ಶನಿವಾರ ಅರಬೈಲ್ ಘಟ್ಟದ ಬಳಿ ಸರ್ಕಾರಿ ಬಸ್ಸಿಗೆ ಟೆಂಪೋ ಡಿಕ್ಕಿ ಹೊಡೆದಿದ್ದು, ಈ ಅಪಘಾತದಲ್ಲಿ 10 ಜನ ಗಾಯಗೊಂಡಿದ್ದಾರೆ. ಮಹಿಳೆಯೊಬ್ಬರ ಕೈ ಮುರಿದಿದೆ.
Advertisement. Scroll to continue reading.
ಭಟ್ಕಳದಿಂದ ರಾಯಭಾಗಕ್ಕೆ ಕೆಎಸ್‌ಆರ್‌ಟಿಸಿ ಬಸ್ಸು ಹೊರಟಿತ್ತು. ಈ ಬಸ್ಸಿಗೆ ಪೂಣೆಯಿಂದ ಹೊರಟ ಟೆಂಪೋ ಯಲ್ಲಾಪುರದಲ್ಲಿ ಡಿಕ್ಕಿಯಾಯಿತು. ಅಪಘಾತ ವಲಯವಾದ ಅರಬೈಲ್ ಘಟ್ಟದ ಬಗ್ಗೆ ಟೆಂಪೋ ಚಾಲಕನಿಗೆ ಸಂಪೂರ್ಣ ಅರಿವಿಲ್ಲದಿರುವುದು ಅಪಘಾತಕ್ಕೆ ಕಾರಣವಾಗಿದ್ದು, ಪರಿಣಾಮ ಪ್ರಯಾಣಿಕರು ತೊಂದರೆ ಅನುಭವಿಸಿದರು. ತಿರುವಿನ ಪ್ರದೇಶದಲ್ಲಿಯೂ ವೇಗವಾಗಿದ್ದ ಟೆಂಪೋ ಎದುರಿನಿಂದ ಬಂದ ಬಸ್ಸಿಗೆ ಒಮ್ಮೆಲೆ ಗುದ್ದಿತು. ಗುದ್ದಿದ ರಭಸಕ್ಕೆ ಬಸ್ಸು ಗಟಾರದ ಕಡೆ ತಿರುವಿದ್ದು, ಕೆಎಸ್‌ಆರ್‌ಟಿಸಿ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಪ್ರಮಾಣದ ಅನಾಹುತ ತಪ್ಪಿತು.
Advertisement. Scroll to continue reading.
ಅದಾಗಿಯೂ, ಬಸ್ಸು ಹಾಗೂ ಟೆಂಪೋದಲ್ಲಿದ್ದ 10 ಪ್ರಯಾಣಿಕರಿಗೆ ಅಲ್ಲಲ್ಲಿ ನೋವಾಯಿತು. ಅಪಘಾತದ ರಭಸಕ್ಕೆ ಮಹಿಳೆಯೊಬ್ಬರ ಕೈ ಮುರಿಯಿತು. ಗಾಯಗೊಂಡ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಘಾತದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದರು. ರಸ್ತೆ ಮದ್ಯೆ ನಿಂತಿದ್ದ ಟೆಂಪೋವನ್ನು ಬದಿಗೆ ಸರಿಸಿ ಉಳಿದ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟರು.