ಶಾಲೆಯಲ್ಲಿನ ಸಣ್ಣಪುಟ್ಟ ದುರಸ್ಥಿಗೆ ಬ್ಯಾಂಕ್ ಖಾತೆಯಲ್ಲಿ ಕಾಸಿದ್ದರೂ ಅದನ್ನು ಉಳಿಸುವುದಕ್ಕಾಗಿ ಶಿಕ್ಷಕರೊಬ್ಬರು ಮಕ್ಕಳನ್ನು ಅಪಾಯಕಾರಿ ಕೆಲಸಕ್ಕೆ ನಿಯೋಜಿಸಿದ್ದಾರೆ. ಮಳೆಗಾಲದಲ್ಲಿ ಜಾರುವ ಹಂಚುಗಳ ಮೇಲೆ ಶಿಕ್ಷಕರೊಬ್ಬರು ಮಕ್ಕಳನ್ನು ಹತ್ತಿಸಿದ್ದು, ಶಾಲೆಯಲ್ಲಿನ ಸುರಕ್ಷತೆಯ ಬಗ್ಗೆ ಆತಂಕವ್ಯಕ್ತವಾಗಿದೆ.
Advertisement. Scroll to continue reading.
ಶಿರಸಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 3ರಲ್ಲಿ ವಿದ್ಯಾರ್ಥಿಗಳು ಈ ದಿನ ಅಪಾಯಕಾರಿ ಕೆಲಸಗಳನ್ನು ಮಾಡಿದ್ದಾರೆ. ಶಿಕ್ಷಕರೊಬ್ಬರ ಸೂಚನೆ ಮೇರೆಗೆ ಅಲ್ಲಿನ ಮಕ್ಕಳು ಶಾಲೆಯ ಮಹಡಿ ಹತ್ತಿ ಸ್ವಚ್ಛಗೊಳಿಸಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಶಿರಸಿ ಡಿಡಿಪಿಐ ಡಿ ಆರ್ ನಾಯಕ ಅವರು ತಕ್ಷಣ ಈ ಬಗ್ಗೆ ವರದಿ ನೀಡುವಂತೆ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ. ಅದರನ್ವಯ ಶಿಕ್ಷಣ ಇಲಾಖೆ ಅಧಿಕಾರಿಗಳಿಬ್ಬರು ಶಾಲೆಗೆ ಭೇಟಿ ನೀಡಿ ವಿವರ ಸಂಗ್ರಹಿಸಿದ್ದಾರೆ.
Advertisement. Scroll to continue reading.
`ಭಾನುವಾರ ಸುರಿದ ಸೋಮವಾರ ಶಾಲೆಯ ಒಳಗೆ ನೀರು ನುಗ್ಗಿದ್ದು ಅದನ್ನು ಗಮನಿಸಿದ ಶಿಕ್ಷಕರೊಬ್ಬರು ಹಂಚು ಸರಿಪಡಿಸುವ ಕೆಲಸಕ್ಕೆ ಮಕ್ಕಳನ್ನು ನಿಯೋಜಿಸಿದ್ದಾರೆ. ಅಪಾಯಕಾರಿ ಹಂಚುಗಳ ಮೇಲೆ ಮಕ್ಕಳು ಸರ್ಕಸ್ ಮಾಡಿದ್ದಾರೆ. ಶಿಕ್ಷಣಪಡೆಯಲು ಬರುವ ಮಕ್ಕಳನ್ನು ಇಂಥ ಸ್ವಚ್ಚತಾ ಕೆಲಸಕ್ಕೆ ನಿಯೋಜಿಸಿರುವುದು ಸರಿಯಲ್ಲ’ ಎಂಬುದು ಅಲ್ಲಿನವರ ಆಕ್ಷೇಪ. `ಶಿಕ್ಷಕರೊಬ್ಬರ ಸೂಚನೆ ಪ್ರಕಾರ ಮಕ್ಕಳು ಮಹಡಿ ಏರಿದ್ದಾರೆ. ಕೈಯಲ್ಲಿ ಪೊರಕೆಹಿಡಿದು ಹಂಚು ಸ್ವಚ್ಛಗೊಳಿಸುವ ಕೆಲಸ ಮಾಡಿದ್ದಾರೆ. ಶಾಲಾ ಸಮವಸ್ತçಧರಿಸಿಯೇ ಮಕ್ಕಳು ಈ ಕೆಲಸ ಮಾಡಿದ್ದು, ಸರ್ಕಾರಿ ಶಾಲೆಗೆ ಬರುವ ಮಕ್ಕಳು ಈ ರೀತಿ ಬಳಸಿಕೊಳ್ಳುವುದು ಸೂಕ್ತವಲ್ಲ’ ಎಂಬುದು ಜನರ ದೂರು.
