ಮೀನು ಹಿಡಿಯುವುದಕ್ಕಾಗಿ ಮನೆಯಿಂದ ಹೊರಟಿದ್ದ ಮಂಜುನಾಥ ಹರಿಕಂತ್ರ ಅವರು ನದಿ ನೀರಿಗೆ ಬಿದ್ದು ಸಾವನಪ್ಪಿದ್ದಾರೆ. ಎರಡು ದಿನದಿಂದ ಕಾಣೆಯಾಗಿದ್ದ ಅವರು ಈ ದಿನ ಶವವಾಗಿ ಸಿಕ್ಕಿದ್ದಾರೆ.
Advertisement. Scroll to continue reading.
ಕುಮಟಾ-ಗೋಕರ್ಣ ನಡುವಿನ ಮಾದನಗೇರಿ ಹೊಸನಗರದಲ್ಲಿ ಮಂಜುನಾಥ ರಾಮ ಹರಿಕಂತ್ರ ಅವರು ವಾಸವಾಗಿದ್ದರು. 35 ವರ್ಷದ ಅವರು ಮೀನುಗಾರಿಕೆ ನಡೆಸಿ ಬದುಕು ಕಟ್ಟಿಕೊಂಡಿದ್ದರು. ಅಗಸ್ಟ 26ರಂದು ಬೆಳಗ್ಗೆ ಮೀನುಗಾರಿಕೆಗಾಗಿ ಮನೆಯಿಂದ ಹೋರಟಿದ್ದರು. ಆ ದಿನ ರಾತ್ರಿಯಾದರೂ ಅವರು ಮನೆಗೆ ಮರಳಿರಲಿಲ್ಲ.
Advertisement. Scroll to continue reading.
ಅಗಸ್ಟ 28ರ ಬೆಳಗ್ಗೆ ಗಂಗಾವಳಿ ಸೇತುವೆಯ ತಳಭಾಗದಲ್ಲಿ ಶವವೊಂದು ಕಾಣಿಸಿತು. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಉಳುವರೆ ನದಿ ನೀರಿನಲ್ಲಿ ತೇಲುತ್ತಿದ್ದ ಶವವನ್ನು ಮೇಲೆತ್ತಿದರು. ಸಾವನಪ್ಪಿದ ವ್ಯಕ್ತಿಯ ಕತ್ತಿನಲ್ಲಿ ಆಂಜಿನೇಯನ ಲಾಕೆಟ್ ಹಾಗೂ ಕೈಗೆ ಕಪ್ಪು ದಾರವಿದ್ದು, ಅದರ ಆಧಾರದಲ್ಲಿ ಪೊಲೀಸರು ಗುರುತು ಪತ್ತೆಗೆ ಮುಂದಾದರು. ಅದಾದ ನಂತರ ಸರೋಜಿನಿ ರಾಮಾ ಹರಿಕಂತ್ರ ಅವರು ಆಗಮಿಸಿ ತಮ್ಮ ಮಗನ ಶವ ಗುರುತಿಸಿದರು.
ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿದ್ದು, ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬದವರಿಗೆ ನೀಡಿದ್ದಾರೆ.