ವೆಂಕಟಾಪುರದಲ್ಲಿ ಡೆಂಟಲ್ ಡಾಕ್ಟರ್ ಆಗಿರುವ ಡಾ ಗಣಪತಿ ಮೊಗೇರ್ ಅವರು ತಮ್ಮ ಕ್ಲಿನಿಕ್’ಗೆ ಬರುವ ಮಹಿಳೆಯರನ್ನು ಬಲೆಗೆ ಬೀಳಿಸಿಕೊಂಡು, ನಂತರ ಅವರ ವಿಡಿಯೋ ಅವರಿಗೆ ಕಾಣಿಸಿ ಬ್ಲಾಕ್‌ಮೇಲ್ ಮಾಡುವ ಆರೋಪ ಎದುರಿಸುತ್ತಿದ್ದಾರೆ. ಡಾ ಗಣಪತಿ ಮೊಗೇರ್ ಸರಸ-ಸಲ್ಲಾಪ ಹಾಗೂ ವಿಡಿಯೋ ರಹಸ್ಯದ ಸಾಕ್ಷಿ ಸಂಗ್ರಹಿಸಿದ ಅವರ ಪತ್ನಿ ಮಂಗಲಾ ಮೊಗೇರ್ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಡಾ ಗಣಪತಿ ಮೊಗೇರ್ ಅವರು ಮೊದಲು ಉತ್ತರ ಪ್ರದೇಶದ ಡೆಂಟಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಮಂಗಲಾ ಮೊಗೇರ್ ಅವರು ಬೆಂಗಳೂರಿನಲ್ಲಿ ಎಂ ಸಿ ಎ ಓದುತ್ತಿದ್ದರು. 2009ರಲ್ಲಿ ಮುರುಡೇಶ್ವರದಲ್ಲಿ ಅವರಿಬ್ಬರು ಮದುವೆ ಆದರು. ಈ ದಂಪತಿಗೆ ಎರಡು ಮಕ್ಕಳಿದ್ದು, ಆರಂಭದಲ್ಲಿ ಅವರ ಸಂಸಾರ ಚನ್ನಾಗಿಯೇ ನಡೆಯುತ್ತಿತ್ತು. 2017ರಲ್ಲಿ ಡಾ ಗಣಪತಿ ಮೊಗೇರ್ ಅವರು ಭಟ್ಕಳದಲ್ಲಿ ಕ್ಲಿನಿಕ್ ಶುರು ಮಾಡಿದರು. ಗಣಪತಿ ಮೊಗೇರ್ ಅವರು ಯಾವಾಗಲೂ ಫೋನಿನಲ್ಲಿ ಬ್ಯುಸಿಯಾಗಿದ್ದು, ಹೆಂಗಸರ ಬಳಿಯೇ ಹೆಚ್ಚು ಮಾತನಾಡುತ್ತಿದ್ದರು. ಈ ಬಗ್ಗೆ ಮಂಗಲಾ ಮೊಗೇರ್ ಅವರು ಪ್ರಶ್ನಿಸಿದಾಗ ಹಾರಿಕೆ ಉತ್ತರ ನೀಡಿ ತಪ್ಪಿಸಿಕೊಳ್ಳುತ್ತಿದ್ದರು.
5 ವರ್ಷದ ಹಿಂದೆ ಡಾ ಗಣಪತಿ ಮೊಗೇರ್ ಅವರ ಅನೈತಿಕ ಸಂಬoಧದ ಬಗ್ಗೆ ಮಂಗಲಾ ಮೊಗೇರ್ ಅವರಿಗೆ ಗೊತ್ತಾಯಿತು. ಆಗ, ಅವರಿಬ್ಬರ ನಡುವೆ ದೊಡ್ಡ ಜಟಾಪಟಿ ನಡೆದಿದ್ದು, ಅದು ವಿಚ್ಛೇದನದವರೆಗೆ ಹೋಗಿತ್ತು. 2020ರಲ್ಲಿ ಮಂಗಲಾ ಮೊಗೇರ್ ಅವರು ಪೊಲೀಸ್ ದೂರು ನೀಡಿದಾಗ ಮಹಿಳಾ ಸಾಂತ್ವಾನ ಕೇಂದ್ರದ ಮೂಲಕ ಆ ಪ್ರಕರಣ ರಾಜಿ ಮಾಡಲಾಯಿತು. ಈ ವೇಳೆ ಗಣಪತಿ ಮೊಗೇರ್ ಅವರ ಜೊತೆ ಸಂಪರ್ಕದಲ್ಲಿದ್ದ ಮಹಿಳೆಯರನ್ನು ಕರೆಯಿಸಿ ಅವರಿಗೂ ಬುದ್ದಿ ಹೇಳಲಾಗಿತ್ತು. ಅದಾಗಿ ಎರಡು ತಿಂಗಳ ನಂತರ ಡಾ ಗಣಪತಿ ಮೊಗೇರ್ ಅವರು ಮತ್ತೆ ಅದೇ ಮಹಿಳೆ ಜೊತೆ ಖಾಸಗಿ ಕೋಣೆಯಲ್ಲಿದ್ದಾಗ ಊರಿನ ಜನ ಹಿಡಿದು ಹೊಡೆದಿದ್ದರು. ವೈದ್ಯರು ಸಿಕ್ಕಿಬಿದ್ದ ವಿಡಿಯೋ ಮಾಡಿದ್ದರು. ಆ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ಅದು ಮಂಗಲಾ ಮೊಗೇರ್ ಅವರ ಮೊಬೈಲಿಗೂ ಬಂದಿತ್ತು. ಅದಾಗಿಯೂ, ಗಣಪತಿ ಮೊಗೇರ್ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.
ಕ್ಲಿನಿಕ್ ಮುಗಿಸಿ ಮನೆಗೆ ಬಂದ ನಂತರವೂ ಬೇರೆ ಡಾ ಗಣಪತಿ ಮೊಗೇರ್ ಅವರು ಬೇರೆ ಬೇರೆ ಮಹಿಳೆಯರ ಜೊತೆ ಚಾಟಿಂಗ್ ಮಾಡುತ್ತಿದ್ದರು. ಮಗನಿಗೆ ಜ್ವರ ಬಂದರೂ ಮಹಡಿ ಮೇಲೆ ಚಾಟಿಂಗ್ ಮಾಡುತ್ತಿದ್ದ ಅವರು ಚಿಕಿತ್ಸೆಗೆ ಕರೆದೊಯ್ದಿರಲಿಲ್ಲ. ಮಕ್ಕಳನ್ನು ಶಾಲೆಗೆ ಸೇರಿಸಲು ಹಾಗೂ ಪಾಲಕರ ಸಭೆಗಳಿಗೆ ಸಹ ಹೋಗುತ್ತಿರಲಿಲ್ಲ. ಕುಟುಂಬವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದ ಅವರು ಮತ್ತೆ ಮೂವರು ಮಹಿಳೆಯರ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಜೂನ್ 6ರಂದು ಈ ವಿಷಯ ಮಂಗಲಾ ಮೊಗೇರ್ ಅವರಿಗೆ ಗೊತ್ತಾಗಿದ್ದು, ಆ ಮಹಿಳೆಯರಲ್ಲಿ ಒಬ್ಬರ ಪತಿಗೂ ಅಕ್ರಮ ಸಂಬoಧದ ಬಗ್ಗೆ ಗೊತ್ತಾಯಿತು. ಹೀಗಾಗಿ ಮಹಿಳೆಯೊಬ್ಬರು ಡಾ ಗಣಪತಿ ಮೊಗೇರ್ ಅವರ ಮನೆ ಮುಂದೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದು ಊರಿನವರು ಆ ಪ್ರಯತ್ನ ವಿಫಲಗೊಳಿಸಿದ್ದರು.
ಈ ಎಲ್ಲಾ ವಿಷಯ ನೋಡಿದ ಮಂಗಲಾ ಮೊಗೇರ್ ಅವರು ಸಾಕಷ್ಟು ಒತ್ತಡಕ್ಕೆ ಸಿಲುಕಿದರು. ಇದರಿಂದ ಅಸ್ವಸ್ಥರಾದ ಅವರು ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಾದರು. ಅದಾಗಿಯೂ ತಲೆಕೆಡಿಸಿಕೊಳ್ಳದ ಡಾ ಗಣಪತಿ ಮೊಗೇರ್ ಅವರು ತಮ್ಮ ಮಕ್ಕಳಿಗೆ ಮೂರು ಲೋಟ ಫಿನೈಯಲ್ ಕುಡಿಸಿ ತಾನೂ ಕುಡಿಯುವುದಾಗಿ ಬೆದರಿಸಿದರು. `ಡಾ ಗಣಪತಿ ಮೊಗೇರ್ ಅವರ ಅಕ್ರಮ ಸಂಬoಧದ ವಿಡಿಯೋಗಳು ನನ್ನಲ್ಲಿದ್ದು, ಅವರ ಈ ವರ್ತನೆಯಿಂದ ಅನೇಕ ಸಂಸಾರ ಹಾಳಾಗುತ್ತಿದೆ. ಹೀಗಾಗಿ ಅವರಿಗೆ ಕಠಿಣ ಶಿಕ್ಷೆ ವಿಧಿಸಿ’ ಎಂದು ಮಂಗಲಾ ಮೊಗೇರ್ ಅವರು ತುಮಕೂರಿನಲ್ಲಿ ಪೊಲೀಸ್ ದೂರು ನೀಡಿದ್ದಾರೆ. ಆ ದೂರಿನಲ್ಲಿ ಡಾ ಗಣಪತಿ ಮೊಗೇರ್ ಅವರ ಜೊತೆ ಅಕ್ರಮ ಸಂಬoಧಹೊoದಿದವರ ಹೆಸರು-ಫೋನ್ ನಂ ಸಹ ನಮೂದಿಸಿದ್ದು, ಆ ದೂರು ಈಚೆಗೆ ಭಟ್ಕಳಕ್ಕೆ ವರ್ಗವಾಗಿದೆ. ಪೊಲೀಸರು ಈ ವಿಷಯದ ಸತ್ಯಾಸತ್ಯತೆ ಪರಿಶೀಲನೆ ನಡೆಸಿದ್ದಾರೆ.