ಕೊಲೆ, ಕಳ್ಳತನ, ಮಕ್ಕಳ ಕಳ್ಳಸಾಗಾಣಿಕೆ ಸೇರಿ ಅನೇಕ ಅಪರಾಧ ಪ್ರಕರಣಗಳನ್ನು ಚಾಣಾಕ್ಷತನದಿಂದ ಬೇದಿಸಿರುವ ಸುರೇಶ ಕುಂಬಾರ್ ಅವರು ಯಲ್ಲಾಪುರ ಪಿಐ ಆಗಿ ಅಧಿಕಾರವಹಿಸಿಕೊಂಡಿದ್ದಾರೆ.
Advertisement. Scroll to continue reading.
ಯಲ್ಲಾಪುರ ಪಿಐ ಆಗಿದ್ದ ರಮೇಶ ಹಾನಾಪುರ ಅವರು ಮೇ 14ರಂದು ಇಲ್ಲಿಂದ ನಿರ್ಗಮಿಸಿದ್ದರು. ಮುಂಡಗೋಡು ಪಿಐ ಆಗಿದ್ದ ಅವರು ಆ ದಿನದಿಂದ ಯಲ್ಲಾಪುರದ ಪ್ರಭಾರಿಯಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಯಲ್ಲಾಪುರ ಪೊಲೀಸ್ ಠಾಣೆಗೆ ಖಾಯಂ ಪಿಐ ಇರಲಿಲ್ಲ. ಸದ್ಯ ಆ ಹುದ್ದೆಗೆ ಸುರೇಶ ಕುಂಬಾರ ಅವರು ಆಗಮಿಸಿದ್ದಾರೆ.
Advertisement. Scroll to continue reading.
ಸುರೇಶ ಕುಂಬಾರ್ ಅವರು ಬೆಳಗಾವಿ ಜಿಲ್ಲೆ ಕಿತ್ತೂರು ಬಳಿಯ ಕಾದ್ರೋಳ್ಳಿ ಎಂಬ ಗ್ರಾಮದವರು. ಗ್ರಾಮೀಣ ಪರಿಸರದ ಜೊತೆ ಅವರಿಗೆ ನಗರ ಪ್ರದೇಶದ ಆಗು-ಹೋಗುಗಳ ಬಗ್ಗೆ ಅರಿವಿದೆ. ತಮ್ಮ ಅನುಭವದ ಆಧಾರದಲ್ಲಿ ಅವರು ಅನೇಕ ಅಪರಾಧ ಪ್ರಕರಣಗಳನ್ನು ಬೇದಿಸಿದ್ದಾರೆ. ಈ ಹಿಂದೆ ಒಂದು ವರ್ಷದಿಂದ ಸುರೇಶ ಕುಂಬಾರ ಅವರು ಹುಬ್ಬಳ್ಳಿ ರೈಲ್ವೆ ವ್ಯಾಪ್ತಿಯ ಪೊಲೀಸ್ ಅಧಿಕಾರಿಯಾಗಿದ್ದರು. ರೈಲ್ವೆ ಹುಬ್ಬಳ್ಳಿಯ ಕಸಬಾಪೇಟೆ, ಕೇಶ್ವಾಪುರ, ದಕ್ಷಿಣ ಸಂಚಾರ, ಶಿಗ್ಗಾವ್ ಪೊಲೀಸ್ ಠಾಣೆಯ ಸಿಪಿಐ ಆಗಿಯೂ ಕೆಲಸ ಮಾಡಿದ್ದರು.
ಕೊಲೆ, ಕಳ್ಳತನ, ಮಕ್ಕಳ ಕಳ್ಳ ಸಾಗಾಟ ಸೇರಿ ಅನೇಕ ಅಪರಾಧ ಪ್ರಕರಣಗಳನ್ನು ತಮ್ಮ ಬುದ್ದಿವಂತಿಕೆಯಿAದ ಅವರು ಬೇದಿಸಿದ್ದಾರೆ. ಮುಖ್ಯವಾಗಿ ಕೊಲೆ ಪ್ರಕರಣವೊಂದರಲ್ಲಿ ಯಾರಿಗೂ ಸಿಗದ ಆರೋಪಿಯನ್ನು ನಾಲ್ಕು ವರ್ಷದ ನಂತರ ಉಪಾಯವಾಗಿ ಬಂಧಿಸಿದ್ದಾರೆ. ರೈಲಿನಲ್ಲಿ ಸಾಗಾಟವಾಗುತ್ತಿದ್ದ ಅನೇಕ ಮಕ್ಕಳನ್ನು ಸಂರಕ್ಷಣೆ ಮಾಡಿ ಸರ್ಕಾರಕ್ಕೆ ಒಪ್ಪಿಸಿದ್ದಾರೆ.
Advertisement. Scroll to continue reading.