ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ತರಬೇತಿ ನೀಡುವ ಶ್ರೀರಾಮ ಸ್ಟಡಿ ಸರ್ಕಲ್ ವಿದ್ಯಾರ್ಥಿಗಳಿಬ್ಬರು ಕೇಂದ್ರ ಸರ್ಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ. `ಶ್ರೀರಾಮ ಸ್ಟಡಿ ಸರ್ಕಲ್’ನಲ್ಲಿ ಪಡೆದ ತರಬೇತಿಯೇ ಉನ್ನತ ಹುದ್ದೆಪಡೆಯಲು ಸಹಕಾರಿಯಾಗಿರುವುದಾಗಿ ಅವರು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಶ್ರೀರಾಮ ಸ್ಟಡಿ ಸರ್ಕಲ್ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಪ್ರಸಿದ್ಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವಾಗಿ ಇದು ಗುರುತಿಸಿಕೊಂಡಿದೆ. ಶ್ರೀರಾಮ ಸ್ಟಡಿ ಸರ್ಕಲ್ ಮೂಲಕ ಅನೇಕರು ಅನೇಕ ಬಗೆಯ ಅಧಿಕಾರಿಗಳಾಗಿದ್ದಾರೆ. ಇಲ್ಲಿ ಐಎಎಸ್ ಹಾಗೂ ಕೆಎಎಸ್ ತರಬೇತಿಯನ್ನು ನೀಡಲಾಗುತ್ತಿದ್ದು, ಈ ತರಬೇತಿಪಡೆದ ಭಟ್ಕಳ ಬೆಳ್ಳಿಯ ಗಣಪತಿ ಮಂಜುನಾಥ ಮೊಗೇರ್ ಹಾಗೂ ಹಾವೇರಿಯ ಸಚಿನ್ ರಾಮಪ್ಪ ಮಾಸೂರು ಅವರು ಕೇಂದ್ರ ಸರ್ಕಾರದ ಗೃಹ ಇಲಾಖೆಯ ಅಧಿಕಾರಿಗಳಾಗಿದ್ದಾರೆ.
ಗಣಪತಿ ಮೊಗೇರ ಅವರು ಈ ಮೊದಲು ಸೈನಿಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅದಕ್ಕೂ ಪೂರ್ವ ರಾಜ್ಯ ಸರ್ಕಾರದ ಮೂರು ಹುದ್ದೆಗಳಿಗೆ ಸಹ ಅವರು ಆಯ್ಕೆಯಾಗಿದ್ದು, ಶ್ರೀರಾಮ ಸ್ಟಡಿ ಸರ್ಕಲ್’ಗೆ ಆಗಮಿಸಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಮುಗಿಸಿದ್ದಾರೆ. ಅದಾದ ನಂತರ ಅವರು ಕೇಂದ್ರ ಸರ್ಕಾರದ ಗೃಹ ಇಲಾಖೆಯ ಹುದ್ದೆಯ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿದ್ದಾರೆ. ಗಣಪತಿ ಮೊಗೇರ್ ಹಾಗೂ ಸಚಿನ್ ಮಾಸೂರು ಅವರ ಈ ಸಾಧನೆಯ ಬಗ್ಗೆ ಶ್ರೀರಾಮ ಸ್ಟಡಿ ಸರ್ಕಲ್ ಸಂಸ್ಥೆಯ ನಿರ್ದೇಶಕ ಸೂರಜ ನಾಯಕ ಅವರು ಮೆಚ್ಚುಗೆಯ ಮಾತನಾಡಿದ್ದಾರೆ.