`ಸಂಕುಚಿತ ಮನೋಭಾವನೆ ಬಿಟ್ಟು ವಿಶಾಲ ಮನೋಭಾವದಿಂದ ಸಂಘಟನೆ ಮಾಡಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ’ ಎಂದು ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಅವರು ಹೇಳಿದ್ದಾರೆ. ಸಿದ್ದಾಪುರ ತಾಲೂಕಿನ ತಂಡಾಗುoಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಓಂಕಾರ ಗ್ರಾಮದಲ್ಲಿ ನಡೆದ ಶ್ರೀ ವೆಂಕಟನಾರಾಯಣ ಆರ್ಯ ಈಡಿಗ, ಬಿಲ್ಲವ, ಪೂಜಾರಿ, ನಾಮಧಾರಿ ಸಮಾಜ ಸಂಘದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಸಮಾಜ ಸಂಘಟನೆಯೂ ಸಂಕುಚಿತ ಮನೋಭಾವನೆ ಹೊಂದದೆ ವಿಶಾಲ ಮನೋಭಾವದಿಂದ ಸಮಾಜದ ಅಭಿವೃದ್ದಿಯ ದಿಸೆಯಲ್ಲಿ ಸಮಾಜದ ಆಂತರಿಕ ಸಮಸ್ಯೆಗಳ ಬಗೆ ಹರಿಸುವಿಕೆಗೆ ಹಾಗೂ ಪ್ರತಿಭೆ ಗುರುತಿಸಲು ವೇದಿಕೆ ಆಗಬೇಕು’ ಎಂದು ಕರೆ ನೀಡಿದ್ದಾರೆ.
`ಸಮಾಜದಲ್ಲಿ ವಂಚಿತರಾದ ಸದಸ್ಯರಿಗೆ ಧ್ವನಿಯಾಗಿ ಹಕ್ಕುಗಳ ರಕ್ಷಣೆ ಮತ್ತು ಸಾಮಾಜಿಕವಾಗಿ ಸಮೂದಾಯ ಬಲಪಡಿಸಲು ಸಂಘಟನೆಯು ಕಾರ್ಯ ಪ್ರರ್ವತ್ತರಾಗಬೇಕು. ಅಲ್ಲದೇ, ತಲತಲಾಂತರದಿoದ ಸಾಂಸೃತಿಕ ಉಳುವಿಗಾಗಿ ಸಂಘಟನೆಯು ಶ್ರಮಿಸುವ ಅಗತ್ಯವಿದೆ’ ಎಂದವರು ಹೇಳಿದ್ದಾರೆ. `ಮಾನವನ ಹುಟ್ಟಿನಿಂದ ಸಾವಿನವರೆಗೂ ಸಂಪ್ರದಾಯ ಮತ್ತು ಸಂಸ್ಕೃತಿಯ ಗುರುತಿಸುವಿಕೆಗೆ ಬದ್ಧನಾಗಿರುತ್ತಾನೆ. ಪ್ರಭುದ್ದವಾದ ಮಾನವ ಶಿಕ್ಷಣದಿಂದ ಸ್ವತಂತ್ರವಾಗಿ, ಸಂಘಟನೆಯಿoದ ಬಲಯುತರಾಗುವ ಸಿದ್ದಾಂತವನ್ನ ಎಲ್ಲಾ ಜಾತಿಗಳು ಅಳವಡಿಸಿಕೊಳ್ಳಬೇಕು’ ಎಂದರು.
`ಟಿ ವಿ ಮತ್ತು ಮೊಬೈಲ್ಗಳನ್ನ ಶಿಕ್ಷಣ ಪೂರಕ ಚಟುವಟಿಕೆಗೆ ಮಾತ್ರ ಮಕ್ಕಳಿಗೆ ನೀಡಬೇಕು. ಸಮಾಜದಲ್ಲಿನ ದುಷ್ಚಟದ ವಿರುದ್ದ ಜಾಗೃತೆ ಮೂಡಿಸುವುಸುದು, ಸಂಘಟನೆಯ ಪ್ರಮುಖ ಕಾರ್ಯ. ಮಕ್ಕಳಲ್ಲಿ ಶಿಕ್ಷಣವೂ ಬದುಕಿನ ಯಶಸ್ಸಿನ ಗುಟ್ಟು’ ಎಂದು ಶಿಕ್ಷಕ ಕೆ ಜಿ ನಾಯ್ಕ ಅವರು ಹೇಳಿದರು. `ಯುವಕರಿಗೆ ಶಿಕ್ಷಣದ ಜ್ಞಾನ ವೃದ್ದಿಸಿಬೇಕು, ಶಿಕ್ಷಣದೊಂದಿಗೆ ಮಾನವೀಯತೆಯ ಮೌಲ್ಯ ಬಿಂಬಿಸಬೇಕು. ಸಕಾರಾತ್ಮಕ ಸಂಘಟನೆಯನ್ನ ಬಿಂಬಿಸಲು ಕಾರ್ಯ ಪ್ರರ್ವತ್ತರಾಗಬೇಕು’ ಎಂದು ವಲಯ ಅರಣ್ಯಾಧಿಕಾರಿ ಎಮ್ ಎಚ್ ನಾಯ್ಕ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಮತಾ ವಿ ನಾಯ್ಕ, ಮಂಜುನಾಥ ನಾಯ್ಕ, ಹರಿಹರ ನಾಯ್ಕ, ನಾಗರಾಜ ನಾಯ್ಕ, ಎಮ್ ವಿ ನಾಯ್ಕ ವಿವಿಧ ಜವಾಬ್ದಾರಿ ನಿಭಾಯಿಸಿದರು. ಪ್ರಮುಖರಾದ ಸೂರಜ ನಾಯ್ಕ, ಪ್ರಮೋದ ನಾಯ್ಕ ಬೀರನಜಡ್ಡಿ, ಪ್ರತಿಭಾ ಮಂಜುನಾಥ ನಾಯ್ಕ, ಮಂಜುನಾಥ ಎಮ್ ನಾಯ್ಕ, ಸುಬ್ರಾಯ ನಾಯ್ಕ, ಮೋಹನ್ ಜಿ ನಾಯ್ಕ ಮತ್ತು ಮಂಜುನಾಥ ಪೂಜಾರಿ ದ್ಯಾವಕಾರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಗ್ರಾಮೀಣ ಭಾಗದ ಹತ್ತು ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಧನ ಸಹಾಯದೊಂದಿಗೆ ಪ್ರತಿಭಾ ಪುರಸ್ಕರಿಸಲಾಯಿತು.