ಆದರೆ, `ಭಾನುವಾರ ಶಾಲೆಯಲ್ಲಿ ಕಳ್ಳತನ ನಡೆದಿದ್ದು, ಹಂಚು ಒಡೆದು ಕಳ್ಳರು ಒಳಗೆ ನುಗ್ಗಿದ್ದರು. ಶಾಲೆ ಶುರುವಾಗುವ ಮುನ್ನ ಆಗಮಿಸಿದ ಮಕ್ಕಳು ಹಂಚು ಒಡೆದಿರುವುದನ್ನು ನೋಡಿ ಅವರೇ ಸ್ವಯಂ ಪ್ರೇರಣೆಯಿಂದ ಅದನ್ನು ಸರಿಪಡಿಸಲು ಮುಂದಾದರು. ಈ ವೇಳೆ ಮಕ್ಕಳು ಅಪಾಯಕಾರಿ ಸ್ಥಿತಿಯಲ್ಲಿರುವುದನ್ನು ನೋಡಿದ ಅತಿಥಿ ಶಿಕ್ಷಕ ಮಾರುತಿ ವಿಜಿ ಅವರು ಕೂಡಲೇ ಮಕ್ಕಳನ್ನು ಕೆಳಗಿಳಿಸಿದರು. ಈ ವೇಳೆ ಯಾರೋ ಫೋಟೋ-ವಿಡಿಯೋ ಮಾಡಿದ್ದು, ಅದು ಅಪಾರ್ಥಕ್ಕೆ ಕಾರಣವಾಯಿತು’ ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಗಳ ಮಾತು. ಸದ್ಯ ಶಾಲೆಗೆ ಭೇಟಿ ನೀಡಿ ವರದಿಪಡೆದ ಅಧಿಕಾರಿಗಳು ಸಹ ಇದೇ ಬಗೆಯಲ್ಲಿ ವರದಿ ನೀಡಿದ್ದು, `ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ಕಟಾವುಕರ್ ಅವರು ಶಾಲೆಗೆ ಬರುವ ಮುನ್ನ ಈ ವಿದ್ಯಮಾನ ನಡೆದಿದೆ’ ಎಂದು ವಿವರಿಸಲಾಗಿದೆ.
`ಮೇಲಧಿಕಾರಿಗಳ ಸೂಚನೆ ಅನ್ವಯ ಶಾಲೆಗೆ ಸಿಆರ್‌ಪಿ’ಗಳಿಬ್ಬರು ಭೇಟಿ ನೀಡಿ ವಿವರಪಡೆದಿದ್ದಾರೆ. ಈ ಬಗ್ಗೆ ಸಮಗ್ರ ವರದಿಯನ್ನು ಡಿಡಿಪಿಐ ಅವರಿಗೆ ಸಲ್ಲಿಸಲಾಗುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಎಚ್ ನಾಯ್ಕ ಅವರು ಹೇಳಿದ್ದಾರೆ. `ಶಾಲಾ ಮಕ್ಕಳ ಸುರಕ್ಷತೆಗೆ ಅಧಿಕ ಒತ್ತು ನೀಡುವಂತೆ ಎಲ್ಲರಿಗೂ ಸೂಚಿಸಲಾಗುತ್ತದೆ. ಇಂಥ ತಪ್ಪು ಮರುಕಳಿಸಲು ಅವಕಾಶ ನೀಡುವುದಿಲ್ಲ’ ಎಂದು ಡಿಡಿಪಿಐ ಡಿ ಆರ್ ನಾಯಕ ಅವರು ಮೊಬೈಲ್ ಮಿಡಿಯಾ ನೆಟ್‌ವರ್ಕಗೆ ಪ್ರತಿಕ್ರಿಯಿಸಿದ್ದಾರೆ.