ಈದ್ ಮಿಲಾದ್ ಮೆರವಣಿಗೆಯಲ್ಲಿ ವಿದೇಶಿ ಬಾವುಟ ಹಾರಿಸಿದ ಮಹಮದ್ ಶೇಖ್ ಅವರನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಮಹಮದ್ ಶೇಖ್ ಉದ್ದೇಶಪೂರ್ವಕವಾಗಿ ಈ ಧ್ವಜ ಹಾರಾಟ ನಡೆಸಿರುವುದು ತನಿಖೆಯಿಂದ ಗೊತ್ತಾಗಿದೆ.
ಅಗಸ್ಟ 26ರಂದು ಅಂಕೋಲಾದಲ್ಲಿ ಅದ್ಧೂರಿಯಾಗಿ ಈದ್ ಮಿಲಾದ್ ಆಚರಣೆ ನಡೆದಿದ್ದು, ಹಬ್ಬದ ಮೆರವಣಿಗೆಯಲ್ಲಿ ಬೆಳಗ್ಗೆ 11.30ರ ವೇಳೆಗೆ ಅಹಿತಕರ ಘಟನೆಯೊಂದು ನಡೆದಿದೆ. ಅಂಕೋಲಾ ಕೃಷ್ಣಪುರದ ವಿಠ್ಠಲಘಾಟ್ ಪ್ರದೇಶದ ಮಹಮದ್ ರಜಾ ಶೇಖ್ ಮಹಮದ್ ಅಕ್ಬರ್ (29) ಅವರು ಈ ಮೆರವಣಿಗೆಯಲ್ಲಿ ಪ್ಯಾಲೆಸ್ಟಿನ್ ದೇಶದ ಧ್ವಜ ಹಾರಿಸಿದ್ದಾರೆ. ಇದನ್ನು ನೋಡಿದ ಪಿಐ ಚಂದ್ರಶೇಖರ ಮಠಪತಿ ಅವರು ತಕ್ಷಣ ಅಲ್ಲಿಗೆ ಧಾವಿಸಿ ಆ ಧ್ವಜ ಹಾರಾಟವನ್ನು ತಡೆದಿದ್ದಾರೆ. ಧರ್ಮದ ಮುಖಂಡರ ಮುಂದಾಳತ್ವದಲ್ಲಿಯೇ ಆ ಬಾವುಟವನ್ನು ಅವರು ವಶಕ್ಕೆಪಡೆದಿದ್ದಾರೆ.
ಧ್ವಜ ದೂರ ಸರಿಸುವ ಪ್ರಕ್ರಿಯೆಗೆ ಸಮುದಾಯದ ಮುಖಂಡರು ಸಹಕಾರ ನೀಡಿದ್ದು, ಅಲ್ಲಿಯೇ ಮಹಮದ್ ರಜಾ ಶೇಖ್ ಅವರಿಗೆ ಬುದ್ದಿವಾದ ಹೇಳಿದ್ದಾರೆ. ಈ ವೇಳೆ ಗಲಾಟೆ ನಡೆಯುವ ಸನ್ನಿವೇಶ ನಿರ್ಮಾಣವಾಗಿದ್ದು, ಪೊಲೀಸರ ಸಮಯಪ್ರಜ್ಞೆಯಿಂದ ಸಮಸ್ಯೆ ಆಗಿಲ್ಲ. ಈದ್ ಮೆರವಣಿಗೆ ಶಾಂತಿಯುತವಾಗಿ ಪೂರ್ಣಗೊಂಡ ನಂತರ ಪೊಲೀಸರು ಈ ಪ್ರಕರಣದ ವಿಚಾರಣೆ ಶುರು ಮಾಡಿದ್ದಾರೆ. `ಸಾರ್ವಜನಿಕ ಪ್ರದೇಶದಲ್ಲಿ ಈ ಬಗೆಯ ವರ್ತನೆ ಸರಿಯಲ್ಲ’ ಎಂದು ಪೊಲೀಸರು ಆರೋಪಿಗೆ ಬುದ್ದಿವಾದವನ್ನು ಹೇಳಿದ್ದಾರೆ.
ವಿದೇಶಿ ಧ್ವಜ ಹಾರಾಟ ನಡೆಸಿದ ಕಾರಣ ಮಹಮದ್ ರಜಾ ಶೇಖ್ ಅವರನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
`ಸಾರ್ವಜನಿಕ ಪ್ರದೇಶದಲ್ಲಿ ಶಾಂತಿ ಕಾಪಾಡಿ’