ಕಾರವಾರ ವೈದ್ಯಕೀಯ ವಿಜ್ಞಾನ ಕೇಂದ್ರದಿAದ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಜಿಲ್ಲೆಗೆ ಕರೆದೊಯ್ಯುವ ರೋಗಿಗಳಿಂದ ಸುಲಿಗೆ ನಡೆಯುತ್ತಿದೆ. ಮಂಗಳೂರಿಗೆ ಹೋಗಲು 5 ಸಾವಿರ ರೂ ವೆಚ್ಚವಾಗುತ್ತಿದ್ದು, ಇಂಧನ ವೆಚ್ಚ ಎಂದು 7500ರೂ ವಸೂಲಿ ಮಾಡುತ್ತಿರುವ ಸಂಗತಿ ಹೊರಬಿದ್ದಿದೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಜನಶಕ್ತಿ ವೇದಿಕೆ ಆಗ್ರಹಿಸಿದೆ.
ಈಚೆಗೆ ಖಾಸಗಿ ಆಂಬುಲೆನ್ಸ ಮಾಲಕ ಮಂಜುನಾಥ ಮಹಾದೇವ್ ಕೋಳಂಕರ್ ಅವರು ಸುದ್ದಿಗೋಷ್ಠಿ ನಡೆಸಿ `ರೋಗಿಗಳನ್ನು ಮಂಗಳೂರಿಗೆ ಸಾಗಿಸಲು ನೈಜವಾಗಿ ಸುಮಾರು ?5,000 ಮೌಲ್ಯದ ಇಂಧನ (ಡೀಸೆಲ್) ವೆಚ್ಚವಾಗುತ್ತದೆ. ಆದರೆ, ಸರ್ಕಾರಿ ಅಂಬುಲೆನ್ಸ್ನಲ್ಲಿ ಸುಮಾರು 7,500 ಇಂಧನ ವೆಚ್ಚವೆಂದು ಪಡೆಯಲಾಗುತ್ತಿದೆ. ಇದರಲ್ಲಿ 2,500 ಹೆಚ್ಚುವರಿ ಮೊತ್ತವನ್ನು ಏಕೆ ಪಡೆಯಲಾಗುತ್ತಿದೆ? ಈ ಹಣ ಯಾರ ಖಾತೆಗೆ ಸೇರುತ್ತಿದೆ? ಎಂಬ ಪ್ರಶ್ನೆ ಮಾಡಿದ್ದಾರೆ. `ಈ ಆರೋಪ ಸತ್ಯವೇ ಅಥವಾ ಸುಳ್ಳೇ? ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕು. ಆದರೆ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮೌನ ವಹಿಸದೆ ಪ್ರತಿ ಅಂಬುಲೆನ್ಸ್ನ ಮೈಲೇಜ್ ದಾಖಲೆ, ಪ್ರಯಾಣದ ದೂರ, ಇಂಧನ ಬಳಕೆ, ಡೀಸೆಲ್ ಬಿಲ್, ನಿರ್ವಹಣಾ ವೆಚ್ಚ ಹಾಗೂ ರೋಗಿಗಳಿಂದ ವಸೂಲಿ ಮಾಡಿರುವ ಹಣದ ಸಂಪೂರ್ಣ ಲೆಕ್ಕಪತ್ರವನ್ನು ಪರಿಶೀಲಿಸಬೇಕು’ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ಬಿ ನಾಯಕ ಅವರು ಒತ್ತಾಯಿಸಿದ್ದಾರೆ.
