ಭಟ್ಕಳ ಪೊಲೀಸ್ ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ರಾನು ಗುಪ್ತ ಅವರು ಅಧಿಕಾರವಹಿಸಿಕೊಂಡಿದ್ದು, ಮೊದಲ ದಿನವೇ ಅವರು ಅಕ್ರಮ ಮರಳು ಸಾಗಾಟದ ಲಾರಿಗಳಿಗೆ ಅಡ್ಡಿ ಮಾಡಿದ್ದಾರೆ. ಒಟ್ಟು ಆರು ಟಿಪ್ಪರ್ ವಶಕ್ಕೆಪಡೆದ ಅವರು ಮರಳು ಲೂಟಿ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಮಂಕಿ ಮತ್ತು ಮುರುಡೇಶ್ವರ ಬಳಿ ವ್ಯಾಪಕ ಪ್ರಮಾಣದಲ್ಲಿ ಮರಳು ಸಾಗಾಟ ನಡೆಯುತ್ತಿದೆ. ಮಳೆಗಾಲದ ಅವಧಿಯಲ್ಲಿಯೂ ಇಲ್ಲಿ ರಾಜಾರೋಷವಾಗಿ ಅಕ್ರಮ ಮರಳು ದಂಧೆ ನಡೆಸಲಾಗುತ್ತಿದೆ. ಈ ಬಗ್ಗೆ ಅರಿತ ರಾನು ಗುಪ್ತ ಅವರು ಮಂಕಿ ವ್ಯಾಪ್ತಿಯಲ್ಲಿ ಮೂರು ಹಾಗೂ ಮುರುಡೇಶ್ವರ ವ್ಯಾಪ್ತಿಯಲ್ಲಿ ಮೂರು ಟಿಪ್ಪರ್‌ಗಳನ್ನು ವಶಕ್ಕೆಪಡೆದಿದ್ದಾರೆ. ಆರು ಜನರನ್ನು ಸಹ ಇದೇ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ.
Advertisement. Scroll to continue reading.
ಅಕ್ರಮ ಮರಳುಗಾರಿಕೆ ವಿರುದ್ಧ ಈ ಭಾಗದ ಅನೇಕರು ಹೋರಾಟ ಮಾಡಿದರೂ ದೊಡ್ಡ ಮಟ್ಟದಲ್ಲಿ ಕ್ರಮವಾಗಿಲ್ಲ. ಮರಳುಗಾರಿಕೆಗೆ ಅನುಮತಿ ಇಲ್ಲದಿದ್ದರೂ ಆ ದಂಧೆ ನಡೆಸುವವರ ಸಂಖ್ಯೆಯೂ ಕಡಿಮೆ ಆಗಿಲ್ಲ. ಪರಸರದ ಜೊತೆ ಜನರ ಜೀವಕ್ಕೆ ಹಾನಿ ಆಗುವ ರೀತಿ ಮರಳುಗಾರಿಕೆ ನಡೆಯುತ್ತಿದ್ದರೂ ಅದನ್ನು ತಡೆದವರಿಲ್ಲ. ಗಣಿ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಸೇರಿ ಅನೇಕ ಇಲಾಖೆ ವ್ಯಾಪ್ತಿಗೆ ಅಕ್ರಮ ಮರಳುಗಾರಿಕೆ ಬರುತ್ತಿದ್ದು, ಈ ಎಲ್ಲಾ ಕಡೆ ಜನ ದೂರು ನೀಡಿದರೂ ಅಕ್ರಮ ಮಾತ್ರ ನಿಂತಿಲ್ಲ.
Advertisement. Scroll to continue reading.
Advertisement. Scroll to continue reading.