ಕಾರವಾರದ ಕೆ ಎಚ್ ಬಿ ಕಾಲೋನಿ ಬಳಿ ಸತ್ಯಪ್ಪ ದುರದುಂಡಿ ಹಾಗೂ ಹಸನ್ ರಂಜುನಗಿ ಅವರು ಹೊಡೆದಾಡಿಕೊಂಡಿದ್ದಾರೆ. ಹಣಕಾಸು ವಿಷಯವಾಗಿ ಅವರಿಬ್ಬರ ನಡುವೆ ಜಗಳ ಶುರುವಾಗಿದ್ದು, ಅದೇ ಹೊಡೆದಾಟಕ್ಕೆ ಕಾರಣವಾಗಿದೆ.
ರೇವಪ್ಪ ಸತ್ಯಪ್ಪ ದುರದುಂಡಿ ಅವರು ಹಡಗಿನಹಾಳ ಮೂಲದವರಾಗಿದ್ದು, ಧಾರವಾಡ ನ್ಯಾಯಾಲಯದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಹಸನ್ ಅಲ್ಲಾಭಕ್ಷ ರಂಜುನಗಿ ಅವರು ಉಳಗಾ ಬಿಸಿಎಂ ಕಾಲೇಜು ಸುಪ್ರಿಡೆಂಟ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಹಸನ್ ರಂಜುನಗಿ ಅವರು ಕೆಎಚ್ಬಿ ಕಾಲೋನಿಯ ಪರ್ಲ ಅಪಾರ್ಟಮೆಂಟ್’ನಲ್ಲಿ ವಾಸವಾಗಿದ್ದು, ಆ ಅಪಾರ್ಟಮೆಂಟ್ ಎದುರೇ ಈ ಹೊಡೆದಾಟ ನಡೆದಿದೆ. ರೇವಪ್ಪ ದುರದುಂಡಿ ಹಾಗೂ ಹಸನ್ ರಂಜುನಗಿ ನಡುವೆ ಹಣಕಾಸಿನ ವ್ಯವಹಾರವಿದ್ದು, ಅದರಲ್ಲಿ ವ್ಯತ್ಯಾಸವಾಗಿರುವುದೇ ಈ ಹೊಡೆದಾಟಕ್ಕೆ ಕಾರಣ.
ಸೆಪ್ಟೆಂಬರ್ 25ರ ಸಂಜೆ 5.30ಕ್ಕೆ ಅವರಿಬ್ಬರು ಬೀದಿಯಲ್ಲಿ ಹೊಡೆದಾಡುವುದನ್ನು ಪೊಲೀಸ್ ಸಿಬ್ಬಂದಿ ಸುರೇಶ ಕೋಟಾರ್ಕರ್ ಅವರು ನೋಡಿದ್ದಾರೆ. ಆ ಹೊಡೆದಾಟ ತಪ್ಪಿಸಲು ಅವರು ಪ್ರಯತ್ನಿಸಿದ್ದಾರೆ. ಆದರೆ, ಅದರಿಂದ ಪ್ರಯೋಜನವಾಗಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಗಲಾಟೆ ಮಾಡಬೇಡಿ ಎಂದು ಸುರೇಶ ಕೋಟಾರ್ಕರ್ ಅವರು ಮನವಿ ಮಾಡಿದರೂ ಅದನ್ನು ಅವರಿಬ್ಬರು ಪಾಲಿಸಿಲ್ಲ. ಅತ್ಯಂತ ಕೆಟ್ಟಶಬ್ದಗಳಿಂದ ಸತ್ಯಪ್ಪ ದುರದುಂಡಿ ಹಾಗೂ ಹಸನ್ ರಂಜುನಗಿ ಬೈದುಕೊಂಡಿದ್ದು, ಸಾರ್ವಜನಿಕರು ಈ ವೇಳೆ ಮುಜುಗರ ಅನುಭವಿಸಿದ್ದಾರೆ. ಈ ಎಲ್ಲಾ ಹಿನ್ನಲೆ ಪೊಲೀಸರು ಅವರಿಬ್ಬರ ವಿರುದ್ಧವೂ ಕಾನೂನು ಕ್ರಮ ಜರುಗಿಸಿದ್ದಾರೆ.