ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶದ ಕೋಟ್ಯಂತರ ರೈತರು ಪ್ರತಿ ವರ್ಷ ₹6,000 ಆರ್ಥಿಕ ನೆರವು ಪಡೆಯುತ್ತಿದ್ದಾರೆ. ಈ ಮೊತ್ತವನ್ನು ಮೂರು ಕಂತುಗಳಲ್ಲಿ ತಲಾ ₹2,000 ದಂತೆ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಆದರೆ 23 ನೇ ಕಂತಿನ ಹಣ ಬರುವುದು ಯಾವಾಗ ಎನ್ನುವುದೇ ರೈತರ ಪ್ರಶ್ನೆಯಾಗಿದೆ.
ಇತ್ತೀಚೆಗೆ 22ನೇ ಕಂತಿನ ಹಣ ಬಿಡುಗಡೆಗೊಂಡಿದ್ದು, ಇದೀಗ ರೈತರು 23ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ವಿವಿಧ ವರದಿಗಳ ಪ್ರಕಾರ 23ನೇ ಕಂತಿನ ಹಣ ಜೂನ್ ಅಥವಾ ಜುಲೈ ತಿಂಗಳ ಅವಧಿಯಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಆದರೆ ಕೇಂದ್ರ ಸರ್ಕಾರದಿಂದ ಇನ್ನೂ ಅಧಿಕೃತ ದಿನಾಂಕ ಪ್ರಕಟವಾಗಿಲ್ಲ. ಈಗಾಗಲೇ ಮಳೆಗಾಲಆರಂಭವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಈ ಯೋಜನೆ ಹಣ ಬಂದಿಲ್ಲದೇ ಇರುವುದೇ ತಲೆನೋವಾಗಿದೆ.
ಹಣ ಪಡೆಯಲು ಈ ಕೆಲಸಗಳನ್ನು ತಪ್ಪದೇ ಮಾಡಿ:
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದು ಅತ್ಯಗತ್ಯ. e-KYC ಪೂರ್ಣಗೊಳಿಸದಿದ್ದರೆ ಮುಂದಿನ ಕಂತಿನ ಹಣ ತಡೆಹಿಡಿಯುವ ಸಾಧ್ಯತೆ ಇದೆ. ಅಲ್ಲದೆ ಬ್ಯಾಂಕ್ ಖಾತೆ, ಆಧಾರ್ ಮತ್ತು ಭೂ ದಾಖಲೆಗಳ ಮಾಹಿತಿ ಸರಿಯಾಗಿರುವುದನ್ನೂ ಪರಿಶೀಲಿಸಬೇಕು.
ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಎಂದು ಹೇಗೆ ತಿಳಿಯುವುದು?
ಫಲಾನುಭವಿಗಳು ಅಧಿಕೃತ ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ತಮ್ಮ ನೋಂದಣಿ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯ ಮೂಲಕ ಸ್ಟೇಟಸ್ ಪರಿಶೀಲಿಸಬಹುದು. ಇದರಿಂದ ಹಿಂದಿನ ಕಂತುಗಳ ಮಾಹಿತಿ ಹಾಗೂ ಮುಂದಿನ ಪಾವತಿ ಸ್ಥಿತಿಯನ್ನು ತಿಳಿದುಕೊಳ್ಳಬಹುದು.
ರೈತರು ಗಮನಿಸಬೇಕಾದ ಸಂಗತಿ:
ಇತ್ತೀಚಿನ ದಿನಗಳಲ್ಲಿ ಭೂ ದಾಖಲೆಗಳಲ್ಲಿನ ದೋಷಗಳು, e-KYC ಪೂರ್ಣಗೊಳಿಸದಿರುವುದು ಹಾಗೂ ಬ್ಯಾಂಕ್ ವಿವರಗಳ ತೊಂದರೆಗಳಿಂದ ಕೆಲ ರೈತರ ಕಂತಿನ ಹಣ ವಿಳಂಬವಾಗುತ್ತಿರುವ ಪ್ರಕರಣಗಳು ವರದಿಯಾಗಿವೆ. ಆದ್ದರಿಂದ ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಪರಿಶೀಲಿಸಿಕೊಳ್ಳುವುದು ಉತ್ತಮ. 23ನೇ ಕಂತಿನ ₹2,000 ಹಣಕ್ಕಾಗಿ ಕಾಯುತ್ತಿರುವ ರೈತರು ತಮ್ಮ e-KYC, ಆಧಾರ್ ಜೋಡಣೆ ಹಾಗೂ ಬ್ಯಾಂಕ್ ವಿವರಗಳನ್ನು ತಕ್ಷಣ ಪರಿಶೀಲಿಸಿಕೊಳ್ಳುವುದು ಸೂಕ್ತ.