ಅಪ್ರಾಪ್ತರ ಪ್ರೇಮ ಪ್ರಕರಣವೊಂದು ದುರಂತ ಅಂತ್ಯ ಕಂಡಿದೆ. ಪ್ರೀತಿಸಿದ ಹುಡುಗನಿಗೆ ಹುಡುಗಿ ವಿಷ ಉಣಿಸಿದ್ದು, ಬದುಕುವ ಆಸೆ ಹೊತ್ತು ಮೂರು ವಾರಗಳ ಕಾಲ ಆಸ್ಪತ್ರೆಯಲ್ಲಿ ನರಳಾಡಿದ ಯುವಕನ ಬದುಕು ಅಂತ್ಯವಾಗಿದೆ.
ದಾoಡೇಲಿಯ ಕಾಲೇಜುವೊಂದರಲ್ಲಿ ಓದುತ್ತಿರುವ 16 ವರ್ಷದ ಮಕ್ಕಳಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಅವರ ಪ್ರೀತಿಯಲ್ಲಿ ಒಡಕು ಮೂಡಿದರೂ, ಆ ಯುವತಿ ಯುವಕನನ್ನು ಮನೆಗೆ ಆಮಂತ್ರಿಸಿದ್ದರು. ಆ ವೇಳೆ ತಮ್ಮ ಮೊಬೈಲಿನಲ್ಲಿದ್ದ ಫೋಟೋ ಕಾಣಿಸಿದ ಯುವತಿ ಪ್ರೀತಿಸಿದ ಹುಡುಗನಿಗೆ ಒತ್ತಾಯವಾಗಿ ವಿಷ ಕುಡಿಸಿದ್ದು, ಅದರಿಂದ ಅಸ್ವಸ್ಥನಾದ ಯುವಕ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಪ್ರಾಪ್ತ ಪ್ರೇಮಿ ಕೊನೆಯುಸಿರೆಳೆದರು.
ಇದನ್ನು ಓದಿ: ವಿಷ ಕುಡಿಸಿದ ಹುಡುಗಿ!
Advertisement. Scroll to continue reading.
ಸಾವನಪ್ಪಿದ ಹುಡುಗ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದ ಜಗಲಪೇಟೆ ಗ್ರಾಮದವರಾಗಿದ್ದಾರೆ. ಆರೋಪಿ ಯುವತಿ ಸಹ ಅದೇ ಭಾಗದವರಾಗಿದ್ದಾರೆ. ವಿಷ ಕುಡಿದು ಅಸ್ವಸ್ಥರಾಗಿದ್ದ ಯುವಕ ಪ್ರೀತಿಸಿದ ಹುಡುಗಿಗೆ ಸಮಸ್ಯೆ ಆಗಬಾರದು ಎಂದು ಭಾವಿಸಿ ಸುಳ್ಳು ಹೇಳಿದ್ದು, ಸಾಯುವ ಮುನ್ನ ಕುಟುಂಬದವರ ಬಳಿ ಸತ್ಯ ಹೇಳಿದ್ದಾರೆ. ಅದೇ ಆಧಾರದಲ್ಲಿ ಹುಡುಗನ ಹೇಳಿಕೆಪಡೆದಿದ್ದ ಪೊಲೀಸರು ಯುವತಿ ವಿರುದ್ಧ ಕೇಸು ದಾಖಲಿಸಿದ್ದಾರೆ.