`ಸರ್ಕಾರಿ ಅಂಬುಲೆನ್ಸ್ ಆಗಿದ್ದರೂ ದರ ನಿಗದಿಗೆ ಪಾರದರ್ಶಕ ವ್ಯವಸ್ಥೆ ಇಲ್ಲದಿದ್ದರೆ ಸಾಮಾನ್ಯ ಜನರು ಪ್ರಶ್ನೆ ಮಾಡಲೇಬೇಕು. 2,500ರೂ ಹೆಚ್ಚುವರಿ ವಸೂಲಿ ಆಗಿದ್ದರೆ ಅದು ಯಾರ ಜೇಬಿಗೆ ಹೋಗುತ್ತಿದೆ ಎಂಬುದು ತನಿಖೆಯಿಂದ ಹೊರಬರಬೇಕು. ಸಾರ್ವಜನಿಕ ಹಣದ ಪ್ರತಿಯೊಂದು ರೂಪಾಯಿಗೂ ಲೆಕ್ಕ ಇರಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ಇದರ ಜೊತೆಗೆ ಕಿಮ್ಸ್ ಆಸ್ಪತ್ರೆಯಲ್ಲಿ ಆಂಬುಲೆನ್ಸ್ಗಳ ಕೊರತೆಯೂ ಜನರನ್ನು ಕಾಡುತ್ತಿದೆ. ಲಭ್ಯವಿರುವ ವಾಹನಗಳ ಪೈಕಿ ಕೆಲವು ವಾಹನಗಳು ಆಗಾಗ್ಗೆ ದುರಸ್ತಿಗೆ ತೆರಳುವುದರಿಂದ ತುರ್ತು ಸಂದರ್ಭಗಳಲ್ಲಿ ಅಗತ್ಯ ವಾಹನಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪರಿಣಾಮವಾಗಿ ಬಡ ರೋಗಿಗಳು ಅನಿವಾರ್ಯವಾಗಿ ದುಬಾರಿ ಖಾಸಗಿ ಅಂಬುಲೆನ್ಸ್ಗಳ ಮೊರೆ ಹೋಗಬೇಕಾಗಿದೆ’ ಎಂದವರು ಹೇಳಿದ್ದಾರೆ.
ಆಂಬುಲೆನ್ಸ್ ದರ ನಿಗದಿಗೆ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ, ವಾಹನದ ಮೈಲೇಜ್, ಇಂಧನದ ಪ್ರಕಾರ,(ಡೀಸೆಲ್, ಪೆಟ್ರೋಲ್) ಪ್ರಯಾಣದ ದೂರ ಮತ್ತು ನೈಜ ವೆಚ್ಚ ಆಧರಿಸಿ ನ್ಯಾಯಸಮ್ಮತ ದರ ನಿಗದಿಪಡಿಸಬೇಕು’ ಎಂದವರು ಮನವಿ ಮಾಡಿದ್ದಾರೆ. `ಕೈಗಾ, ನ್ಯೂಕ್ಲಿಯರ್ ಯೋಜನೆ, ಪೇಪರ್ ಮಿಲ್, ಗ್ರಾಸಿಮ್ ಸೇರಿದಂತೆ ಜಿಲ್ಲೆಯ ಪ್ರಮುಖ ಕೈಗಾರಿಕೆಗಳ ಅSಖ ನಿಧಿ ಅಥವಾ ದೇಣಿಗೆಯ ಮೂಲಕ ಹೊಸ ಅಂಬುಲೆನ್ಸ್ಗಳನ್ನು ಪಡೆಯಬೇಕು. ಅಲ್ಲದೆ, ಮೃತದೇಹ ಸಾಗಿಸಲು ಪ್ರತ್ಯೇಕ ವಾಹನವನ್ನು ಒದಗಿಸಬೇಕು. ಇಲ್ಲವಾದರೆ ಸಾವಿನ ನೋವಿನಲ್ಲಿರುವ ಕುಟುಂಬಗಳ ಮೇಲೂ ಖಾಸಗಿ ವಾಹನಗಳ ದುಬಾರಿ ವೆಚ್ಚದ ಹೊರೆ ಬೀಳಲಿದೆ’ ಎಂದವರು ಅಭಿಪ್ರಾಯಪಟ್ಟಿದ್ದಾರೆ.