ಓಸಿ-ಮಟ್ಕಾ ವಿರುದ್ಧ ಸಮರ ಸಾರಿದ ಭಟ್ಕಳ ಪೊಲೀಸರು ಒಂದೇ ದಿನ ಹಲವು ಕಡೆ ದಾಳಿ ಮಾಡಿದ್ದಾರೆ. ಒಟ್ಟು ಆರು ಕಡೆ ಮಟ್ಕಾ ಆಡಿಸುವವರನ್ನು ಹಿಡಿದು ಕೇಸು ಹಾಕಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಓಸಿ-ಮಟಕಾ ಜುಗಾರಾಟ ನಡೆಸುತ್ತಿದ್ದ ಆರೋಪದ ಮೇರೆಗೆ ಭಟ್ಕಳ ಗ್ರಾಮೀಣ ಹಾಗೂ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರು ಜನರ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಹಡೀಲ್-ಸಬ್ಬತ್ತಿ ನಿವಾಸಿ, ಕೂಲಿ ಕಾರ್ಮಿಕ ಪುಂಡಲೀಕ ಈರಪ್ಪ ನಾಯ್ಕ (42) ವಿರುದ್ಧ ಪ್ರಕರಣ ದಾಖಲಾಗಿದೆ. ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸAಖ್ಯೆಗಳ ಮೇಲೆ ಪಂಥ ಕಟ್ಟಿಸಿ ಓಸಿ ಜುಗಾರಾಟ ನಡೆಸುತ್ತಿದ್ದ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅವರ ಬಳಿಯಿಂದ ಓಸಿ ಚೀಟಿ, ಬಾಲ್ ಪೆನ್ ಹಾಗೂ 210ರೂ ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬAಧ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 78(3)ರಡಿ ಪ್ರಕರಣ ದಾಖಲಿಸಲಾಗಿದೆ.
ತಲಾಂದ ನಿವಾಸಿ, ಬೀಡಾ ವ್ಯಾಪಾರಿ ನಾಗರಾಜ ನಾರಾಯಣ ನಾಯ್ಕ (34) ಸಾರ್ವಜನಿಕರಿಂದ ಹಣ ಪಡೆದು ಓಸಿ-ಮಟಕಾ ಜುಗಾರಾಟ ನಡೆಸುತ್ತಿದ್ದ ಆರೋಪದ ಮೇರೆಗೆ ಸಿಕ್ಕಿಬಿದ್ದಿದ್ದು, ಅವರಿಂದ 510 ನಗದು ಹಾಗೂ ಜುಗಾರಾಟಕ್ಕೆ ಬಳಸುತ್ತಿದ್ದ ಸಲಕರಣೆಗಳನ್ನು ವಶಕ್ಕೆ ಪಡೆದಿದ್ದಾರೆ. ಮೂಡ ಶಿರಾಲಿ ನಿವಾಸಿ, ಪಾನಶಾಪ್ ಉದ್ಯೋಗಿ ಉದಯ ನಾಗಪ್ಪ ನಾಯ್ಕ (32) ವಿರುದ್ಧವೂ ಪ್ರಕರಣ ದಾಖಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಓಸಿ-ಮಟಕಾ ಜುಗಾರಾಟ ನಡೆಸುತ್ತಿದ್ದ ವೇಳೆ ಅವರಿಂದ 520 ನಗದು ಹಾಗೂ ಜುಗಾರಾಟದ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಾಲಿ ತಗ್ಗರಗೋಡ ನಿವಾಸಿ, ಪಾನಶಾಪ್ ಉದ್ಯೋಗಿ ಮಂಜುನಾಥ ನಾರಾಯಣ ನಾಯ್ಕ (40) ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರಿಂದ 480 ನಗದು ಹಾಗೂ ಓಸಿ-ಮಟಕಾ ಜುಗಾರಾಟದ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿದೆ. ಮಾವಿನಕುರ್ವೆ ಬೆಳ್ನೆ ನಿವಾಸಿ, ಬೀಡಾ ವ್ಯಾಪಾರಿ ಪ್ರಮೋದ ಗೋಯ್ದ ನಾಯ್ಕ (34) ವಿರುದ್ಧವೂ ಪ್ರಕರಣ ದಾಖಲಾಗಿದೆ. ಸಾರ್ವಜನಿಕ ರಸ್ತೆಯ ಬದಿಯಲ್ಲಿ ಓಸಿ-ಮಟಕಾ ಜುಗಾರಾಟ ನಡೆಸುತ್ತಿದ್ದ ವೇಳೆ ಅವರಿಂದ 500 ನಗದು ಹಾಗೂ ಜುಗಾರಾಟದ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ ತಲಗೇರಿಯ ನಾಗರಾಜ ವೆಂಕಟಪ್ಪ ನಾಯ್ಕ ಅವರು ಮಟ್ಕಾ ಆಡಿಸುವಾಗ ಕೋಲಾ ಪ್ಯಾರಿಡೈಸ್ ಬಳಿ ಸಿಕ್ಕಿ ಬಿದ್ದಿದ್ದಾರೆ. ಅವರಿಂದ ಪೊಲೀಸರು 820ರೂ ವಶಕ್ಕೆಪಡೆದಿದ್ದಾರೆ.