ಮನೆ ಮನೆಗೆ ಅಂಚೆ ಸೇವೆ ನೀಡುತ್ತಿದ್ದ ಉಮೇಶ ಭಟ್ಟ ಅವರಿಗೆ ದಾಂಡೇಲಿಯಲ್ಲಿ ಎಮ್ಮೆಯೊಂದು ಅಡ್ಡ ಬಂದಿದ್ದು, ಬೈಕಿನಿಂದ ಬಿದ್ದು ಅವರು ಸಾವಪ್ಪಿದ್ದಾರೆ. ಹಳಿಯಾಳ ಮುರ್ಕವಾಡದ ಉಮೇಶ ಭಟ್ಟ ಅವರು ಕುಳಗಿ ಕನ್ನಡ ಶಾಲೆ ಬಳಿ ನಡೆದ ದುರಂತದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಉಮೇಶ ಭಟ್ಟ ಅವರು ಅಂಬಿಕಾನಗರದಲ್ಲಿ ವಾಸವಾಗಿದ್ದು, ಜನತಾ ಕಾಲೋನಿಗೆ ಹೊರಟಿದ್ದರು. ಬೈಕಿನ ಮೇಲೆ ಸಂಬoಧಿಕರ ಮನೆಗೆ ಹೋಗುತ್ತಿದ್ದ ಅವರಿಗೆ ದಿಢೀರ್ ಆಗಿ ಎಮ್ಮೆಯೊಂದು ಎದುರು ಸಿಕ್ಕಿತು. ಬೈಕ್ ನಿಯಂತ್ರಣ ತಪ್ಪಿ ಆ ಎಮ್ಮೆಗೆ ಡಿಕ್ಕಿ ಹೊಡೆಯಿತು. ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಉಮೇಶ ಭಟ್ಟ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರು. ದಾಂಡೇಲಿಯಿoದ ಧಾರವಾಡದ ಆಸ್ಪತ್ರೆಗೂ ಅವರನ್ನು ಸಾಗಿಸಲಾಯಿತು.
ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಅಲ್ಲಿಯೇ ಸಾವನಪ್ಪಿದರು. ಉಮೇಶ ಭಟ್ಟ ಅಂಬಿಕಾನಗರದ ಅಂಚೆ ಇಲಾಖೆಯ ಸೇವೆಯಲ್ಲಿದ್ದರು. 59 ವರ್ಷದ ಅವರು ದಶಕಗಳ ಕಾಲ ಅಂಚೆ ಇಲಾಖೆಗೆ ಸೇವೆ ಸಲ್ಲಿಸಿದ್ದರು. ಕರ್ತವ್ಯ ಮುಗಿಸಿ ಮರಳುವಾಗ ಈ ಅವಘಡ ನಡೆದಿದ್ದು, ಅನೇಕರು ಶೋಕವ್ಯಕ್ತಪಡಿಸಿದರು. 59 ವರ್ಷದ ಉಮೇಶ ಭಟ್ಟ ಅವರು 2027ರ ಏಪ್ರಿಲ್ ತಿಂಗಳಲ್ಲಿ ನಿವೃತ್ತರಾಗಬೇಕಿದ್ದು, ಅದಕ್ಕೂ ಮೊದಲೇ ಜೀವನ ಯಾತ್ರೆ ಮುಗಿಸಿದರು.