ಶಿರಸಿ ತಾರಗೋಡು ಬಳಿಯ ನೀಡಗೋಡಿನ ಮಂಜು ಪೂಜಾರಿ ಅವರು ತಮ್ಮ ಸ್ನೇಹಿತರನ್ನು ಅಂದರ್-ಬಾಹರ್ ಆಟಕ್ಕೆ ಆಮಂತ್ರಿಸಿದ್ದು, ಮಂಜು ಪೂಜಾರಿ ಅವರ ಜೊತೆ ಮತ್ತೆ 15 ಜನ ಪೊಲೀಸರ ಅತಿಥಿಯಾಗಿದ್ದಾರೆ.
ಜುಲೈ 5ರ ಸಂಜೆ 6ಗಂಟೆಗೆ ತಾರಗೋಡು ಬಳಿಯ ನೀಡಗೋಡಿನ ಮಂಜು ಮಾಚಾ ಪೂಜಾರಿ ಅವರು ಕಂಬಳಿ ಹಾಸಿದ್ದರು. ಆ ಕಂಬಳಿ ಮೇಲೆ 60 ಸಾವಿರ ರೂ ಹಣ ಹರಡಿ ದುರ್ಗಾ ಮಾಚಾ ಪೂಜಾರಿ ಅವರು ಕೂತಿದ್ದರು. ಬೊಮ್ಮನಳ್ಳಿಯ ವ್ಯಾಪಾರಿ ಆನಂದ ಸುಬ್ರಾಯ ನಾಯ್ಕ, ಚಂದ್ರಶೇಖರ ನಾಗಾ ನಾಯ್ಕ, ದಾನಂದಿಯ ಮಾದೇವ ಚನ್ನಾ ಪೂಜಾರಿ, ವರ್ಷ, ಯಲ್ಲಾಪುರ ತುಡುಗುಣಿಯ ಹನುಮಂತ ಗೋವಿಂದ ಪೂಜಾರಿ, ಗಣಪತಿ ವೆಂಕಟ ಪೂಜಾರಿ, ಯಲ್ಲಾಪುರ ಹಿತ್ಲಳ್ಳಿಯ ಭಾಸ್ಕರ ಸುಬ್ಬಾ ದೇವಾಡಿಗ, ಶಿರಸಿ ಉಲ್ಲಾಳದ ಸೀನಾ ಮಂಜು ಪೂಜಾರಿ, ಶಿರಸಿ ಮುಂಡಗೆಹಳ್ಳ ಹುಲೆಕಲ್’ನ ಹಿರಿಯ ಶೇಷಾ ಪೂಜಾರಿ, ಮಂಜು ಶೇಷಾ ಪೂಜಾರಿ ಅವರು ಅಲ್ಲಿಗೆ ಆಗಮಿಸಿ ಹಣ ಹೂಡಿಕೆ ಮಾಡಿದ್ದರು.
ಕಾನಗೋಡು ಕಲಕೈಯ ಸುಬ್ರಾಯ ತಿಮ್ಮಪ್ಪ ಪೂಜಾರಿ, ಶಿರಸಿ ಸದಾಶಿವಳ್ಳಿಯ ರುದ್ರ ಶಿವು ಗೌಡ ಹಾಗೂ ಶಿರಸಿ ಮಾವಿನಸರದ ಕೃಷ್ಣ ತಿಪ್ಪಯ್ಯ ನಾಯ್ಕ ಅವರು ಅಲ್ಲಿ ನಡೆದ ಅಂದರ್ ಬಾಹರ್ ಆಟಕ್ಕೆ ಕೈ ಜೋಡಿಸಿದ್ದರು. ಶಿರಸಿ ಗ್ರಾಮೀಣ ಠಾಣೆಯ ಪಿಸೈ ಸಂತೋಷಕುಮಾರ ಅವರು ಅಲ್ಲಿ ದಾಳಿ ಮಾಡಿದ್ದು, ಆ ಎಲ್ಲರನ್ನು ಬಂಧಿಸಿದರು. ಕಾನೂನುಬಾಹಿರ ಕ್ರೀಡೆ ಆಡಿದಕ್ಕಾಗಿ ಅವರ ವಿರುದ್ಧ ಕೇಸು ದಾಖಲಿಸಿದರು. ಜೊತೆಗೆ ಆಟಕ್ಕೆ ಬಳಸಿದ್ದ 60400ರೂ ಹಣವನ್ನು ವಶಕ್ಕೆಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದರು.