`ಕರಾವಳಿ ಹಾಗೂ ಮಲೆನಾಡು ಭಾಗದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಲ್ಲಿನ ಸಮಸ್ಯೆಗಳ ಬಗ್ಗೆ ಈಗಾದರೂ ಗಮನಹರಿಸಬೇಕು’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟ ಸಂಘಟನೆಗಳ ರಾಜ್ಯ ಸಮಿತಿಯ ಅಧ್ಯಕ್ಷ ಚಂದ್ರಕಾoತ ಕೊಚರೇಕರ ಅವರು ಆಗ್ರಹಿಸಿದ್ದಾರೆ.
`ಉತ್ತರ ಕನ್ನಡ, ಶಿವಮೊಗ್ಗ ಸೇರಿ ಕರಾವಳಿ-ಮಲೆನಾಡಿನ ಬಹುತೇಕ ಜನ ವಸತಿ ಹಾಗೂ ಜೀವನೋಪಾಯಕ್ಕಾಗಿ ಅರಣ್ಯವನ್ನು ಆಶ್ರಯಿಸಿದ್ದಾರೆ. ತಲೆತಲಾಂತರಗಳಿAದ ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. 1980ರಅರಣ್ಯ ಸಂರಕ್ಷಣ ಕಾಯ್ದೆಯಡಿ ಅವರ ಒತ್ತುವರಿಗಳನ್ನು ಸಕ್ರಮಪಡಿಸಲು ಸಾಕಷ್ಟು ಅವಕಾಶಗಳಿದ್ದರೂ ಸರ್ಕಾರ ಅದರ ಲಾಭ ದೊರಕಿಸಿಕೊಟ್ಟಿಲ್ಲ. ಅರಣ್ಯ ಹಕ್ಕು ಕಾಯ್ದೆಯ ಸೌಲಭ್ಯವೂ ಸಹ ಮರಿಚಿಕೆಯಾಗಿದೆ’ ಎಂದವರು ಅಸಮಧಾನವ್ಯಕ್ತಪಡಿಸಿದ್ದಾರೆ. `ಸ್ಥಳ ಮಹಜರು ಪ್ರಕ್ರಿಯೆಗಳ ಮೂಲಕ ಸ್ಥಳದಲ್ಲಿನ ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿ ಅರ್ಹರಿಗೆ ಭೂಮಿಯ ಅಧಿಭೋಗದ ಹಕ್ಕುನೀಡಲು ಪರಿಗಣಿಸಬೇಕೆಂದು ಇತ್ತೀಚೆಗೆ ರಾಜ್ಯದ ಮುಖ್ಯ ಕಾರ್ಯದರ್ಶೀಯವರೇ ಖುದ್ದಾಗಿ ಆದೇಶ ಮಾಡಿದರೂ ಅದರ ಅನುಷ್ಠಾನ ಆಗಿಲ್ಲ’ ಎಂದವರು ಕಿಡಿಕಾರಿದ್ದಾರೆ.
`ಪಂಚಾಯತ್ ರಾಜ್ ತಿದ್ದುಪಡಿ ಅಧಿನಿಯಮ 2025ರ ಪ್ರಕರಣ 199(ಸಿ) ಕಾನೂನು ಮಾಡುವಾಗ ಅಂದು ದಿವ್ಯ ಮೌನ ವಹಿಸಿದವರು ಅರಣ್ಯ,ಸರಕಾರಿ, ಗಾಂವಠಾಣಾ, ಬೆಟ್ಟ ಭೂಮಿಯಲ್ಲಿನ ನಿವಾಸಗಳನ್ನು ಹೊಂದಿರುವ ಕಾರಣಕ್ಕಾಗಿ ಅವುಗಳನ್ನು ತೆರಿಗೆ ಪಟ್ಟಿಯಿಂದ ಕೈಬಿಡಬೇಕೆನ್ನುವ ಸುತ್ತೋಲೆಯ ನಂತರ ನಡೆಯುತ್ತಿರುವ ಬೆಳವಣಿಗೆಗಳು ನಮ್ಮ ಜಡ್ಠುಗಟ್ಟಿದ ಆಡಳಿತ ವ್ಯವಸ್ಥೆಗೆ ಕನ್ನಡಿ ಹಿಡಿದಂತಿದೆ. ಆದ್ದರಿಂದ ಈಗಲಾದರೂಆಗಿರುವ ಪ್ರಮಾದವನ್ನು ಮರೆತು 2005ರ ಪೂರ್ವದ ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂಮಿಯ ಅಧಿಭೋಗದ ಹಕ್ಕು ಕೊಡಿಸಲು ಮತ್ತು ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವ್ಯಾಪ್ತಿಯಿಂದ ಕೈಬಿಡಲು ಕ್ರಮ ಜರುಗಿಸಬೇಕು. ಅರಣ್ಯ ಹಕ್ಕುಕಾಯ್ದೆ ಹಾಗೂ ಪರಿಸರ ಸೂಕ್ಷ್ಮ ಪ್ರದೇಶದ ಕರಡು ಅಧಿಸೂಚನೆಗೆ ಅಗತ್ಯ ತಿದ್ದುಪಡಿ ತರಲು ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವಪಕ್ಷಗಳ ಜನಪ್ರತಿನಿಧಿಗಳ ನಿಯೋಗವನ್ನು ಒಯ್ದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು’ ಎಂದವರು ಒತ್ತಾಯಿಸಿದ್ದಾರೆ. ಪಂಚಾಯತ ರಾಜ್ ತಿದ್ದುಪಡಿ ಅಧಿನಿಯಮ 2025ರ ಪ್ರಕರಣ 199ಸಿ(1)ರ ಪ್ರಕರಣಕ್ಕೆ ಅಗತ್ಯ ತಿದ್ದುಪಡಿ ತಂದು ಜನರ ಹಕ್ಕು, ವಾಸದ ಭದ್ರತೆ ಮತ್ತು ಪಂಚಾಯತಗಳ ಆದಾಯ ಈ ಮೂರನ್ನೂ ಸಮತೋಲನಗೊಳಿಸಲು ಸರ್ಕಾರ ಮದ್ಯಪ್ರವೇಶ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.