ಕುಮಟಾದ ವರದ್ ಬಾರ್ & ರೆಸ್ಟೋರೆಂಟಿನವರಿಗೆ ಸರಿಯಾಗಿ ಬಿರಿಯಾನಿ ಮಾಡಲು ಸಹ ಬರುವುದಿಲ್ಲ. `ಬಿರಿಯಾನಿ ಸರಿಯಿಲ್ಲ’ ಎಂದು ಗ್ರಾಹಕರು ಹೇಳಿದರೆ, ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸುವ ತಾಳ್ಮೆ ಬಾರ್ ಮ್ಯಾನೇಜರ್’ಗೆ ಇಲ್ಲ!
ADVERTISEMENT
ಕುಮಟಾ ಶಶಿಹಿತ್ತಲದ ಮೂರ್ತಿ ಮಾಸ್ತಿ ಹರಿಕಂತ್ರ ಅವರು ಜೂನ್ 5ರ ಸಂಜೆ ವರದ್ ಬಾರ್ & ರೆಸ್ಟೋರೆಂಟಿಗೆ ಹೋಗಿದ್ದರು. ಅಲ್ಲಿ ಅವರು ಒಂದು ಬಿಯರ್ ಹಾಗೂ ಬಿರಿಯಾನಿ ಆರ್ಡರ್ ಮಾಡಿದ್ದರು. ಮೂರ್ತಿ ಹರಿಕಂತ್ರ ಅವರ ಜೊತೆ ಅವರ ಸ್ನೇಹಿತರಾದ ಸೂರಜ್ ಮಹಾದೇವ ಶಶಿಹಿತ್ತಲ ಹಾಗೂ ಪಾಂಡುರAಗ ರಾಮ ಹರಿಕಂತ್ರ ಅವರು ಇದ್ದರು. ಈ ಮೂವರು ಸೇರಿ ಪಾರ್ಟಿ ಮಾಡಲು ನಿರ್ಧರಿಸಿದ್ದು, ವರದ್ ಬಾರ್ & ರೆಸ್ಟೋರೆಂಟಿನವರು ಬಿಯರ್ ಜೊತೆ ಕೊಟ್ಟ ಬಿರಿಯಾನಿ ಹಳಸಿದ ವಾಸನೆ ಬರುತ್ತಿತ್ತು. ಇದರಿಂದ ಬಿಯರ್ – ಬಿರಿಯಾನಿ ಜೊತೆ ಪಾರ್ಟಿ ಮಾಡಬೇಕಿದ್ದ ಸ್ನೇಹಿತರ ಯೋಜನೆ ತಲೆಕೆಳಗಾಯಿತು.
ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026
ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್
ADVERTISEMENT
ಬಾರಿನಲ್ಲಿ ಕೆಲಸ ಮಾಡುವ ಹುಡುಗನನ್ನು ಕರೆದ ಮೂರ್ತಿ ಹರಿಕಂತ್ರ ಅವರು `ಬಿರಿಯಾನಿ ಸರಿಯಾಗಿಲ್ಲ’ ಎಂದು ದೂರಿದರು. ಆಗ, ಆ ಹುಡುಗ ಬಾರ್ ಮ್ಯಾನೇಜರ್ ಆಗಿರುವ ಮಂಕಿಯ ಉದಯ ಗೋವಿಂದ ನಾಯ್ಕ ಅವರನ್ನು ಕರೆತಂದರು. ಇನ್ನಿತರ ಗ್ರಾಹಕರ ಎದುರೇ `ಬಿರಿಯಾನಿ ಸರಿಯಿಲ್ಲ’ ಎಂದು ಹೇಳಿದ ಕಾರಣ ಉದಯ ನಾಯ್ಕ ಅವರು ಸಿಟ್ಟಾದರು. `ಬೇರೆ ಗ್ರಾಹಕರ ಮುಂದೆ ಹೀಗೆ ಕೂಗಬೇಡಿ. ಬೇರೆ ಊಟ ಕೊಡುವೆ’ ಎಂದು ಹೇಳಿದರು. ಅದಾಗಿಯೂ, ಮೂರ್ತಿ ಹರಿಕಂತ್ರ, ಸೂರಜ ಶಶಿಹಿತ್ತಲ ಹಾಗೂ ಪಾಂಡುರAಗ ಹರಿಕಂತ್ರ ಅವರು ಸುಮ್ಮನಾಗಲಿಲ್ಲ. ಹೀಗಾಗಿ 20-30 ಜನ ಸಿಬ್ಬಂದಿ ಬಳಸಿಕೊಂಡ ಉದಯ ನಾಯ್ಕ ಅವರು ಬಾರಿಗೆ ಬಂದ ಆ ಮೂವರು ಸ್ನೇಹಿತರಿಗೆ ಹಿಗ್ಗಾಮುಗ್ಗ ಥಳಿಸಿದರು.
ಉದಯ ನಾಯ್ಕ ಅವರ ಜೊತೆ ಶ್ರೀಧರ ನಾಯ್ಕ, ನಾರಾಯಣ ಗೌಡ ಹಾಗೂ ಬಾಬು ಹೊಡೆದಿದನ್ನು ನೋಡಿದ ಮೂರ್ತಿ ಹರಿಕಂತ್ರ, ಸೂರಜ ಶಶಿಹಿತ್ತಲ ಹಾಗೂ ಪಾಂಡುರoಗ ಹರಿಕಂತ್ರ ಅವರು ಪ್ರತಿ ದಾಳಿ ಮಾಡಿದರು. ಈ ದಾಳಿಯಲ್ಲಿ ಉದಯ ನಾಯ್ಕ ಹಾಗೂ ಶ್ರೀಧರ ನಾಯ್ಕ ಅವರಿಗೂ ನೋವಾಗಿದ್ದು, ಗಾಯಗೊಂಡವರು ಆಸ್ಪತ್ರೆ ಸೇರಿದರು. ಈ ಹೊಡೆದಾಟದ ಬಗ್ಗೆ ಎರಡು ಕಡೆಯವರು ಪೊಲೀಸರಲ್ಲಿ ದೂರಿದ್ದು, ಸದ್ಯ ಕುಮಟಾ ಪೊಲೀಸರು ಸತ್ಯಾಸತ್ಯತೆಯ ಶೋಧ ಶುರು ಮಾಡಿದ್ದಾರೆ.