20ನೇ ವಯಸ್ಸಿಗೆ ಭಾರತೀಯ ನೌಕಾನೆಲೆಯಲ್ಲಿ ಕೆಲಸ ಗಿಟ್ಟಿಸಿಕೊಂಡ ಕಾರವಾರ ಬಿಣಗಾದ ರೋಹಿತ್ ಮಾಸ್ತೇಕರ್ ಅವರು ಅತಿಯಾದ ಮೋಜು-ಮಸ್ತಿಗೆ ಮಾರು ಹೋಗಿದ್ದಾರೆ. ಅರಗಾ ಮಹಾದೇವಸ್ಥಾನ ಬಳಿಯ ಸುದೀಪ ಅಂಬಿಗ ಹಾಗೂ ರಿತೀಶ್ ಮಡಿವಾಳ ಅವರು ಸಹವಾಸ ದೋಷದಿಂದ ಹಾಳಾಗಿದ್ದಾರೆ.
ಕಾರವಾರದ ಅರಗಾ ಮಹಾದೇವಸ್ಥಾನ ಬಳಿ ಸುದೀಪ ಮಂಜುನಾಥ ಅಂಬಿಗ (25) ಅವರು ವಾಸವಾಗಿದ್ದಾರೆ. ಅಲ್ಲಿಯೇ ಸಮೀಪ ರಿತೀಶ ಗಣೇಶ ಮಡಿವಾಳ ಅವರು ವಾಸವಾಗಿದ್ದಾರೆ. ಅವರಿಬ್ಬರೂ ಬೇರೆ ಬೇರೆ ಖಾಸಗಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರಿಬ್ಬರಿಗೂ ಭಾರತೀಯ ನೌಕಾನೆಲೆಯಲ್ಲಿ ಉದ್ಯೋಗ ಮಾಡುವ ಬಿಣಗಾ ಮಾಳ್ಸವಾಡದ ರೋಹಿತ್ ರಾಜೇಶ ಮಾಸ್ತೇಕರ್ (20) ಅವರು ಸ್ನೇಹಿತರಾಗಿದ್ದು, ರೋಹಿತ್ ಮಾಸ್ತೇಕರ್ ಅವರ ಜೊತೆ ಸೇರಿ ಸಂದೀಪ ಅಂಬಿಗ ಹಾಗೂ ರಿತೀಶ್ ಮಡಿವಾಳ ದಾರಿ ತಪ್ಪಿದ್ದಾರೆ.
ಈ ಮೂವರು ದುಶ್ಚಟಕ್ಕೆ ದಾಸರಾಗಿದ್ದು, ರಾತ್ರಿ ವೇಳೆ ಕದ್ದು ಮುಚ್ಚಿ ಒಂದಡೆ ಸೇರುತ್ತಾರೆ. ಎಲ್ಲರೂ ಸೇರಿ ಒಟ್ಟಿಗೆ ವ್ಯಸನಗಳನ್ನು ಮಾಡುತ್ತಾರೆ. ಮುಖ್ಯವಾಗಿ, ನಿಷೇಧಿತ ಗಾಂಜಾ ಸೇವಿಸುವುದಕ್ಕಾಗಿಯೇ ಅವರು ಕಾರವಾರಕ್ಕೆ ಬರುತ್ತಿದ್ದು, ಮುಖ್ಯ ಕಡಲತೀರದ ಹನುಮಾನ್ ಮೂರ್ತಿ ಬಳಿ ಮೋಜು-ಮಸ್ತಿ ಮಾಡುತ್ತಾರೆ. ವಾರದ ಹಿಂದೆ ಅಮಲಿನಲ್ಲಿ ಅಲೆದಾಡುತ್ತಿದ್ದ ಆ ಮೂವರು ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ನಂತರ ನಡೆದ ವೈದ್ಯಕೀಯ ತಪಾಸಣೆಯಲ್ಲಿಯೂ ವಿಪರೀತ ಪ್ರಮಾಣದಲ್ಲಿ ಗಾಂಜಾ ಸೇವಿಸಿರುವುದು ದೃಢವಾಗಿದೆ.
ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಆ ಮೂವರು ಅಡ್ಡದಾರಿ ಹಿಡಿದಿದನ್ನು ನೋಡಿ ಪೊಲೀಸರು ಕೆಂಡಾಮAಡಲರಾಗಿದ್ದಾರೆ. ಸಿಕ್ಕಿರುವ ಒಳ್ಳೆಯ ಉದ್ಯೋಗವನ್ನು ಸದುಪಯೋಗಪಡಿಸಿಕೊಂಡು ಉತ್ತಮ ನಾಗರಿಕರಾಗಿ ಎಂದು ಬುದ್ದಿಮಾತು ಹೇಳಿದ್ದಾರೆ. ಅದಾಗಿಯೂ, ನಶೆಯಿಂದಿಳಿಯದ ಆ ಮೂವರ ವಿರುದ್ಧವೂ ಕೇಸು ದಾಖಲಿಸಿದ್ದಾರೆ.
`ಮಾದಕ ವ್ಯಸನಗಳು ಬದುಕಿಗೆ ಮಾರಕ’