ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ ಮುಖ್ಯಸ್ಥ ಗಣೇಶ ಹರಿಕಂತ್ರ ಅವರು ಈ ಬಾರಿ 11.10 ಲಕ್ಷ ರೂಪಾಯಿ ನೀಡಿ ಒಲಗ ಮಂಟಪದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಸಾದಪಡೆದಿದ್ದಾರೆ. ಈ ಹರಾಜಿನಲ್ಲಿ ಪ್ರಸಾದಪಡೆಯಲು ಭಾರೀ ಪ್ರಮಾಣದ ಪೈಪೋಟಿ ನಡೆದಿದ್ದು, ಅತಿ ಹೆಚ್ಚು ಮೊತ್ತ ಕೂಗಿದ ಕಾರಣ ಪ್ರಸಾದದ ಬಟ್ಟಲು ಗಣೇಶ ಹರಿಕಂತ್ರ ಅವರಿಗೆ ಸಿಕ್ಕಿದೆ.
ಭಟ್ಕಳದ ಮುರುಡೇಶ್ವರ ಒಲಗ ಮಂಟಪದ ಸಾರ್ವಜನಿಕ ಶ್ರೀ ಗಣೇಶೋತ್ಸವದ 50ನೇ ವರ್ಷದ ಸುವರ್ಣ ಸಂಭ್ರಮ ಅದ್ಧೂರಿಯಾಗಿ ನಡೆದಿದೆ. 11 ದಿನಗಳ ಕಾಲ ನಡೆದ ಆಚರಣೆಯ ಕೊನೆಯ ದಿನ ಮುಡಿಗಂಧ ಪ್ರಸಾದದ ಹರಾಜು ವಿಶೇಷ ಗಮನ ಸೆದಿದೆ. ಹರಾಜಿನಲ್ಲಿ ದೇವರ ಮುಡಿಗಂಧ ಪ್ರಸಾದವನ್ನು ಉದ್ಯಮಿ ನೇತ್ರಾಣಿ ಗಣೇಶ ಹರಿಕಾಂತ ಅವರು 11 ಲಕ್ಷದ 10 ಸಾವಿರಕ್ಕೆ ಪಡೆದಿದ್ದಾರೆ. ಮುರುಡೇಶ್ವರ ಒಲಗ ಮಂಟಪದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಇತಿಹಾಸದಲ್ಲೇ ಈ ಬಾರಿ ಮುಡಿಗಂಧ ಪ್ರಸಾದ ದೊಡ್ಡ ಮೊತ್ತಕ್ಕೆ ಹರಾಜಾಗಿದೆ.
ದೇವರಿಗೆ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಸಿರಿಮುಡಿಗೆ ಮುಡಿಸುವ ಹೂವು, ತುಳಸಿ, ಶ್ರೀಗಂಧ, ಕುಂಕುಮ ಹಾಗೂ ನೈವೇದ್ಯದಂತಹ ವಸ್ತುಗಳನ್ನು ಮುಡಿಗಂಧ ಪ್ರಸಾದ ಎಂದು ಕರೆಯಲಾಗುತ್ತದೆ. ಭಕ್ತರು ಇದನ್ನು ಅತ್ಯಂತ ಪವಿತ್ರವಾದ ಪ್ರಸಾದವಾಗಿದ್ದು, ದೇವರ ನೇರ ಆಶೀರ್ವಾದದ ಸಂಕೇತವೆAದು ಭಕ್ತರು ನಂಬುತ್ತಾರೆ. 50ನೇ ವರ್ಷದ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಮುರ್ಡೇಶ್ವರ ಒಲಗ ಮಂಟಪದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಸೆಪ್ಟೆಂಬರ್ 14ರಿಂದ 24ರವರೆಗೆ ಹನ್ನೊಂದು ದಿನಗಳ ಕಾಲ ಆಯೋಜಿಸಲಾಗಿತ್ತು. ಸುಮಾರು 1 ಕೋಟಿ ವೆಚ್ಚದಲ್ಲಿ ನಡೆದ ಈ ಬೃಹತ್ ಗಣೇಶೋತ್ಸವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ನಡೆದವು.
ಕೊನೆಯ ದಿನ ಗುರುವಾರ ಸಂಜೆ ಒಲಗ ಮಂಟಪದ ಶ್ರೀ ಗಣೇಶನನ್ನು ಮುರ್ಡೇಶ್ವರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿoದ ಮೆರವಣಿಗೆ ನಡೆಸಲಾಯಿತು. ಬಳಿಕ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮುಡಿಗಂಧ ಪ್ರಸಾದದ ಹರಾಜು ನಡೆಯಿತು. ಸುವರ್ಣ ಸಂಭ್ರಮದ ಹಿನ್ನೆಲೆ ಮತ್ತು ಭಕ್ತರ ಅಪಾರ ಭಾಗವಹಿಸುವಿಕೆಯಿಂದ ಈ ವರ್ಷದ ಗಣೇಶೋತ್ಸವ ವಿಶೇಷ ಮೆರುಗು ಪಡೆದುಕೊಂಡಿದ್ದು, ದಾಖಲೆ ಮೊತ್ತದ ಮುಡಿಗಂಧ ಪ್ರಸಾದ ಹರಾಜು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು.