ದೇಸಿ ಭತ್ತದ ತಳಿಗಳನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸ್ಕೊಡ್‌ವೆಸ್ ಸಂಸ್ಥೆಯೂ ನಾಟಿ ಹಬ್ಬ ಆಯೋಜಿಸುತ್ತ ಬಂದಿದ್ದು, ಈ ಬಾರಿಯೂ ವಿವಿಧ ಇಲಾಖೆ ಹಾಗೂ ಸಂಘ-ಸoಸ್ಥೆಗಳ ಸಹಯೋಗಲ್ಲಿ ಅಗಸ್ಟ 11ರಂದು ನಾಟಿ ಹಬ್ಬ ಆಯೋಜಿಸಲು ನಿರ್ಧರಿಸಿದೆ. ಉಂಚಳ್ಳಿ ಗ್ರಾಮದ ತುಡ್ವಿ ಮನೆಯ ಸರಸ್ವತಿ ಫಾರ್ಮ್ನಲ್ಲಿ ಬೆಳಗ್ಗೆ 10 ಗಂಟೆಗೆ ಈ ಹಬ್ಬ ಶುರುವಾಗಲಿದೆ.
ಈ ನಾಟಿ ಹಬ್ಬ ಕಾರ್ಯಕ್ರಮವು ಕೃಷಿ ಕ್ಷೇತ್ರದ ವಿಶೇಷ ಕಾರ್ಯಕ್ರಮವಾಗಿದ್ದು, ಕಾರ್ಯಕ್ರಮದಲ್ಲಿ ನೂರಾರು ಬಗೆಯ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಪರಿಚಯಿಸುವುದರ ಜೊತೆಗೆ, ಅಳಿವಿನಂಚಿನಲ್ಲಿರುವ ಭತ್ತದ ಪ್ರಬೇಧಗಳನ್ನು ಸಂರಕ್ಷಿಸುವ ಕುರಿತಾದ ಸಂಪೂರ್ಣ ಮಾಹಿತಿ ಒದಗಿಸಲಾಗುತ್ತದೆ. ಜೈವಿಕ ಕೃಷಿ, ಜೇನು ಕೃಷಿ, ಕೃಷಿ ಅರಣ್ಯ ಪದ್ಧತಿ, ಬೀಜ ಸಂರಕ್ಷಣೆ ಸೇರಿದಂತೆ ಕೃಷಿಯ ಕುರಿತು ಸಾರ್ವಜನಿಕರಲ್ಲಿ ಆಸಕ್ತಿ ಹುಟ್ಟಿಸುವ ಉದ್ದೇಶದಿಂದ ಈ ವಿನೂತನ ನಾಟಿ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನಾಟಿ ಹಬ್ಬ ಸಂಪೂರ್ಣ ಗ್ರಾಮೀಣ ಸೊಗಡಿನ ಪಾರಂಪರಿಕ ಕೃಷಿ ಚಟುವಟಿಕೆಗಳ ಕುರಿತು ಪ್ರಾತ್ಯಕ್ಷಿಕೆ ನಡೆಯಲಿದ್ದು, ಕೃಷಿ ವಿಜ್ಞಾನಿಗಳು, ವಿವಿಧ ಇಲಾಖಾ ಅಧಿಕಾರಿಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಪ್ರಗತಿಪರ ಕೃಷಿಕರು, ವಿವಿಧ ಸಂಘ-ಸAಸ್ಥೆಗಳ ಮುಖ್ಯಸ್ಥರು, ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರುಗಳು, ಸ್ವಯಂ ಸೇವಕರು ಗದ್ದೆಗೆ ಇಳಿದು ನಾಟಿ ಮಾಡಲಿದ್ದಾರೆ ಎಂದು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಅವರು ತಿಳಿಸಿದ್ದಾರೆ.