ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ನೀಡಲಾಗುವ 2026-27ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕಾರವಾರ ಶೈಕ್ಷಣಿಕ ಜಿಲ್ಲೆಯ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದೆ. ಐದು ತಾಲೂಕುಗಳಿಂದ ಒಟ್ಟು 15 ಶಿಕ್ಷಕರು ಆಯ್ಕೆಯಾಗಿದ್ದಾರೆ. ಮುಖ್ಯವಾಗಿ ಈ ಬಾರಿ ಕಾರವಾರದ ಅಸ್ನೋಟಿ ಶಿವಾಜಿ ವಿದ್ಯಾಮಂದಿರದ ಜನಮೆಚ್ಚಿದ ಶಿಕ್ಷಕ ಸಂತೋಷ ಕಾಂಬಳೆ ಅವರಿಗೆ ಪ್ರಶಸ್ತಿ ಘೋಷಣೆಯಾಗಿದೆ.
ಅದರೊಂದಿಗೆ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ ತಲಾ ಐವರು ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳಿಂದ ತಲಾ ಮೂರು ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿರುವುದು ವಿಶೇಷ. ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾರವಾರ ಕೋಡಿಭಾಗದ ವಿಶಾಂತ ನಾಯ್ಕ, ಅಂಕೋಲಾ ಮಳಲಗಾವದ ರಮೇಶ ಕೇಶವ ಹೆಗಡೆ, ಕುಮಟಾ ನೆಹರು ನಗರದ ಶೈಲಾ ದಿನಕರ ನಾಯ್ಕ, ಹೊನ್ನಾವರ ಖಡೋಡಿಯ ಲಕ್ಷ್ಮಣ ಮಂಜುನಾಥ ಪಟಗಾರ, ಭಟ್ಕಳ ಬಬ್ಬನಕಲ್’ನ ಯಶವಂತ ಆರ್ ನಾಯ್ಕ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾರವಾರ ಕೋಡಿಭಾಗದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯ ಶೋಭಾ ಆರ್. ಕಾಮತ, ಅಂಕೋಲಾ ಗುಂಡಬಾಳದ ಶೋಭಾ ಸಣ್ಣಪ್ಪ ನಾಯಕ, ಕುಮಟಾ ಗುಡಿಗಾರಗಲ್ಲಿಯ ರಾಮಚಂದ್ರ ಸುಬ್ರಾಯ ಶೆಟ್ಟಿ, ಹೊನ್ನಾವರ ಸಂಶಿಯ ಸಾಲ್ವದೋರ್ ಮಿಂಗ್ಲಿ ಲೋಪಿಸ್, ಭಟ್ಕಳ ಮಡಿಕೇರಿಯ ಮಾದೇವಿ ಟಿ. ಹರಿಕಾಂತ ಅವರು ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ಕಾರವಾರ ಅಸ್ನೋಟಿ ಶಿವಾಜಿ ಮಂದಿರದ ಸಂತೋಷ ಭರಮಾಣಿ ಕಾಂಬಳೆ, ಅಂಕೋಲಾ ಅವರ್ಸಾದ ಕಾತ್ಯಾಯನಿ ಹೈಸ್ಕೂಲಿನ ವಿನಾಯಕ ನಾಯಕ, ಕುಮಟಾ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನ ರಾಮಕೃಷ್ಣ ಎನ್. ನಾಯಕ, ಹೊನ್ನಾವರ ಚಿತ್ತಾರ ಶಾಲೆಯ ಭಾರತಿ ಆನಂದು ಶಾನಭಾಗ, ಭಟ್ಕಳ ಬೆಳಕೆಯ ಪ್ರಕಾಶ ಮಾಧವ ಶಿರಾಲಿ ಅವರು ಆಯ್ಕೆಯಾಗಿದ್ದಾರೆ.
Advertisement. Scroll to continue reading.
ಶಿವಾಜಿ ಶಾಲೆಯಲ್ಲಿ ಸಂಭ್ರಮ
ಕಾರವಾರದ ಶಿವಾಜಿ ಶಾಲೆಯ ಶಿಕ್ಷಕ ಸಂತೋಷ ಕಾಂಬಳೆ ಅವರಿಗೆ ಪ್ರಶಸ್ತಿ ದೊರೆತಿರುವುದಕ್ಕೆ ಶಾಲೆಯಲ್ಲಿ ಸಂಭ್ರಮ ಕಂಡು ಬಂದಿದೆ. ಪಾಠದ ಜೊತೆಗೆ ಮೌಲ್ಯವನ್ನೂ ಹೇಳಿಕೊಡುವ ಸಂತೋಷ ಕಾಂಬಳೆ ಅವರಿಗೆ ಅನೇಕರು ಶುಭಕೋರಿದ್ದಾರೆ. ವಿಜ್ಞಾನ ಶಿಕ್ಷಕರಾಗಿರುವ ಅವರು ಸಂಪನ್ಮೂಲ ವ್ಯಕ್ತಿಯಾಗಿಯೂ ಮಕ್ಕಳಲ್ಲಿ ಅರಿವು ಮೂಡಿಸುತ್ತಿದ್ದು, ಮಗುವಿನ ಮಾನಸಿಕ ಸ್ಥಿತಿ ಅಭ್ಯಯಿಸಿ ಪಾಠ ಮಾಡುವ ಚಾಣಾಕ್ಷತನಹೊಂದಿದ್ದಾರೆ. ಕಥೆ, ಪ್ರಯೋಗ, ಉದಾಹರಣೆಗಳ ಮೂಲಕ ಪಾಠ ಮಾಡುವ ಅವರಿಗೆ ಈ ಬಾರಿ ಪ್ರಶಸ್ತಿ ಬಂದಿರುವುದಕ್ಕೆ ಊರಿನವರು ಹೆಮ್ಮೆಯಿಂದ ಮಾತನಾಡಿದ್ದಾರೆ.
Advertisement. Scroll to continue reading.
Advertisement. Scroll to continue reading.