ಗೋಕರ್ಣ ಸಮುದ್ರದಲ್ಲಿ ಸುಂದರವಾದ ರಾಮನ ಮೂರ್ತಿ ಸಿಕ್ಕಿದೆ. ಆ ಮೂರ್ತಿ ನೋಡಿದ ಜನ ಕೈ ಮುಗಿದು ಮುಂದೆ ಸಾಗುತ್ತಿದ್ದಾರೆ.
ಈಚೆಗೆ ಅನೇಕ ದೇವರ ಫೋಟೋ-ಮೂರ್ತಿಗಳು ವಿವಿಧ ಮರ ಹಾಗೂ ನೀರಿನಲ್ಲಿ ಕಾಣಿಸುತ್ತಿವೆ. ದೇವರ ಮೂರ್ತಿಗಳು ಬೀದಿಗೆ ಬರುವುದು ಮತಾಂತರ ಹೆಚ್ಚಳದ ಅನುಮಾನವನ್ನು ಹುಟ್ಟು ಹಾಕಿವೆ. ಸಾಮಾನ್ಯವಾಗಿ ಭಿನ್ನ ಮೂರ್ತಿಗಳನ್ನು ಜನ ನದಿಗೆ ಬಿಡುತ್ತಾರೆ. ಅಥವಾ ಮರದ ಬುಡದಲ್ಲಿ ಬಿಟ್ಟು ಬರುತ್ತಾರೆ. ಆದರೆ, ಈಚೆಗೆ ಸರಿಯಾಗಿರುವ ಸುಂದರ ಮೂರ್ತಿ-ಫೋಟೋಗಳು ಸಹ ಎಲ್ಲೆಂದರಲ್ಲಿ ಬೀಳುತ್ತಿರುವುದು ಸಾಮಾನ್ಯವಾಗಿದೆ.
`ಕಣ ಕಣದಲ್ಲಿಯೂ ಶಿವ’ ಎಂಬ ಘೋಷವಾಕ್ಯದ ಅಡಿ ಯುವಾ ಬಿಗ್ರೇಡ್ ತಂಡವೂ ದೇವರ ಫೋಟೋಗಳಿಗೆ ವೈಜ್ಞಾನಿಕವಾಗಿ ಮುಕ್ತಿ ನೀಡುವ ಕೆಲಸ ಮಾಡುತ್ತಿದ್ದೆ. ಇದರ ರೂವಾರಿ ಅಣ್ಣಪ್ಪ ನಾಯ್ಕ ಅವರ ಪ್ರಕಾರ ವರ್ಷದಿಂದ ವರ್ಷಕ್ಕೆ ಅವರು ವೈಜ್ಞಾನಿಕವಾಗಿ ಮುಕ್ತಿ ನೀಡುವ ದೇವರ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆಲ-ಅಶ್ವಥ ಮರದ ಅಡಿ ವಾರಕ್ಕೆ ಒಮ್ಮೆ ಸ್ವಚ್ಛಗೊಳಿಸಿದರೂ ಮತ್ತೆ ಮತ್ತೆ ಅಲ್ಲಿ ದೇವರ ಮೂರ್ತಿಗಳು ಬಂದು ಬೀಳುತ್ತಿವೆ.
ಸದ್ಯ ಗೋಕರ್ಣ ಮುಖ್ಯ ಕಡಲತೀರದಲ್ಲಿಯೂ ಸುಂದರವಾದ ರಾಮನ ಮೂರ್ತಿ ಕಾಣಿಸಿದೆ. ಹೊಸ ಮೂರ್ತಿ ಸ್ಥಾಪಿಸಿ ಹಳೆಯದನ್ನು ಸಮುದ್ರಕ್ಕೆ ಬಿಟ್ಟಿದ್ದಾರ? ಅಥವಾ ಬೇರೆ ಉದ್ದೇಶಕ್ಕಾಗಿ ಮೂರ್ತಿಯನ್ನು ಇಲ್ಲಿ ತಂದಿರಿಸಿದ್ದಾರಾ? ಎಂಬುದು ಗೊತ್ತಾಗಿಲ್ಲ. ಮಳೆಗಾಲದ ಅವಧಿಯಲ್ಲಿ ನದಿಯಲ್ಲಿ ಬಿಟ್ಟ ವಸ್ತುಗಳೆಲ್ಲವೂ ಸಮುದ್ರ ಸೇರಿ ದಡಕ್ಕೆ ಬರುತ್ತಿದ್ದು, ಮರಳಿನಲ್ಲಿ ಬಿದ್ದ ರಾಮನನ್ನು ನೋಡಿ ಜನ ಕೈ ಮುಗಿಯುತ್ತಿದ್ದಾರೆ.