Advertisement. Scroll to continue reading.
ಡೀಸೆಲ್ ಕದ್ದು ಜೀವನ ನಡೆಸುತ್ತಿದ್ದ ಮೂವರನ್ನು ಹೊನ್ನಾವರ ಪೊಲೀಸರು ಹಿಡಿದಿದ್ದಾರೆ. ಅವರ ಬಳಿಯಿದ್ದ 140 ಲೀಟರ್ ಡೀಸೆಲನ್ನು ವಶಕ್ಕೆಪಡೆದಿದ್ದಾರೆ.
ಹೊನ್ನಾವರ ಗೋರುಸೊಪ್ಪ ದಾಪಗಾಲಮಕ್ಕಿಯ ಮೂಸಾ ಹಸನ್ ಸಾಬ್ ಅವರು ಟಿಪ್ಪರ್ ಹೊಂದಿದ್ದು, ಅದನ್ನು ಬಾಡಿಗೆಗೆ ಬಿಡುವ ಮೂಲಕ ಜೀವನ ನಡೆಸುತ್ತಿದ್ದಾರೆ. ಹೊನ್ನಾವರ ಗೇರುಸೊಪ್ಪದ ಬಳಿ ಅವರ ಟಿಪ್ಪರಿನಲ್ಲಿದ್ದ ಡೀಸಲ್ ಕಳ್ಳತನವಾಗಿದೆ. ಟಿಪ್ಪರ್ ಟ್ಯಾಂಕರಿನಲ್ಲಿದ್ದ 140 ಲೀಟರ್ ಡೀಸಲ್’ನ್ನು ಮೂವರು ಸೇರಿ ಕದ್ದಿದ್ದಾರೆ. ಆ ಕಳ್ಳರನ್ನು ಪೊಲೀಸರು ಹುಡುಕಿ ಹಿಡಿದಿದ್ದಾರೆ.
ಶಿವಮೊಗ್ಗದ ಸುನ್ನಿ ಮೆಕ್ಕಾ ಮಸೀದಿ ಬಳಿಯ ಯೂಸಿಬ್ ಶಬ್ಬಿರ್ ಖಾನ್ (29), ಕಡೆಕಲ್ಲು ಪಾರೆಸ್ಟ್ ಕಾಲೋನಿಯ ಮಹಮದ್ ಗೌಸ್ ಮಹ್ಮದ್ ಹಯಾಸ್ ಸಾಬ್ (38), ಶಿವಮೊಗ್ಗ ಮದೀನಾ ಮಸೀದಿ ಬಳಿಯ ಸೈಯ್ಯದ್ ಸಿಕಂದರ್ ಸೈಯದ್ ಜಬ್ಬಾರ್ (22) ಡೀಸೆಲ್ ಕಳ್ಳರಾಗಿದ್ದಾರೆ. ಕದಿಯುವುದಕ್ಕಾಗಿಯೇ ಹೊನ್ನಾವರಕ್ಕೆ ಬರುತ್ತಿದ್ದ ಅವರು ಈ ಬಾರಿ ಸಿಕ್ಕಿ ಬಿದ್ದಿದ್ದಾರೆ. ಪಿಸೈ ಮಹಾಂತೇಶ ವಾಲ್ಮೀಕಿ ತಂಡದವರು ಕಾರ್ಯಾಚರಣೆ ನಡೆಸಿ ಕಳ್ಳರನ್ನು ಜೈಲಿಗೆ ಕಳುಹಿಸಿದ್ದಾರೆ.
Advertisement. Scroll to continue reading.
Advertisement. Scroll to continue reading.