಕ್ ಕಂಪರ್ಟ ಕುಡಿದು ನರಳಾಡಿದ್ದಾರೆ. ಈ ವೇಳೆ ಕೆಲಸಕ್ಕೆ ಹೋಗಿದ್ದ ಸುಶಿಯಾ ನಾಯ್ಕ ಅವರ ತಂದೆ-ತಾಯಿ ಮನೆಗೆ ಬಂದಿದ್ದಾರೆ. ಅವರನ್ನು ನೋಡಿದ ಅಪ್ಜಲ್ ಅಲಿ ಅಲ್ಲಿಂದ ಪರಾರಿಯಾಗಿದ್ದಾರೆ. ಜೂನ್ 26ಕ್ಕೆ ಸುಶಿಯಾ ನಾಯ್ಕ ಅವರು ಮಾರುತಿ ನಗರದ ಮಾರುತಿ ದೇಗುಲ ಬಳಿ ಬರುವಾಗ ಅವರನ್ನು ಅಡ್ಡಗಟ್ಟಿದ ಅಪ್ಜಲ್ ಅಲಿ ತಲೆ-ಮುಖಕ್ಕೆ ಹೊಡೆದಿದ್ದಾರೆ. ಈ ನೋವು ಸಹಿಸದ ಸುಶಿಯಾ ನಾಯ್ಕ ಅವರು ದಾಂಡೇಲಿ ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರ ಬಳಿ ಈ ಎಲ್ಲಾ ವಿಷಯದ ಬಗ್ಗೆ ವಿವರಿಸಿದ್ದಾರೆ.