ಹುಲೇಕಲ್’ನ ಸತೀಶ ಶೇಟ್, ಪುಂಡಳಿಕ್ ಬಾಂದೇಕರ್ ಹಾಗೂ ವೈಕುಂಠ ಮಧು ಅವರಿಗೆ ಸೇರಿದ ಜಾನುವಾರುಗಳನ್ನು ಕದ್ದ ಮೊಹಮ್ಮದ್ ಅಂಡು, ಮೊಹಮದ್ ಇಸ್ಮಾಯಿಲ್ ಹಾಗೂ ಅಬ್ದುಲ್ ಅಜೀಜ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಐಷಾರಾಮಿ ಕಾರುಗಳಲ್ಲಿ ಆಗಮಿಸಿ ದನ ಕದ್ದು ಪರಾರಿಯಾಗಿದ್ದ ಅವರನ್ನು ಪೊಲೀಸರು ಬಂಧಿಸಿದ್ದಾರೆ.
Advertisement. Scroll to continue reading.
ಅಗಸ್ಟ 12ರಂದು ಜಾನುವಾರು ಕಳ್ಳತನ ನಡೆದ ಬಗ್ಗೆ ಶಿರಸಿಯ ಹುಲೆಕಲ್’ನ ವೈಕುಂಠ ಮಧು ಹುಲೆಕಲ್ ಅವರು ಪೊಲೀಸರಲ್ಲಿ ದೂರಿದ್ದರು. ಸೆಂಟ್ ಮಿಲಾಗ್ರಿಸ್ ಬ್ಯಾಂಕಿನ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಕಾರಿನಲ್ಲಿ ಬಂದವರು ಜಾನುವಾರು ಕದ್ದಿರುವುದು ಗೊತ್ತಾಗಿತ್ತು. ಸತೀಶ ಶೇಟ್ ಹಾಗೂ ಪುಂಡಳಿಕ್ ಬಾಂದೇಕರ್ ಅವರ ಜಾನುವಾರುಗಳು ಸಹ ಕೆಲ ದಿನಗಳಿಂದ ಕಾಣುತ್ತಿರಲಿಲ್ಲ. ಅವುಗಳನ್ನು ಸಹ ಕಾರಿನಲ್ಲಿ ಬಂದ ಕಳ್ಳರು ಕದ್ದಿರುವುದು ದೃಢವಾಯಿತು. ಒಟ್ಟು ಆರು ಜಾನುವಾರುಗಳನ್ನು ದುಷ್ಕರ್ಮಿಗಳು ಅಪಹರಿಸಿದ್ದು, ಅದರಿಂದ ಜಾನುವಾರು ಮಾಲಕರು 58500ರೂ ನಷ್ಟ ಅನುಭವಿಸಿದ್ದರು. ಈ ಕಳ್ಳರನ್ನು ಹುಡುಕಿ ಕಠಿಣ ಕ್ರಮ ಜರುಗಿಸುವಂತೆ ವೈಕುಂಠ ಹುಲೆಕಲ್ ಅವರು ಪೊಲೀಸರಲ್ಲಿ ಕೇಳಿಕೊಂಡಿದ್ದರು.
Advertisement. Scroll to continue reading.
ತನಿಖೆ ನಡೆಸಿದ ಪೊಲೀಸರು ರಾತ್ರಿ ವೇಳೆ ರಸ್ತೆ ಬದಿಯಿದ್ದ ಜಾನುವಾರುಗಳನ್ನು ಕದಿಯುತ್ತಿದ್ದ ತಂಡವನ್ನು ಹುಡುಕಿದರು. ಶಿವಮೊಗ್ಗದ ಟಿಪ್ಪುನಗರದ ಮೊಹಮ್ಮದ್ ಅಯಾಜ್ ಅಲಿಯಾಸ್ ಅಂಡು (23), ಸೂಳೆಬೈಲು ನಿವಾಸಿ ಮೊಹಮ್ಮದ್ ಇಸ್ಮಾಯಿಲ್ (36) ಹಾಗೂ ಈದ್ಗಾ ನಗರದ ಅಬ್ದುಲ್ ಅಜೀಜ್ (35) ಜಾನುವಾರು ಕದ್ದಿರುವುದು ಗೊತ್ತಾಗಿದ್ದು, ಅವರ ಬಳಿಯಿದ್ದ ಕಾರನ್ನು ಜಪ್ತು ಮಾಡಿದರು. ಇವರಲ್ಲಿ ಅಯಾಜ್ ವೆಲ್ಡಿಂಗ್ ಕೆಲಸ, ಇಸ್ಮಾಯಿಲ್ ಲಾರಿ ಚಾಲಕ ಹಾಗೂ ಅಬ್ದುಲ್ ಅಜೀಜ್ ಫಿಶ್ ಪ್ಲಾಂಟಿನಲ್ಲಿಲ್ಲಿ ಕೆಲಸ ಮಾಡುತ್ತಿದ್ದು, ಅವರೆಲ್ಲರೂ ರಾತ್ರಿ ವೇಳೆ ಶಿರಸಿಗೆ ಬಂದು ಕದಿಯುವುದನ್ನು ಹವ್ಯಾಸವನ್ನಾಗಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಇನ್ನೂ ಅನೇಕ ಆರೋಪಿಗಳಿರುವ ಅನುಮಾನಗಳಿವೆ.