ಅಡುಗೆ ಕೆಲಸ ಮಾಡಿಕೊಂಡಿದ್ದ ವಸಂತ ಹೆಗಡೆ ಅವರಿಗೆ ಹೊಟ್ಟೆಯೊಳಗೆ ಗಡ್ಡೆ ಬೆಳೆದಿದ್ದು, ಆಪರೇಶನ್’ಗೆ ಹೆದರಿ ಅವರು ಪ್ರಾಣಬಿಟ್ಟಿದ್ದಾರೆ. ವಸಂತ ಹೆಗಡೆ ಅವರು ದೇವರ ಮನೆಯೊಳಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
Advertisement. Scroll to continue reading.
ಕುಮಟಾ ಮುಗ್ವೇಖಾನವಾಡಿಯ ಎತ್ತಿನಬೈಲ್ ಬಳಿಯ ಗೌಡಗುಳಿಯಲ್ಲಿ ವಸಂತ ವಿಘ್ನೇಶ್ವರ ಹೆಗಡೆ ಅವರು ವಾಸವಾಗಿದ್ದರು. 35 ವರ್ಷದ ಅವರು ಕೃಷಿ ಕೆಲಸದ ಜೊತೆ ಅಡುಗೆ ಮಾಡುವುದರಲ್ಲಿ ಪರಿಣಿತರಾಗಿದ್ದರು. ಎರಡು ವರ್ಷದ ಹಿಂದೆ ಅವರಿಗೆ ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ತಪಾಸಣೆಗೆ ಒಳಗಾದಾಗ ಹೊಟ್ಟೆಯ ಬಲಭಾಗದಲ್ಲಿ ಗಡ್ಡೆಯಿರುವುದು ಗೊತ್ತಾಯಿತು. `ಆಪರೇಶನ್ ಮಾಡಿ ಗಡ್ಡೆ ತೆಗೆಯಬೇಕು’ ಎಂದು ವೈದ್ಯರು ಹೇಳಿದ್ದರು. ಅಂದಿನಿAದ ಈವರೆಗೂ ವಸಂತ ಹೆಗಡೆ ಅವರು ಗಡ್ಡೆಯ ಬಗ್ಗೆಯೇ ಚಿಂತಿಸುತ್ತಿದ್ದರು. ಆಪರೇಶನ್ ಬಗ್ಗೆ ಅವರು ಸಾಕಷ್ಟು ಹೆದರಿದ್ದರು.
Advertisement. Scroll to continue reading.
ಗಡ್ಡೆ ಬೆಳೆದಿರುವುದು ಹಾಗೂ ಆಪರೇಶನ್ ಮಾಡಿಸಬೇಕು ಎಂದು ವೈದ್ಯರು ಹೇಳಿದ ಕಾರಣ ವಸಂತ ಹೆಗಡೆ ಅವರು ಮಾನಸಿಕವಾಗಿ ಕುಗ್ಗಿದ್ದರು. ಆ ಆಪರೇಶನ್’ಗೆ ಹೆದರಿದ ಅವರು ಅಗಸ್ಟ 27ರಂದು ದುಡುಕು ನಿರ್ಧಾರಕ್ಕೆ ಮುಂದಾದರು. ಆ ದಿನ ಸಂಜೆ 4ಗಂಟೆಯವರೆಗೂ ಚಿಂತಿಸಿದ ವಸಂತ ಹೆಗಡೆ ಅವರು ನಂತರ ದೇವರಮನೆಗೆ ಹೋದರು. ಅಲ್ಲಿದ್ದ ಫ್ಯಾನಿಗೆ ಹಗ್ಗ ಸಿಕ್ಕಿಸಿ ನೇಣು ಹಾಕಿಕೊಂಡರು. ಸಂಜೆ 7 ಗಂಟೆ ಅವಧಿಗೆ 70 ವರ್ಷದ ವಿಘ್ನೇಶ್ವರ ಗಣೇಶ ಹೆಗಡೆ ಅವರು ದೇವರಮನೆ ಪ್ರವೇಶಿಸಿದ್ದು, ಅಲ್ಲಿ ಅವರ ಮಗ ವಸಂತ ಹೆಗಡೆ ಅವರು ಶವವಾಗಿದ್ದರು.