ಅಂಕೋಲಾ ಬೇಲಿಕೇರಿಯ ಶೋಭಾ ನಾಯ್ಕ ಹಾಗೂ ಹಟ್ಟಿಕೇರಿಯ ಸಾವಿತ್ರಿ ಗೌಡ ಅವರು ರೇಬಿಸ್ ಸೋಂಕಿತ ನಾಯಿ ಕಡಿತದಿಂದ ಸಾವನಪ್ಪಿದ್ದು, ಈವರೆಗೂ ಅವರ ಕುಟುಂಬಕ್ಕೆ ಸರ್ಕಾರದಿಂದ ಬರಬೇಕಾದ 5 ಲಕ್ಷ ರೂ ಹಣ ಬಂದಿಲ್ಲ. ಕಳೆದ ಎಂಟು ತಿಂಗಳಿನಿoದ ಅವರ ಕುಟುಂಬದವರು ಪರಿಹಾರ ಪಡೆಯುವುದಕ್ಕಾಗಿ ಅಲೆದಾಡುತ್ತಿದ್ದಾರೆ.
Advertisement. Scroll to continue reading.
ಅರ್ಜಿ ಸಲ್ಲಿಸಿದರೂ ಪರಿಹಾರ ಬಾರದಿರುವ ಬಗ್ಗೆ ಜನಶಕ್ತಿ ವೇದಿಕೆ ಸಚಿವರ ಗಮನಕ್ಕೆ ತಂದಿದ್ದು, ಈ ವೇಳೆ ಜಿಲ್ಲಾಡಳಿತದಿಂದ ಶೀಘ್ರದಲ್ಲಿಯೇ ಪರಿಹಾರ ಒದಗಿಸುವ ಭರವಸೆ ಸಿಕ್ಕಿದೆ. ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಶನಿವಾರ ನಡೆದ ಪ್ರಜಾ ಸೇವೆ ಕಾರ್ಯಕ್ರಮದಲ್ಲಿ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಈ ವಿಷಯದ ಬಗ್ಗೆ ಗಮನಸೆಳೆದಿದ್ದಾರೆ. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ ಅವರು `ಈ ವಿಷಯ ಈಗಾಗಲೇ ತಮ್ಮ ಗಮನದಲ್ಲಿದ್ದು, ಅಗತ್ಯ ಕ್ರಮ ಕೈಗೊಳ್ಳಿಸಿ ಅರ್ಹ ಕುಟುಂಬಗಳಿಗೆ ಆದಷ್ಟು ಬೇಗ ಪರಿಹಾರ ದೊರಕಿಸಿಕೊಡುವೆ’ ಎಂಬ ಭರವಸೆ ನೀಡಿದ್ದಾರೆ. ಈ ಭರವಸೆಯಿಂದ ಹಲವು ತಿಂಗಳುಗಳಿAದ ಪರಿಹಾರಕ್ಕಾಗಿ ಕಾಯುತ್ತಿದ್ದ ಕುಟುಂಬಗಳಿಗೆ ಹೊಸ ನಿರೀಕ್ಷೆ ಮೂಡಿದೆ.
`ಬಡ ಕುಟುಂಬದ ಇಬ್ಬರು ಮಹಿಳೆಯರು ರೇಬಿಸ್ ಸೋಂಕಿಗೆ ಬಲಿಯಾಗಿದ್ದು, ಕುಟುಂಬಗಳು ಸಂಕಷ್ಟದಲ್ಲಿವೆ. ಸರ್ಕಾರದ ನಿಯಮದಂತೆ ಸಿಗಬೇಕಾದ ಪರಿಹಾರಕ್ಕಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ವಿಳಂಬವಾಗಿದೆ. ಜಿಲ್ಲಾಧಿಕಾರಿಗಳು ನೀಡಿರುವ ಭರವಸೆಯಂತೆ ಶೀಘ್ರದಲ್ಲೇ ಪರಿಹಾರ ಮಂಜೂರಾಗಿ ಕುಟುಂಬಗಳಿಗೆ ತಲುಪಬೇಕು” ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರು ಸಚಿವ ಲಕ್ಷಣ ಸವದಿ ಅವರ ಬಳಿ ಒತ್ತಾಯಿಸಿದ್ದಾರೆ.
Advertisement. Scroll to continue reading.
ಪರಿಹಾರ ವಿತರಣೆಗೆ ಅಗತ್ಯವಿರುವ ಮರಣೋತ್ತರ ವರದಿ ಸೇರಿ ಇನ್ನೂ ಅನೇಕ ದಾಖಲೆಗಳನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಸಂಘಟನಾ ಕಾರ್ಯದರ್ಶಿ ನಿತ್ಯಾನಂದ ನಾಯ್ಕ್ ಸೇರಿದಂತೆ ರೇಬಿಸ್ ನಾಯಿ ಕಡಿತದಿಂದ ಮೃತಪಟ್ಟವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.