ದೊಡ್ಡ ಹುದ್ದೆ, ಕೈ ತುಂಬ ಸಂಬಳ, ಸುಖ ಸಂಸಾರ, ನೆಮ್ಮದಿಯ ಬದುಕಿದ್ದರೂ ತೃಪ್ತರಾಗದ ಹಳಿಯಾಳದ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಇದೀಗ ನಾಯಿಗಳ ಹಿಂದೆ ಬಿದ್ದಿದ್ದಾರೆ. ಬೀದಿಯಲ್ಲಿರುವ ನಾಯಿಗಳಿಗೆ ಹಿಂಸೆ ನೀಡುವ ಮೂಲಕ ಅವುಗಳ ನರಳಾಟದ ಸದ್ದು ಕೇಳಿ ಅಲ್ಲಿದ್ದವರು ಖುಷಿ ಪಡುತ್ತಿದ್ದಾರೆ!
EID PARRY ಸಕ್ಕರೆ ಕಾರ್ಖಾನೆಯ ಯುನಿಟ್ ಹೆಡ್ ರಾಜೇಂದ್ರ ಆಚಾರಿ, ಡಿಜಿಎಂ ರಮೇಶ ರೆಡ್ಡಿ, H & T ವಿಭಾಗ ಮುಖ್ಯಸ್ಥ ಶಂಕರ ಅಗಡಿ, HR ನೀತಾ ಎಲ್ ಸೇರಿ ಈ ಕಾರ್ಯಾಚರಣೆಯ ರೂಪುರೇಷೆ ಸಿದ್ಧಪಡಿಸಿದ್ದಾರೆ. ನಾಯಿ ಹಿಡಿದು ಹೊಡೆಯುವ ಕೆಲಸಕ್ಕಾಗಿ ಈ ನಾಲ್ವರು 30 ಜನರ ತಂಡ ರಚಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಲೋಕಾಪುರದಿಂದ ನಾಯಿ ಹಿಡಿಯುವವರನ್ನು ಕರೆಯಿಸಿದ್ದಾರೆ. ಕಬ್ಬಿಣದ ರಾಡು, ಕೋಲು, ದೊಣ್ಣೆಗಳನ್ನು ಹಿಡಿದು ಅವರೆಲ್ಲರೂ `ಆಪರೇಶನ್ ಬೌ ಬೌ’ ಕಾರ್ಯಾಚರಣೆ ಮಾಡುತ್ತಿದ್ದಾರೆ. ಹಿಡಿದ ನಾಯಿಗಳನ್ನು ಮಹೇಂದ್ರ ಗೂಡ್ಸ್ ಒಳಗೆ ತುಂಬಿ ಅದಕ್ಕೆ ಎಲ್ಲರೂ ಸೇರಿ ಹಿಂಸೆ ನೀಡುತ್ತಾರೆ. ಈ ವೇಳೆ ನಾಯಿ ನರಳಾಡುವ ದೃಶ್ಯವನ್ನು ನೋಡಿ ಅವರೆಲ್ಲರೂ ಕೇಕೆ ಹಾಕುತ್ತಿದ್ದಾರೆ. ಅದಾದ ನಂತರ ಆ ನಾಯಿಗಳನ್ನು ಕಾಡಿಗೆ ಬಿಟ್ಟು ಬರುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ಹಳಿಯಾಳದಲ್ಲಿ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ನಡೆದಿದೆ. ಇಲ್ಲಿನ ಇಐಡಿ ಪ್ಯಾರಿ ಇಂಡಿಯಾ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳ ಸೂಚನೆ ಮೇರೆಗೆ ಈ ಕಾರ್ಯಾಚರಣೆ ನಡೆಸಿರುವುದಾಗಿ ಕಾರ್ಮಿಕರು ಹೇಳಿಕೆ ನೀಡಿದ್ದಾರೆ. ನಾಯಿ ಹಿಡಿಯುವ ತಂಡದವರೊOದಿಗೆ ಸಕ್ಕರೆ ಕಾರ್ಖಾನೆಗೆ ಸಂಬoಧಿಸಿದವ್ಯಕ್ತಿಗಳು ಹೆಜ್ಜೆ ಹಾಕಿದ್ದು, ಅವರೆಲ್ಲರೂ ನಾಯಿ ಹಿಡಿಯುವ ವಿಧಾನ ವೈಜ್ಞಾನಿಕವಾಗಿಲ್ಲ. ಕಾನೂನಿನ ನಿಯಮಗಳನ್ನು ಸಹ ಅವರು ಪಾಲಿಸುತ್ತಿಲ್ಲ.
ಪತ್ರಕರ್ತ ಹಾಗೂ ಪ್ರಾಣಿ ಪ್ರೇಮಿ ಯೋಗರಾಜ ಕಡಾರೆ ಅವರಿಗೆ ಈ ವಿಷಯ ಗೊತ್ತಾಗಿದೆ. ಕೂಡಲೇ ಅವರು ಕಾರ್ಯಾಚರಣೆ ನಡೆಯುವ ಜಾಗಕ್ಕೆ ಹೋಗಿ ಪ್ರಶ್ನಿಸಿದ್ದಾರೆ. ಸೆಪ್ಟೆಂಬರ್ 19 ಹಾಗೂ 20ರಂದು ಇಂಥಹದೊOದು ಕಾರ್ಯ ನಡೆದಿದ್ದರಿಂದ Prevention Of Cruelty To Animals Act 1960 ಕಾಯ್ದೆ ಉಲ್ಲಂಘನೆ ಆಗಿದೆ ಎಂದವರು ದೂರಿದ್ದಾರೆ. EID PARRY ಸಕ್ಕರೆ ಕಾರ್ಖಾನೆಯ ಅಧಿಕಾರಿಗಳ ಹೆಸರು-ಹುದ್ದೆ ವಿವರಿಸಿ ಅವರು ಪೊಲೀಸ್ ದೂರು ನೀಡಿದ್ದು, ನಾಯಿ ಹಿಡಿಯಲು ಹೋದವರ ವಿರುದ್ಧ ಹಳಿಯಾಳ ಪೊಲೀಸರು ಕೇಸು ದಾಖಲಿಸಿದ್ದಾರೆ.