ಯಲ್ಲಾಪುರದ ಮಾದೇವಕೊಪ್ಪದ ಗೀತಾ ಪಾಂಡ್ರಮೀಸೆ ಅವರು ಕಾಣೆಯಾಗಿದ್ದು, ಅಪಹರಣದ ಶಂಕೆವ್ಯಕ್ತವಾಗಿದೆ. ಬೆಂಗಳೂರಿಗೆ ಹೋಗುವುದಾಗಿ ಹೇಳಿದ್ದ ಅವರು ಅಲ್ಲಿಗೂ ಹೋಗಿಲ್ಲ. ಮೂರು ದಿನ ಕಳೆದರೂ ಮನೆಗೆ ಮರಳಿಲ್ಲ.
Advertisement. Scroll to continue reading.
ಯಲ್ಲಾಪುರದ ಮಾದೇವಕೊಪ್ಪದಲ್ಲಿ ಗೀತಾ ಪಾಂಡ್ರಮೀಸೆ (ಹೆಸರು ಬದಲಿಸಿದೆ) ಅವರು ವಾಸವಾಗಿದ್ದರು. 17 ವರ್ಷದ ಅವರು ಮನೆ ಕೆಲಸ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿರುವ ಸಂಬAಧಿಕರ ಮನೆಗೆ ಹೋಗುವುದಾಗಿ ಅವರು ಈಚೆಗೆ ಮನೆಯಲ್ಲಿ ಹೇಳಿದ್ದರು. ಅದರಂತೆ, ಅಗಸ್ಟ 25ರಂದು ಅವರು ಬೆಂಗಳೂರಿನ ನಾಗವೇಣಿ ವಿಠ್ಠು ಪಾಂಡ್ರಮೀಸೆ ಅವರ ಮನೆಗೆ ತೆರಳಲು ನಿರ್ಧರಿಸಿದ್ದರು. ಆ ದಿನ ರಾತ್ರಿ 8.30ಕ್ಕೆ ಮನೆಯಿಂದ ಹೊರ ಬಿದ್ದ ಅವರು ಎಲ್ಲಿ ಹೋದರು? ಎಂದು ಮಾತ್ರ ಯಾರಿಗೂ ಗೊತ್ತಾಗಲಿಲ್ಲ.
Advertisement. Scroll to continue reading.
ಗೀತಾ ಪಾಂಡ್ರಮೀಸೆ ಅವರ ಮೊಬೈಲಿಗೆ ಅವರ ತಂದೆ ಸಾವು ದೊಂಡು ಪಾಂಡ್ರಮೀಸೆ ಅವರು ಫೋನ್ ಮಾಡಿದರು. ಆದರೆ, ಸಂಪರ್ಕ ಸಾಧ್ಯವಾಗಲಿಲ್ಲ. ಬೆಂಗಳೂರಿನ ಸಂಬoಧಿಕರ ಮನೆಗೆ ಫೋನ್ ಮಾಡಿದರೂ ಅಲ್ಲಿ ಅವರು ಬಂದ ಬಗ್ಗೆ ಮಾಹಿತಿ ಸಿಗಲಿಲ್ಲ. ಮಗಳು ಕಾಣೆಯಾಗಿದ್ದರಿಂದ ಆತಂಕಕ್ಕೆ ಒಳಗಾದ ಸಾವು ಪಾಂಡ್ರಮೀಸೆ ಅವರು ಗೀತಾ ಅವರನ್ನು ದುಷ್ಕರ್ಮಿಗಳು ಅಪಹರಿಸಿರುವ ಶಂಕೆವ್ಯಕ್ತಪಡಿಸಿದರು.
ಈ ಎಲ್ಲಾ ಹಿನ್ನಲೆ ಸಾವು ಪಾಂಡ್ರಮೀಸೆ ಅವರು ಮಗಳ ಪತ್ತೆಗಾಗಿ ಪೊಲೀಸರು ಸಹಾಯ ಯಾಚಿಸಿದರು. ಪ್ರಕರಣ ದಾಖಲಿಸಿಕೊಂಡ ಪಿಸೈ ಮಹಾವೀರ ಕಾಂಬಳೆ ಅವರು ಕಾಣೆಯಾದ ಯುವತಿಯ ಹುಡುಕಾಟ ಶುರು ಮಾಡಿದರು.