ಮೂವರು ಸಂಚರಿಸುತ್ತಿದ್ದ ಬೈಕಿಗೆ ಬುಲೆರೋ ಗುದ್ದಿದ್ದು, ಆ ಅಪಘಾತದ ರಭಸಕ್ಕೆ ಕೃಷ್ಣ ಸಿದ್ದಿ ಅವರು ಸಾವನಪ್ಪಿದ್ದಾರೆ. ಬೈಕಿನಲ್ಲಿದ್ದ ಉಳಿದವರಿಬ್ಬರು ಚಿಕಿತ್ಸೆಪಡೆಯುತ್ತಿದ್ದಾರೆ.
Advertisement. Scroll to continue reading.
ಅಗಸ್ಟ 30ರಂದು ಯಲ್ಲಾಪುರದ ಉಮ್ಮಚ್ಗಿ ಬಳಿಯ ಭರತನಳ್ಳಿ ಬಳಿ ಈ ಅಪಘಾತ ನಡೆದಿದೆ. ಅಪಘಾತದಲ್ಲಿ ಬೈಕಿನಲ್ಲಿದ್ದ ಶಿರಸಿ ಜಡ್ಡಿಗದ್ದೆಯ ಕೃಷ್ಣ ಬಾಬು ಸಿದ್ದಿ, ಸುನಂದ ಕೃಷ್ಣ ಸಿದ್ದಿ ಹಾಗೂ ಸಮನ್ವಿ ಅಣ್ಣಪ್ಪ ಸಿದ್ದಿ ಎಂಬ ಮಗು ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕೃಷ್ಣ ಸಿದ್ದಿ ಅವರು ಹುಬ್ಬಳ್ಳಿಯಲ್ಲಿ ಸಾವನಪ್ಪಿದ್ದಾರೆ. ಯಲ್ಲಾಪುರ ನೂತನ ನಗರ ಜಡ್ಡಿಯ ಕಾರ್ ಮೆಕಾನಿಕ್ ಮಹಮದ್ ಗಪೂರ್ ಸಂಶೂದ್ದಿನ್ ಶೇಖ್ ಅವರ ವೇಗದ ಬುಲೆರೋ ಚಾಲನೆ ಈ ಅವಘಡಕ್ಕೆ ಮುಖ್ಯ ಕಾರಣ ಎಂದು ದೂರಲಾಗಿದೆ.
Advertisement. Scroll to continue reading.
ಉಮ್ಮಚ್ಗಿಯಿಂದ ಭರತನಳ್ಳಿ ಕಡೆ ವೇಗವಾಗಿ ಚಲಿಸಿದ ಬುಲೆರೋ ಎದುರಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಗಾಯಗೊಂಡವರನ್ನು ಮೊದಲು ಯಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್’ಗೆ ಕರೆದೊಯ್ಯಲಾಗಿದೆ. ಆದರೆ, ಅಲ್ಲಿ ಕೃಷ್ಣ ಸಿದ್ದಿ ಅವರು ಕೊನೆಯುಸಿರೆಳೆದಿದ್ದಾರೆ. ಈ ಎಲ್ಲಾ ವಿಷಯದ ಬಗ್ಗೆ ಅಂಕೋಲಾ ಕಲ್ಲೇಶ್ವರದ ದೇವರಾಜ ಲಕ್ಷಣ ಸಿದ್ದಿ ಅವರು ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.