ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರ ಕಾರಿನಲ್ಲಿ ಈ ದಿನ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮೊಮ್ಮಗ ಶಶಿಭೂಷಣ ಹೆಗಡೆ ಅವರು ಕಾಣಿಸಿಕೊಂಡಿದ್ದಾರೆ. ಲಕ್ಷ್ಮಣ ಸವದಿ ಅವರು ರಾಮಕೃಷ್ಣ ಹೆಗಡೆ ಅವರ ಶಿಷ್ಯರಾಗಿದ್ದು, ಶಿಕ್ಷಕರ ದಿನಾಚರಣೆ ಅವಧಿಯಲ್ಲಿ ಗುರುವಿನ ಮೊಮ್ಮಗನಿಗೆ ಅವರು ವಿಶೇಷ ಆದ್ಯತೆ ನೀಡಿರುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ.
Advertisement. Scroll to continue reading.
ಡಿಕೆ ಶಿವಕುಮಾರ ಅವರ ಸರ್ಕಾರ ಈಚೆಗೆ ಕಾರವಾರ ಮೆಡಿಕಲ್ ಕಾಲೇಜಿಗೆ ರಾಮಕೃಷ್ಣ ಹೆಗಡೆ ಅವರ ಹೆಸರಿಟ್ಟಿದೆ. ಲಕ್ಷ್ಮಣ ಸವದಿ ಅವರು ಸಹ ಕಳೆದ ಬಾರಿ ಕಾರವಾರಕ್ಕೆ ಭೇಟಿ ನೀಡಿದಾಗ `ನಾನು ರಾಮಕೃಷ್ಣ ಹೆಗಡೆ ಅವರ ಶಿಷ್ಯ’ ಎಂದು ಒತ್ತಿ ಹೇಳಿದ್ದಾರೆ. ಹವ್ಯಕ ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಡೆ ಎಲ್ಲಾ ಸಮುದಾಯದ ಅಭಿಮಾನಿಗಳಿದ್ದು, ಅವರನ್ನು ಬಳಸಿಕೊಂಡು ಕಾಂಗ್ರೆಸ್ ರಾಜಕೀಯದಲ್ಲಿ ಹೊಸ ಮುಖಕ್ಕೆ ಅವಕಾಶ ನೀಡಲಾಗುತ್ತದೆಯೇ? ಎಂಬ ಪ್ರಶ್ನೆ ಇದೀಗ ಉದ್ಬವಿಸಿದೆ.
ಶಶಿಭೂಷಣ ಹೆಗಡೆ ಅವರು ಈ ಹಿಂದೆ ಎರಡು ಬಾರಿ ಕುಮಟಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಒಮ್ಮೆ ಶಿರಸಿ ವಿಧಾನಸಭಾ ಕ್ಷೇತ್ರದಿಂದಲೂ ಅಖಾಡಕ್ಕೆ ಇಳಿದಿದ್ದರು. ಸೋಲಿನ ನಂತರ ಅವರು ಯಾವ ಪಕ್ಷದ ಚಟುವಟಿಕೆಯಲ್ಲಿ ಸಕ್ರೀಯವಾಗಿರಲಿಲ್ಲ. ರಾಜಕೀಯ ಚಟುವಟಿಕೆಗಳಿಂದಲೂ ಅವರು ದೂರವೇ ಉಳಿದಿದ್ದರು. ರಾಮಕೃಷ್ಣ ಹೆಗಡೆ ಅವರ ಮೊಮ್ಮಗನಾಗಿದ್ದರೂ ರಾಜಕೀಯವಾಗಿ ಅವರು ಬೆಳೆದಿರಲಿಲ್ಲ. ಸದ್ಯ ಅವರು ಲಕ್ಷಣ ಸವದಿ ಅವರ ಜೊತೆ ಕಾರು ಏರಿದ್ದು, ಶಶಿಭೂಷಣ ಹೆಗಡೆ ಅವರನ್ನು ಕಾಂಗ್ರೆಸ್’ಗೆ ತರುವ ಪ್ರಯತ್ನ ನಡೆದ ಹಾಗಿದೆ. ಲೋಕಸಭಾ ಚುನಾವಣೆ ಅವಧಿಯಲ್ಲಿ ಕಾಂಗ್ರೆಸ್ ಅವರನ್ನು ಬಳಸಿಕೊಳ್ಳಲಿದೆ ಎಂಬ ಮಾತು ಈ ದಿನ ಹರಿದಾಡಿದೆ.
Advertisement. Scroll to continue reading.
ಶಶಿಭೂಷಣ ಹೆಗಡೆ ಅವರ ಪಕ್ಕ ಕಾರವಾರ ಶಾಸಕ ಸತೀಶ್ ಸೈಲ್ ಅವರು ಸಹ ಸಚಿವರ ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ. ಕಾರಿನಲ್ಲಿ ಸಂಚರಿಸುವಾಗಲೇ ಶಶಿಭೂಷಣ ಹೆಗಡೆ, ಲಕ್ಷಣ ಸವದಿ ಹಾಗೂ ಸತೀಶ್ ಸೈಲ್ ಕೆಲ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.