ಕುಮಟಾದಿoದ ಅಂಕೋಲಾ ಕಡೆ ಚಲಿಸುತ್ತಿದ್ದ ಕಾರೊಂದು ಮೊನ್ನೆ ಅಪಘಾತಕ್ಕೀಡಾಗಿದ್ದು, ಆ ಕಾರಿನಲ್ಲಿ ಅನೇಕ ನಂಬರ್ ಪ್ಲೇಟುಗಳಿರುವುದು ಪತ್ತೆಯಾಗಿದೆ. ಈ ಬಗ್ಗೆ ಅನೇಕ ಅನುಮಾನಗಳಿದ್ದರೂ `ತೆರಿಗೆ ವಂಚಿಸುವ ಪ್ರಯತ್ನ’ ಎಂದು ಪೊಲೀಸ್ ಕೇಸು ದಾಖಲಾಗಿದೆ.
Advertisement. Scroll to continue reading.
ಲಕ್ಷಾಂತರ ರೂ ನೀಡಿ ಕಾರು ಖರೀದಿಸಿದ ವ್ಯಕ್ತಿ ಸಾವಿರ ರೂಪಾಯಿಯ ತೆರಿಗೆ ಪಾವತಿ ಬಗ್ಗೆ ಹೆಚ್ಚು ಯೋಚಿಸಲಾರ ಎಂಬುದು ಜನರ ವಾದ. ಆದರೆ, ತೆರಿಗೆ ತಪ್ಪಿಸುವ ಉದ್ದೇಶದಿಂದ ಮಾತ್ರ ನಕಲಿ ನೋಂದಣಿ ಸಂಖ್ಯೆ ಮಾಡಿಕೊಂಡಿರುವ ಬಗ್ಗೆ ಕಾರಿನ ಚಾಲಕ ಹೇಳಿದ್ದು, ಅದೇ ಆಧಾರದಲ್ಲಿ ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸೆಪ್ಟೆಂಬರ್ 3ರ ಸಂಜೆ ಬರ್ಗಿ ಬಳಿ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಆ ಕಾರಿನಲ್ಲಿ ಅನೇಕ ಬಗೆಯ ನೋಂದಣಿ ಸಂಖ್ಯೆಗಳಿರುವುದನ್ನು ಜನ ಗಮನಿಸಿದ್ದಾರೆ. ಕಾರು ಅಪಘಾತವಾದ ತಕ್ಷಣ ಅದರಲ್ಲಿದ್ದ ನೌಷದ್ ಅಬುಕರ್ ಅವರು ಯಾರಿಗೋ ಫೋನ್ ಮಾಡಿದ್ದಾರೆ. ಜೊತೆಗೆ ಲಾರಿ ಚಾಲಕನ ಬಳಿ ಈ ಕುರಿತು ಕೇಸು ದಾಖಲಿಸದಂತೆ ಮನವಿ ಮಾಡಿ, ಸ್ಥಳದಲ್ಲಿಯೇ ಕಂತೆ ಕಂತೆ ನೋಟುಗಳನ್ನು ಹೊರತೆಗೆದಿದ್ದಾರೆ. ಆ ವೇಳೆಗೆ ಅಲ್ಲಿ ಜನ ಜಮಾಯಿಸಿದ್ದು, ಕಾರಿನಲ್ಲಿ ಬೇರೆ ಬೇರೆ ನೋಂದಣಿ ಸಂಖ್ಯೆಯ ನಂಬರ್ ಪ್ಲೇಟುಗಳಿರುವುದನ್ನು ಗಮನಿಸಿದ್ದಾರೆ.
Advertisement. Scroll to continue reading.
ಈಚೆಗೆ ಐಷಾರಾಮಿ ಕಾರುಗಳಲ್ಲಿ ಆಗಮಿಸುವ ಕೆಲವರು ಜಾನುವಾರು ಕಳ್ಳತನ ಕೃತ್ಯದಲ್ಲಿ ಭಾಗಿಯಾಗುತ್ತಿದ್ದು, ಈ ಆಯಾಮದಲ್ಲಿಯೂ ತನಿಖೆ ನಡೆಯಬೇಕು ಎಂಬುದು ಜನರ ಆಗ್ರಹ. `ಕೇವಲ ತೆರಿಗೆ ತಪ್ಪಿಸುವ ಉದ್ದೇಶದಿಂದ ಕಾರಿನ ನೋಂದಣಿ ಸಂಖ್ಯೆ ಬದಲಿಸುವ ಸಾಧ್ಯತೆ ಕಡಿಮೆ. ಅಪಘಾತದ ಬಗ್ಗೆ ಲಾರಿ ಚಾಲಕ ದೂರು ನೀಡದ ಹಾಗೇ ತಡೆದ ವ್ಯಕ್ತಿ ತಮ್ಮ ಕುಕೃತ್ಯ ಹೊರಬಾರದಂತೆ ತಡೆಯಲು ತೆರಿಗೆ ತಪ್ಪಿಸುವ ಕಾರಣ ನೀಡಿದ ಅನುಮಾನವಿದೆ’ ಎಂದು ಅಲ್ಲಿನವರು ಹೇಳಿದ್ದಾರೆ.