ಅಪರೂಪಕ್ಕೆ ಒಮ್ಮೆ ಅಂದರ್ ಬಾಹರ್ ಆಡುತ್ತಿದ್ದ ಯಲ್ಲಾಪುರದ ರವೀಂದ್ರ ನಗರದ ಹುಡುಗರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಗೌಂಡಿ, ಸೆಂಟ್ರಿoಗ್ ಹಾಗೂ ಕೂಲಿ ಕೆಲಸ ಮಾಡುತ್ತಿದ್ದ 10 ಜನ ಈ ವೇಳೆ ಸಿಕ್ಕಿ ಬಿದ್ದಿದ್ದಾರೆ.
ರವೀಂದ್ರ ನಗರದ ನಾಗರಾಜ ಪರಶುರಾಮ ಬೋವಿವಡ್ಡರ್, ಮನೋಜ ಕರಿಯಪ್ಪ ಹರನಾಳಗಿ, ಉದಯ ಪಾಂಡುರoಗ ಬೋವಿವಡ್ಡರ್, ವೆಂಕಟೇಶ ರೇನಪ್ಪಾ ಬೋವಿವಡ್ಡರ್, ಶಂಕರ್ ದುರ್ಗಪ್ಪಾ ಬೋವಿವಡ್ಡರ್, ಸೂರಜ್ ಪಾಂಡುರoಗ ಬೋವಿವಡ್ಡರ್, ಕಿರಣ ಹನುಮಂತ ಬೋವಿವಡ್ಡರ್, ನಾಗರಾಜ ಹನುಮಂತಪ್ಪ ಬೋವಿವಡ್ಡರ್, ಚಂದ್ರು ರೇಣಪ್ಪ ಬೋವಿವಡ್ಡರ್ ಹಾಗೂ ಪವನ್ ರಾಜು ಬೋವಿವಡ್ಡರ್ ಅವರು ಗಣೇಶ ಹಬ್ಬದ ಕಾರಣ ಒಂದಾಗಿದ್ದರು. ಎಲ್ಲರಿಗೂ ಬಿಡುವು ಸಿಕ್ಕ ಕಾರಣ ಅವರೆಲ್ಲರೂ ಅಂದರ್ ಬಾಹರ್ ಆಟ ಆಡಲು ನಿರ್ಧರಿಸಿದ್ದರು. ಅದರಂತೆ, ಸೆಪ್ಟೆಂಬರ್ 14ರ ರಾತ್ರಿ 8.30ಕ್ಕೆ ಪಿಎಲ್ಡಿ ಬ್ಯಾಂಕಿನ ಬಳಿ ಎಲ್ಲರೂ ಸೇರಿದ್ದರು. ಅಲ್ಲಿಯೇ ಅವರು ಇಸ್ಪಿಟ್ ಆಟ ಶುರು ಮಾಡಿದ್ದರು.
ಇಸ್ಪಿಟ್ ಮಂಡದ ಮೇಲೆ ಅವರೆಲ್ಲರೂ ಸೇರಿ ಹಣ ಹೂಡಿದ್ದರು. ಅಲ್ಲಿ ಹಣ ಹಾಕಿ ಆಟ ಆಡುತ್ತಿರುವುದನ್ನು ನೋಡಿದ ವ್ಯಕ್ತಿಯೊಬ್ಬರು ಪೊಲೀಸರಿಗೆ ಫೋನ್ ಮಾಡಿದರು. ಪಿಸೈ ರಾಜಶೇಖರ ವಂದಲಿ ಅವರು ತಮ್ಮ ತಂಡದ ಜೊತೆ ಅಲ್ಲಿ ದಾಳಿ ಮಾಡಿದರು. ಅಂದರ್ ಬಾಹರ್ ಆಡುತ್ತಿದ್ದ ಆ 10 ಜನರನ್ನು ವಶಕ್ಕೆಪಡೆದರು. ಆ ಎಲ್ಲರೂ 22ರಿಂದ 38ವರ್ಷದೊಳಗಿನವರೆ ಆಗಿದ್ದು, ಕಾನೂನುಬಾಹಿರ ಕ್ರೀಡೆಯಲ್ಲಿ ತೊಡಗದಂತೆ ಪೊಲೀಸರು ಬುದ್ದಿಯನ್ನು ಹೇಳಿದರು. ಮಂಡದ ಮೇಲಿದ್ದ 3400ರೂ ಹಣವನ್ನು ವಶಕ್ಕೆಪಡೆದ ಪೊಲೀಸರು ಇನ್ನಿತರ ಸಲಕರಣೆಗಳನ್ನು ಜಪ್ತು ಮಾಡಿದರು. ಜೊತೆಗೆ ಆ 10 ಜನರ ವಿರುದ್ಧ ಕೇಸು ದಾಖಲಿಸಿದರು.