ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಸೆ 21ರಿಂದ ವಿಶೇಷ ಅಧಿವೇಶನ ನಡೆಸಲು ನಿರ್ಧರಿಸಿದ್ದು, `ಉತ್ತರ ಕನ್ನಡ ಜಿಲ್ಲೆಯ ಶಾಸಕರು ಈ ಅಧಿವೇಶನದಲ್ಲಿ ಐದು ಅಂಶಗಳ ಬಗ್ಗೆ ಧ್ವನಿಯಾಗಬೇಕು’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಅವರು ಆಗ್ರಹಿಸಿದ್ದಾರೆ. ಶಾಸಕರಿಗೆ ಅವರು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ.
`64 ಸಾವಿರ ಹೇಕ್ಟರ್ ಅರಣ್ಯ ಭೂಮಿಯನ್ನ ರಾಷ್ಟಿçÃಯ ಯೋಜನೆಗಳಿಗೆ ನೀಡುವ ಸರ್ಕಾರ 80 ಸಾವಿರ ಕುಟುಂಬವು ಜೀವನ ಮತ್ತು ವಾಸ್ತವ್ಯಕ್ಕಾಗಿ ಅತಿಕ್ರಮಿಸಿರುವ ಸುಮಾರು 18 ಸಾವಿರ ಹೇಕ್ಟರ್ ಅರಣ್ಯ ಭೂಮಿಯನ್ನು ಸಾಗುವಳಿ ಭೂಮಿ ನೀಡಲು ಆಸಕ್ತಿವಹಿಸಿಲ್ಲ. 1978ರ ಪೂರ್ವ ಅರಣ್ಯ ಭೂಮಿ ಸಾಗುವಳಿದಾರರಿಗೆ 1976 ರಲ್ಲಿ ಕೇಂದ್ರ ಸರ್ಕಾರವು ಮಂಜೂರಿಗೆ ಅನುಮೋದನೆ ನೀಡಿದರೂ ಅರಣ್ಯಕ್ಕೆ ಬದಲಿ ಕಂದಾಯ ಭೂಮಿ ಅರಣ್ಯಕ್ಕೆ ವರ್ಗಾಯಿಸದೇ ಇರುವುದು ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿ ಸಾವಿರಕ್ಕೂ ಮಿಕ್ಕಿ ಅರಣ್ಯ ಭೂಮಿ ಹಂಗಾಮಿ ಭೂಮಿ ಖಾಯಂ ಲಾಗಣಿ ಮಾಡದೇ ಇರುವ ಕುರಿತು ತೀರ್ಮಾನಿಸದಿರುವುದು ಸರಿಯಲ್ಲ. ಪಂಚಾಯತ್ ರಾಜ್ ಇಲಾಖೆಯಲ್ಲಿ ಅನಧೀಕೃತ ಕಟ್ಟಡಗಳಿಗೆ ತೆರಿಗೆ ರದ್ದು ಪಡಿಸುವ ಕುರಿತು ಶಾಸಕರು ಗಮನಿಸಬೇಕು’ ಎಂದವರು ಹೇಳಿದ್ದಾರೆ.
`ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಕಾನೂನುಬಾಹಿರ ಮತ್ತು ಕಾನೂನಿಗೆ ವ್ಯತಿರಿಕ್ತವಾಗಿ ತಿರಸ್ಕರಿಸುವ ಕುರಿತು ಚರ್ಚಿಸಬೇಕು. ತಿರಸ್ಕಾರವಾದ ಅರ್ಜಿಗಳನ್ನ ಪುನರ್ ಪರಿಶೀಲಿಸಲು ತೆಗೆದುಕೊಳ್ಳೂವ ಕ್ರಮದ ಕುರಿತು ನಿರ್ಣಯಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ಈ ಕುರಿತು ನಡೆದ ಸಂಘಟನೆಯ ಸಭೆಯಲ್ಲಿ ಸಂಚಾಲಕ ಇಬ್ರಾಹಿಂ ಸಾಬ ಗೌಡಳ್ಳಿ, ನೆಹರು ನಾಯ್ಕ ಬಿಳೂರು, ರಫೀಕ್ ಗೌಡಳ್ಳಿ, ಚಂದ್ರಣ್ಣ ಮರಗುಂಡಿ , ಕೃಷ್ಣ ಮರಾಠಿ ಸವಲೆ, ಪರಮೇಶ್ವರ ದೇಶಭಂಡಾರಿ ವಾನಳ್ಳಿ, ರಾಜು ಪೂಜಾರಿ, ನಾರಾಯಣ ನಾಯ್ಕ ನೆಗ್ಗು, ಕೃಷ್ಣ ಮಾದೇವ ನಾಯ್ಕ ಬಂಡಲ, ಸ್ವಾತಿ ಜೈನ್, ಯಶೋದಾ ನೌಟೂರು, ಈಶ್ವರ ನಾಯ್ಕ ಬಂಕನಾಳ , ಮಂಜು ನಾಯ್ಕ , ನಾರಾಯಣ ಉಮ್ಮುಡಿ, ಪಂಪಾವತಿ ಮುಂತಾದವರು ಇದ್ದರು.