ಭಟ್ಕಳ ಶಿರುಕುಳಿಹೊಂಡ ಬಳಿಯ ಆಜಾದ್ ನಗರದ ಆಟೋ ಚಾಲಕ ಮಹ್ಮದ್ ಅಖಿಲ್ ಅವರು ತಮ್ಮ ರಿಕ್ಷಾದಲ್ಲಿ ಗಾಂಜಾ ಸಾಗಿಸಿ ಸಿಕ್ಕಿ ಬಿದ್ದಿದ್ದಾರೆ. 25ನೇ ವಯಸ್ಸಿನಲ್ಲಿಯೇ ಅಡ್ಡದಾರಿ ಹಿಡಿದಿದ್ದ ಮಹ್ಮದ್ ಅಖಿಲ್ ಅವರಿಗೆ ಪೊಲೀಸರು ಸರಿಯಾಗಿಯೇ ಬುದ್ದಿ ಕಲಿಸಿದ್ದಾರೆ.
ಭಟ್ಕಳ ಶಿರುಕುಳಿಹೊಂಡ ಬಳಿಯ ಆಜಾದ್ ನಗರದ ಮೊಹಮದ್ ಜಾಫರ್ ಅವರು ತಮ್ಮ ಪುತ್ರ ಮಹ್ಮದ್ ಅಖಿಲ್ ಅವರಿಗೆ ರಿಕ್ಷಾ ಕೊಡಿಸಿದ್ದರು. ಆ ರಿಕ್ಷಾ ಮೂಲಕ ಪ್ರಯಾಣಿಕರನ್ನು ಸಾಗಿಸಿ ಸಂಸಾರ ನಡೆಸುವಂತೆ ಅವರು ಸೂಚಿಸಿದ್ದರು. ಆದರೆ, ಮಹ್ಮದ್ ಅಖಿಲ್ ಬಹುಬೇಗ ದುಡ್ಡು ಮಾಡುವುದಕ್ಕಾಗಿ ಅಡ್ಡದಾರಿ ಹಿಡಿದರು. ಹೆಬಳೆ ಗ್ರಾಮದ ವರಕೊಡ್ಲು ಮೈದಾನದಲ್ಲಿ ಗಾಂಜಾ ಮಾರಾಟ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ದೊರೆತ ಪೊಲೀಸರು ಅಲ್ಲಿ ದಾಳಿ ಮಾಡಿದರು.
ರಿಕ್ಷಾದಲ್ಲಿ ಗಾಂಜಾ ಮಾರುತ್ತಿದ್ದ ಮಹ್ಮದ್ ಅಖಿಲ್ ಅವರನ್ನು ಪೊಲೀಸರು ಬಂಧಿಸಿದರು. 15 ಸಾವಿರ ಮೌಲ್ಯದ 129 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋವನ್ನು ವಶಕ್ಕೆಪಡೆದರು. ಹಿರಿಯ ಅಧಿಕಾರಿಗಳ ಸೂಚನೆ ಪ್ರಕಾರ ಪಿಸೈ ಮಲ್ಲಿಕಾರ್ಜುನಯ್ಯ ಕೋರಾಣಿ, ಭರಮಪ್ಪ ಬೆಳಗಲಿ ಈ ಕಾರ್ಯಾಚರಣೆಯಲ್ಲಿದ್ದರು. ಪೊಲೀಸ್ ಸಿಬ್ಬಂದಿ ಮಂಜುನಾಥ ಗೊಂಡ, ಮದರಸಾಬ್ ಚಿಕ್ಕೇರಿ, ಮಂಜುನಾಥ ಖಾರ್ವಿ, ನಿಂಗನಗೌಡ ಪಾಟೀಲ್, ಈರಣ್ಣ ಪೂಜೇರಿ, ಬಾಗಪ್ಪ ಕಡಗಲ್, ಅಕ್ಷತಕುಮಾರ ಅವಜಿ ಹಾಗೂ ಅಂಬರಿಷ್ ಕುಂಬಾರಿ ಅವರು ಕಾರ್ಯಾಚರಣೆಗೆ ಶ್ರಮಿಸಿದ್ದರು.