ಸ್ನೇಹಿತರ ಜೊತೆ ಊಟಕ್ಕೆ ಹೋಗಿದ್ದ ಶಿರಸಿಯ ಆದರ್ಶ ಮರಾಠಿ ಅವರಿಗೆ ಹೊಡೆದು ಪರಾರಿಯಾಗಿದ್ದ ಕುಮಟಾದ ಗಿರೀಶ ನಾಯ್ಕ ಅವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಗಿರೀಶ ನಾಯ್ಕ ಅವರನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ಶಿರಸಿಯ ಮಾರುತಿಗಲ್ಲಿಯಲ್ಲಿ ಆದರ್ಶ ಆನಂದ ಮರಾಠಿ ಅವರು ವಾಸವಾಗಿದ್ದರು. ಪ್ಲಂಬಿAಗ್ ಕೆಲಸ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದರು. ಸೆಪ್ಟೆಂಬರ್ 25ರ ರಾತ್ರಿ 11ಗಂಟೆಗೆ ಮಿರ್ಜಾನಕರ್ ಪೆಟ್ರೊಲ್ ಬಂಕಿನ ಬಳಿ Àವರು ಸ್ನೇಹಿತರ ಜೊತೆ ಊಟಕ್ಕೆ ಹೋಗಿದ್ದರು. ಆಗ, ಅಲ್ಲಿ ಕುಮಟಾ ಗೂಡೆಅಂಗಡಿಯ ಗಿರೀಶ ವಾಮನ ನಾಯ್ಕ ಅವರು ಆಗಮಿಸಿದ್ದು, ಆರ್ದ ಮರಾಠಿ ಅವರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದರು.
ಅದಾದ ನಮತರ ಗಿರೀಶ ನಾಯ್ಕ ಪರಾರಿಯಾಗಿದ್ದು, ಈ ಪ್ರಕರಣ ವಿಷಯವಾಗಿ ಪೊಲೀಸರು ತನಿಖಾ ತಂಡ ರಚಿಸಿದ್ದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಅವರ ಜೊತೆ ಡಿವೈಎಸ್ಪಿ ಗೀತಾ ಪಾಟೀಲ್ ಅವರು ಪಿಐ ಸಂಪತ್ ಈಸಿ, ಪಿಸೈ ನರಸಿಂಹಲು ಟಿ, ನಾರಾಯಣ ರಾಥೋಡ್ ಅವರನ್ನು ಕಾರ್ಯಾಚರಣೆಗಿಳಿಸಿದರು. ಪೊಲೀಸ್ ಸಿಬ್ಬಂದಿ ಸಿಬ್ಬಂದಿ ಬಸವರಾಜ ಹಗೇರಿ, ರಾಮಯ್ಯ ಪೂಜಾರಿ, ಹನುಮಂತ ಮಂಕಾಪುರ, ಹನುಮಂತ ಕಬಾಡಿ, ಚೆನ್ನಪ್ಪ, ಸುನೀಲ, ಪ್ರಶಾಂತ, ರಾಜಶೇಖರ ಸೇರಿ ಆರೋಪಿಯನ್ನು ಬಂಧಿಸಿದರು.