ಕಾರವಾರದ ಐ.ಸಿ.ಐ.ಸಿ.ಐ ಬ್ಯಾಂಕ್ ಉದ್ಯೋಗ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಈ ಹುದ್ದೆಗಾಗಿ ಸೆಪ್ಟೆಂಬರ್ 5ರಂದು ನೇರ ನೇಮಕಾತಿ ಸಂದರ್ಶನ ನಡೆಸಲಿದೆ. ಕಾರವಾರದಲ್ಲಿಯೇ ಈ ಸಂದರ್ಶನ ನಡೆಯಲಿದೆ.
ಸದ್ಯ ಐ.ಸಿ.ಐ.ಸಿ.ಐ ಬ್ಯಾಂಕಿನಲ್ಲಿ ಮತ್ತು ರಿಲೇಶನ್ ಶಿಪ್ ಮ್ಯಾನೇಜರ್ ಹುದ್ದೆಗಳು ಖಾಲಿ ಇವೆ. 18ಇಂದ 25 ವರ್ಷದೊಳಗಿನವರಿಗೆ ಈ ಹುದ್ದೆ ನೀಡಲು ಬ್ಯಾಂಕ್ ನಿರ್ಧರಿಸಿದೆ. ಉತ್ತರ ಕನ್ನಡ ಜಿಲ್ಲೆಯವರ ಜೊತೆ ಬೆಳಗಾವಿ ಹಾಗೂ ಹುಬ್ಬಳ್ಳಿಯವರು ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು. ಆದರೆ, ನೇರ ಸಂದರ್ಶನಕ್ಕೆ ಬರುವವರು ಪದವಿ ಪಾಸಾಗಿರುವುದು ಕಡ್ಡಾಯ. ಉದ್ಯೋಗ ಸ್ಥಳ ಸಹ ಬೆಳಗಾವಿ, ಹುಬ್ಬಳ್ಳಿ ಹಾಗೂ ಉತ್ತರ ಕನ್ನಡ ಜಿಲ್ಲೆಯೇ ಆಗಿದೆ.
Advertisement. Scroll to continue reading.
ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಈ ಸಂದರ್ಶನ ಎದುರಿಸಬಹುದಾಗಿದ್ದು, ರೆಸ್ಯೂಮ್ ಪ್ರತಿಯೊಂAದಿಗೆ ಬರಬೇಕು ಎಂದು ಸೂಚಿಸಲಾಗಿದೆ. ಐ.ಸಿ.ಐ.ಸಿ.ಐ ಬ್ಯಾಂಕಿನಲ್ಲಿ ಖಾಲಿ ಇರುವ ಸೇಲ್ಸ್ ಮತ್ತು ರಿಲೇಶನ್ ಶಿಪ್ ಮ್ಯಾನೇಜರ್ ಹುದ್ದೆಯ ಸಂದರ್ಶನ ಸೆಪ್ಟೆಂಬರ್ 5ರಂದು ಯೋಜನಾ ವಿನಿಮಯ ಕಚೇರಿ, ಶ್ರೀಮತಿ ಪ್ರೇಮಾಬಾಯಿ ರಾಯ್ಕರ ಬಿಲ್ಡಿಂಗ್, ಪಂಚಾಬ್ ನ್ಯಾಶನಲ್ ಬ್ಯಾಂಕ್ ಹತ್ತಿರ, ಸಿವಿಲ್ ಕೋರ್ಟ್ ರಸ್ತೆ, ಕಾರವಾರದಲ್ಲಿ ನಡೆಯಲಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಫೋನ್ ಮಾಡಿ: 8310044796 ಅಥವಾ 08382-226386
Advertisement. Scroll to continue reading.
Advertisement. Scroll to continue reading.