ಕಲಗಾರವೊಡ್ಡುವಿನ ಮಂಜುನಾಥ ಭಟ್ಟರ ಮನೆಗೆ ನುಗ್ಗಿದ ಚಂದ್ರಶೇಖರ ಭಟ್ಟ ದಂಪತಿ ಆ ಮನೆಯಲ್ಲಿದ್ದ ವಿವಿಧ ವಸ್ತುಗಳನ್ನು ಅಪಹರಿಸಿದ್ದಾರೆ. ಚಂದ್ರಶೇಖರ ಭಟ್ಟ ಹಾಗೂ ನೇತ್ರಾವತಿ ಭಟ್ಟ ದಂಪತಿ ಸೇರಿ ಕಣ್ಣ ಮುಂದೆಯೇ ಮನೆ ಸಾಮಗ್ರಿ ಅಪಹರಿಸಿದರೂ ಅದನ್ನು ಮಂಜುನಾಥ ಭಟ್ಟ ಅವರಿಂದ ತಡೆಯಲು ಸಾಧ್ಯವಾಗಿಲ್ಲ.
ಶಿರಸಿಯ ಮಂಜವಳ್ಳಿ ಬಳಿಯ ಕಲಗಾರುವಡ್ಡುವಿನ ಬಳಿ ಮಂಜುನಾಥ ಗಣಪತಿ ಭಟ್ಟ ಅವರು ವಾಸವಾಗಿದ್ದಾರೆ. ಕೃಷಿಕರಾಗಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಹಿಸೆ ಪಂಚಾಯತಿ ಮೂಲಕ ಅವರಿಗೆ ಮನೆಯೊಂದು ಸಿಕ್ಕಿದ್ದು, ಅಲ್ಲಿಯೇ ಅವರು ವಾಸವಾಗಿದ್ದಾರೆ. ಆದರೆ, ಅದೇ ಊರಿನ ಚಂದ್ರಶೇಖರ ಭಟ್ಟ ಹಾಗೂ ನೇತ್ರಾವತಿ ಭಟ್ಟ ದಂಪತಿ ಆ ಮನೆ ಬಗ್ಗೆ ತಕರಾರು ಸಲ್ಲಿಸುತ್ತಿದ್ದಾರೆ. ಅದಕ್ಕಾಗಿ ಮಂಜುನಾಥ ಭಟ್ಟ ಅವರು ನ್ಯಾಯಾಲಯದ ಮೊರೆ ಹೊಗಿ ತಡೆಯಾಜ್ಞೆ ತಂದಿದ್ದಾರೆ. ಮನೆ ವಿಷಯದಲ್ಲಿ ಹಸ್ತಕ್ಷೇಪ ಮಾಡದಂತೆ ನ್ಯಾಯಾಲಯ ಸೂಚನೆ ನೀಡಿದರೂ ಚಂದ್ರಶೇಖರ ಭಟ್ಟ ಅವರ ಉಪಟಳ ನಿಂತಿಲ್ಲ.
ಅಗಸ್ಟ 28ರಂದು ಮಂಜುನಾಥ ಭಟ್ಟ ಅವರು ಮನೆಯಲ್ಲಿರಲಿಲ್ಲ. ಬೆಳಗ್ಗೆ ಒಂದು ತಾಸಿನ ಮಟ್ಟಿಗೆ ಅವರು ಹೊರಗೆ ಹೋಗಿದ್ದು, ಅದೇ ವೇಳೆಯಲ್ಲಿ ಚಂದ್ರಶೇಖರ ಭಟ್ಟ ಹಾಗೂ ನೇತ್ರಾವತಿ ಭಟ್ಟ ಅವರು ಮಂಜುನಾಥ ಭಟ್ಟ ಅವರ ಮನೆಗೆ ನುಗ್ಗಿದ್ದಾರೆ. ಮನೆಯ ಬೀಗ ಒಡೆದು ಅಲ್ಲಿದ್ದ ಸಾಮಗ್ರಿಗಳನ್ನು ಬೇರೆಡೆ ಸಾಗಿಸಿದ್ದಾರೆ. ಹಣವನ್ನು ಸೇರಿ 2.10 ಲಕ್ಷ ರೂ ಮೌಲ್ಯದ ಸಾಮಾನುಗಳನ್ನು ಅವರು ಅಲ್ಲಿಂದ ಅಪಹರಿಸಿದ್ದಾರೆ. ಹೊರಗೆ ಹೋಗಿದ್ದ ಮಂಜುನಾಥ ಭಟ್ಟ ಅವರು ಮನೆಗೆ ಮರಳುವಷ್ಟರಲ್ಲಿ ಮನೆಯೊಳಗಿದ್ದ ಸಾಮಗ್ರಿಗಳೆಲ್ಲವು ಖಾಲಿ ಖಾಲಿಯಾಗಿದ್ದು, ಅದನ್ನು ಚಂದ್ರಶೇಖರ ಭಟ್ಟ ಹಾಗೂ ನೇತ್ರಾವತಿ ಭಟ್ಟ ಅವರು ಬೇರೆಡೆ ಸಾಗಿಸುವುದನ್ನು ಅವರು ನೋಡಿದ್ದಾರೆ.
ತಕ್ಷಣ ಅವರ ಬಳಿ ಹೋಗಿ ಈ ಬಗ್ಗೆ ಪ್ರಶ್ನಿಸಿದ್ದಾರೆ. ಆಗ, `ಈ ಮನೆ ನನ್ನದು’ ಎಂದು ಚಂದ್ರಶೇಖರ ಭಟ್ಟ ಅವರು ಬೊಬ್ಬೆ ಹೊಡೆದಿದ್ದಾರೆ. `ನಾನೇ ಬೀಗ ನಾನೇ ಒಡದದ್ದು’ ಎಂದು ಸಹ ಹೇಳಿದ್ದಾರೆ. ಕಣ್ಣ ಮುಂದೆಯೇ ಮನೆ ಸಾಮಗ್ರಿ ಅಪಹರಿಸಿದರೂ ಅದನ್ನು ಮಂಜುನಾಥ ಭಟ್ಟ ಅವರಿಂದ ತಡೆಯಲು ಸಾಧ್ಯವಾಗಿಲ್ಲ. ನ್ಯಾಯಾಲಯದ ತಡೆಯಾಜ್ಞೆಯಿದ್ದರೂ ಮನೆಗೆ ನುಗ್ಗಿ ಹಾನಿ ಮಾಡಿದ ಬಗ್ಗೆ ಮಂಜುನಾಥ ಭಟ್ಟ ಅವರು ಕಾನೂನು ಹೋರಾಟ ಶುರು ಮಾಡಿದ್ದಾರೆ. ತಿಂಗಳ ಹಿಂದೆಯೂ ಚಂದ್ರಶೇಖರ ಭಟ್ಟ ಅವರು ತಮ್ಮ ಮೇಲೆ ಹಲ್ಲೆ ನಡೆಸಿದ ಬಗ್ಗೆ ಅವರು ಪೊಲೀಸರಲ್ಲಿ ದೂರಿದ್ದಾರೆ.
`ನ್ಯಾಯಾಲಯದ ಆದೇಶ ಪಾಲಿಸಿ’