ಆಲ್ಯುಮಿನಿಯಂ ಏಣಿ ಬಳಸಿ ಅಡಿಕೆ ಮರ ಏರಿದ್ದ ಶ್ರೀನಿವಾಸ ಶೆಟ್ಟಿ ಅವರು ಆ ಮರದಿಂದ ಕೆಳಗೆ ಬಿದ್ದು ಸಾವನಪ್ಪಿದ್ದಾರೆ. ಆಲ್ಯುಮಿನಿಯಂ ಏಣಿಗೆ ವಿದ್ಯುತ್ ತಂತಿ ಸ್ಪರ್ಶದಿಂದಾಗಿ ಅವರು ನೆಲಕ್ಕೆ ಅಪ್ಪಳಿಸಿದ್ದಾರೆ.
ಭಟ್ಕಳದ ಹಾಡುವಳ್ಳಿ ಕುಂಟವಾಣಿಯಲ್ಲಿ ಶ್ರೀನಿವಾಸ ಚಿಕ್ಕಯ್ಯ ಶೆಟ್ಟಿ ಅವರು ವಾಸವಾಗಿದ್ದರು. 62 ವರ್ಷದ ಅವರು ಕೃಷಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಅಡಿಕೆ ತೋಟ ಹೊಂದಿದ್ದ ಅವರು ನಿತ್ಯವೂ ಅಲ್ಲಿ ದುಡಿಯುತ್ತಿದ್ದರು. ಅಗಸ್ಟ 23ರ ಸಂಜೆ 6 ಗಂಟೆ ಅವಧಿಗೆ ಅವರು ತೋಟಕ್ಕೆ ಹೋಗಿದ್ದರು. ಅಲ್ಲಿದ್ದ ಆಲ್ಯುಮಿನಿಯಂ ಏಣಿ ಬಳಸಿ ಅವರು ಅಡಿಕೆ ಮರ ಹತ್ತಿದ್ದರು. ಈ ವೇಳೆ ಏಣಿ ಕೊಂಚ ಜಾರಿದ್ದು, ಸಮೀಪದಲ್ಲಿದ್ದ 11 ಕೆವಿಯ ವಿದ್ಯುತ್ ತಂತಿಗೆ ತಗುಲಿತು. ಅದರ ಪರಿಣಾಮ ಶ್ರೀನಿವಾಸ ಶೆಟ್ಟಿ ಅವರಿಗೆ ವಿದ್ಯುತ್ ಶಾಕ್ ಹೊಡೆಯಿತು.
ಅಡಿಕೆ ಮರದಿಂದ ಶ್ರೀನಿವಾಸ ಶೆಟ್ಟಿ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಆ ನೋವಿನಲ್ಲಿ ಅಲ್ಲಿಯೇ ಅವರು ಕೊನೆಯುಸಿರೆಳೆದರು. ಸಂಜೆಯಾದರೂ ಶ್ರೀನಿವಾಸ ಶೆಟ್ಟಿ ಅವರು ಮನೆಗೆ ಬಾರದ ಕಾರಣ ಅವರ ಮಗ ಪ್ರಶಾಂತ ಶೆಟ್ಟಿ ಅವರು ತೋಟದ ಕಡೆ ಹೋದರು. ಅಲ್ಲಿ ಹುಡುಕಾಟ ಶುರು ಮಾಡಿದಾಗ ಶ್ರೀನಿವಾಸ ಶೆಟ್ಟಿ ಅವರು ಶವವಾಗಿದ್ದರು.
`ಕೃಷಿ ಕೆಲಸ ಮಾಡುವಾಗ ಜಾಗೃತೆ’