ದುಬೈಯಲ್ಲಿ ಕೆಲಸ ಮಾಡಿಕೊಂಡಿದ್ದ ಶೇಖ್ ಯುನಿಕ್ ಅವರನ್ನು ಭಟ್ಕಳದ ಶಾಹಿಕಾಭಾನು ಖಾಜಿ ಅವರು ಮದುವೆ ಆಗಿದ್ದು, ಅವರ ಸಂಸಾರದಲ್ಲಿ ಸದ್ಯ ಸಮಸ್ಯೆ ಶುರುವಾಗಿದೆ. ಶಾಹಿಕಾಭಾನು ಖಾಜಿ ಅವರನ್ನು ದುಬೈ ಗಂಡ ದೂರ ಮಾಡಿದ್ದಾರೆ.
ಭಟ್ಕಳದ ಮುಗ್ದುಂ ಕಾಲೋನಿಯ ಗುಲ್ಜರ್ ಸ್ಟೀಟ್’ನಲ್ಲಿ ಶಾಹಿಕಾಭಾನು ಖಾಜಿ (40) ಅವರು ವಾಸವಾಗಿದ್ದಾರೆ. 2019ರಲ್ಲಿ ಅವರು ಉಡುಪಿ ಬ್ರಹ್ಮಾವರದ ಉಪ್ಪಿನಕೋಟೆಯ ಶೇಖ್ ಯುನಿಕ್ ಶೇಖ್ ಹುಸೇನ್ (60) ಅವರನ್ನು ಮದುವೆ ಆಗಿದ್ದಾರೆ. ಬಂದರು ರಸ್ತೆಯ ಜಮಾತ್ ಉಲ್ ಮುಸ್ಲಿಮೀನ್ ಮಹಕಮಾ ಶರೀಯಾ ಮಸೀದಿಯಲ್ಲಿ ಮುಸ್ಲೀಂ ಸಂಪ್ರದಾಯದ ಪ್ರಕಾರ ಅವರ ಮದುವೆ ನಡೆದಿದೆ. ಅದಾದ ನಂತರ ಅವರಿಬ್ಬರು ಭಟ್ಕಳದಲ್ಲಿ ಬಾಡಿಗೆ ಮನೆಯನ್ನು ಮಾಡಿದ್ದಾರೆ.
ಶೇಖ್ ಯುನಿಕ್ ಅವರು ಆಗಾಗ ದುಬೈಗೆ ಹೋಗಿ ಬರುತ್ತಿದ್ದು, ಬಿಡುವಾದಾಗಲೆಲ್ಲ ಭಟ್ಕಳದ ಬಾಡಿಗೆ ಮನೆಗೆ ಬರುತ್ತಾರೆ. ಒಮ್ಮೆ ಶಾಹಿಕಾಭಾನು ಖಾಜಿ ಅವರನ್ನು ದುಬೈಗೆ ಕರೆದುಕೊಂಡು ಹೋಗಿದ್ದಾರೆ. ಮೂರು ವರ್ಷಗಳ ಕಾಲ ಅವರು ಅಲ್ಲಿ ಸಂಸಾರ ಮಾಡಿದ್ದಾರೆ. 2024ರಲ್ಲಿ ಶಾಹಿಕಾಭಾನು ಖಾಜಿ ಅವರು ದುಬೈಯಿಂದ ಮರಳಿ ಭಟ್ಕಳಕ್ಕೆ ಬಂದಿದ್ದಾರೆ. ಅಲ್ಲಿನ ಬಾಡಿಗೆ ಮನೆಯಲ್ಲಿ ಅವರು ವಾಸವಾಗಿದ್ದಾರೆ.
ಹೀಗಿರುವಾಗ, ದುಬೈಯಿಂದ ಬಂದ ಶೇಖ್ ಯುನಿಕ್ ಅವರು ಶಾಹಿಕಾಭಾನು ಖಾಜಿ ಅವರ ಪಾಸಪೋರ್ಟ ಹಾಗೂ ಪಾಸ್‌ಬುಕ್ ಕದ್ದಿದ್ದಾರೆ. ಅದನ್ನು ಅವರಿಗೆ ಮರಳಿಸದೇ ಹಿಂಸೆ ನೀಡಲು ಶುರು ಮಾಡಿದ್ದಾರೆ. ಮತ್ತೆ ಶಾಹಿಕಾಭಾನು ಖಾಜಿ ಅವರನ್ನು ದುಬೈಗೆ ಕರೆದೊಯ್ದಿಲ್ಲ. ಬ್ರಹ್ಮಾವರದಲ್ಲಿರುವ ಅವರ ಮನೆಗೂ ಕರೆದಿಲ್ಲ. ಫೋನ್ ಮಾಡಿದರೂ ಶೇಖ್ ಯುನಿಕ್ ಅವರು ಸಿಗುತ್ತಿಲ್ಲ. ಈ ಎಲ್ಲ ಹಿನ್ನಲೆ ಶಾಹಿಕಾಭಾನು ಖಾಜಿ ಅವರು ಬ್ರಹ್ಮಾವರಕ್ಕೆ ಹೋಗಿದ್ದಾರೆ. ಶೇಕ್ ಯುನಿಕ್ ಅವರ ಮನೆ ಒಳಗೆ ಪ್ರವೇಶಿಸಿದ್ದಾರೆ. ಆಗ, ಅಲ್ಲಿದ್ದವರು ಶಾಹಿಕಾಭಾನು ಖಾಜಿ ಅವರನ್ನು ಮನೆಯಿಂದ ಹೊರ ದಬ್ಬಿ ಅವಮಾನ ಮಾಡಿದ್ದಾರೆ. ದುಬೈ ಗಂಡನ ವಿರುದ್ಧ ಶಾಹಿಕಾಭಾನು ಖಾಜಿ ಅವರು ಪೊಲೀಸ್ ದೂರು ನೀಡಿದ್ದಾರೆ.